Advertisement
ಪ್ರಿಯಾಂಕಾ ಹಾಕಿದ್ದ ಬ್ಯಾಗ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ ಪ್ಯಾಲೆಸ್ತೀನ್ ಎಂದು ಬರೆದಿರುವ ಜೊತೆಗೆ ಪ್ಯಾಲೆಸ್ತೀನಿಯರೊಂದಿಗಿನ ಒಗ್ಗಟ್ಟಿನ ಸಂಕೇತಗಳೂ ಇದ್ದವು. ಇದರಲ್ಲಿ ಕಲ್ಲಂಗಡಿ ಹಣ್ಣು ಕೂಡ ಇತ್ತು. ಇದು ಈ ಪ್ರದೇಶದಲ್ಲಿ ಪ್ರತಿರೋಧದ ಸುದೀರ್ಘ ಸ್ವೀಕೃತ ಸಂಕೇತ. ಜೊತೆಗೆ ಐಕಮತ್ಯ ಸಂಕೇತಿಸುವ ಲಾಂಛನಗಳು ಹೊಂದಿದ್ದವು. ಪ್ರಿಯಾಂಕಾ ಪ್ಯಾಲೆಸ್ತೀನಿಯನ್ ದೀರ್ಘಾವಧಿಯ ಪ್ರತಿಪಾದಕರಾಗಿದ್ದು, ಗಾಜಾದಲ್ಲಿನ ಸಂಘರ್ಷಕ್ಕೆ ತಮ್ಮ ವಿರೋಧವನ್ನೂ ಬಲವಾಗಿ ವ್ಯಕ್ತಪಡಿಸಿದ್ದಾರೆ.
Related Articles
ಪ್ಯಾಲೆಸ್ತೀನ್ ರಾಯಭಾರಿ ಭೇಟಿಯಾಗಿದ್ದ ಪ್ರಿಯಾಂಕಾ:
ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ ರಾಯಭಾರ ಕಚೇರಿಯ ಉಸ್ತುವಾರಿ ಅಬೆದ್ ಎಲ್ರಾಜೆಗ್ ಅಬು ಜಾಜರ್‌ರನ್ನು ಭೇಟಿಯಾಗಿದ್ದರು. ಈ ವೇಳೆ ಅವರು ಕಪ್ಪು ಮತ್ತು ಬಿಳಿ ಬಣ್ಣದ ಕೆಫಿಯೇಹ್ (ಸಾಂಪ್ರದಾಯಿಕ ಪ್ಯಾಲೆಸ್ತೀನಿಯನ್ ಶಾಲು) ಧರಿಸಿದ್ದರು. ವಯನಾಡು ಕ್ಷೇತ್ರದಿಂದ ಗೆದ್ದಿದ್ದಕ್ಕಾಗಿ ಪ್ರಿಯಾಂಕಾ ಗಾಂಧಿಯವರನ್ನು ಅಭಿನಂದಿಸಲು ಅಬು ಜಾಜರ್ ಬಂದಿದ್ದರು. ಈ ವೇಳೆ ಚರ್ಚೆಯ ಸಮಯದಲ್ಲಿ ಜಾಜರ್, ಗಾಜಾದಲ್ಲಿ ಯುದ್ಧ ವಿರಾಮಕ್ಕೆ ಭಾರತ ಒತ್ತಾಯಿಸಬೇಕು ಮತ್ತು ಗಾಜಾ ಪಟ್ಟಿಯ ಪುನರ್ ನಿರ್ಮಾಣದಲ್ಲಿ ನೆರವು ನೀಡಬೇಕು ಎಂದರು.
Advertisement
ಪ್ರಿಯಾಂಕಾ ಗಾಂಧಿ ಕೂಡ ಗಾಜಾ ಪಟ್ಟಿಯ ಮೇಲಿನ ಇಸ್ರೇಲ್ ದಾಳಿಯನ್ನೂ ಟೀಕಿಸಿ ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಹೇಳಿದ್ದಾರೆ. ಇದರೊಂದಿಗೆ ಗಾಜಾದಲ್ಲಿ ಶಾಂತಿ ಸ್ಥಾಪಿಸಲು ಮೋದಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.ನನಗೇನು ಬೇಕೋ ಅದನ್ನು ಧರಿಸುವೆ: ಪ್ರಿಯಾಂಕಾ ತಿರುಗೇಟು
“ಈ ಪಿತೃಪ್ರಧಾನ ವ್ಯವಸ್ಥೆಗೆ ತಲೆ ಬಾಗಲಾರೆ, ನನಗೆ ಏನು ಬೇಕೋ ಅದನ್ನು ಧರಿಸುತ್ತೇನೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅದರ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಅವಿವೇಕದ ಮಾತುಗಳನ್ನಾಡುವ ಅಗತ್ಯವಿಲ್ಲ ಎಂದು ಬಿಜೆಪಿ ಟೀಕೆಗೆ ಪ್ರಿಯಾಂಕಾ ತಿರುಗೇಟು ನೀಡಿದ್ದಾರೆ.