Advertisement

ಉರಿ, ಪಠಾಣ್ ಕೋಟ್ ದಾಳಿ; ಗುಪ್ತಚರ ಇಲಾಖೆ ಏನ್ ಮಾಡ್ತಿತ್ತು: ಸಮಿತಿ

06:30 PM Apr 16, 2017 | Sharanya Alva |

ನವದೆಹಲಿ:ಪಠಾಣ್ ಕೋಟ್, ಉರಿ ಹಾಗೂ ದೇಶದ ಇತರ ಭಾಗಗಳಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ತಡೆಯಲು ತಡೆಯಲು ಗುಪ್ತಚರ ಇಲಾಖೆಗೆ ಯಾಕೆ ಸಾಧ್ಯವಾಗಿಲ್ಲ, ಇದು ಗುಪ್ತಚರ ಇಲಾಖೆಯ ನ್ಯೂನತೆಯನ್ನು ಎತ್ತಿತೋರಿಸುತ್ತದೆ. ಆದರೆ ಗುಪ್ತಚರ ಇಲಾಖೆಯ ವೈಫಲ್ಯತೆ ಬಗ್ಗೆ ಯಾವುದೇ ವಿಶ್ಲೇಷಣೆ ನಡೆದಿಲ್ಲ ಎಂದು ಸಂಸದೀಯ ಸಮಿತಿ ತರಾಟೆಗೆ ತೆಗೆದುಕೊಂಡಿದೆ.

Advertisement

ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಪಿ.ಚಿದಂಬರಂ ನೇತೃತ್ವದ ಸಮಿತಿ ಅಸಮಾಧಾನ ವ್ಯಕ್ತಪಡಿಸಿದ್ದು, 2016ರ ಜನವರಿ 2ರಂದು ಪಠಾಣ್ ಕೋಟ್ ನಲ್ಲಿರುವ ಭಾರತೀಯ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿ ಒಂದು ವರ್ಷ ಕಳೆದಿದೆ. ಆದರೆ ರಾಷ್ಟ್ರೀಯ ತನಿಖಾ ದಳ ಇನ್ನೂ ತನಿಖೆಯನ್ನು ಪೂರ್ಣಗೊಳಿಸಿಲ್ಲ ಎಂದು ಹೇಳಿದೆ.

ಅಷ್ಟೇ ಅಲ್ಲ ಪಠಾಣ್ ಕೋಟ್, ಉರಿ, ಪ್ಯಾಂಪೋರ್, ಬಾರಾಮುಲ್ಲಾ ಮತ್ತು ನಗ್ರೋಟಾದಲ್ಲಿ ನಡೆದ ದಾಳಿ ಬಗ್ಗೆ ಗುಪ್ತಚರ ಇಲಾಖೆ ಯಾವುದೇ ನಂಬಿಕೆಯ ಮುನ್ನೆಚ್ಚರಿಕೆಯನ್ನು ನೀಡಿಲ್ಲ. ಹಾಗಾಗಿ ಗುಪ್ತಚರ ಇಲಾಖೆಯ ವೈಫಲ್ಯತೆ ಬಗ್ಗೆ ವಿಶ್ಲೇಷಣೆಯೂ ನಡೆದಿಲ್ಲ ಎಂದು ದೂರಿದೆ.

ಈ ದಾಳಿಯ ಹಿನ್ನೆಲೆಯಲ್ಲಿ ನಮ್ಮ ಗುಪ್ತಚರ ಇಲಾಖೆಯ ನ್ಯೂನತೆ ಬಯಲಾಗಿದೆ ಎಂಬುದು ಸಮಿತಿಯ ಅಭಿಪ್ರಾಯವಾಗಿದೆ ಎಂದು ತಿಳಿಸಿದೆ. ಪಠಾಣ್ ಕೋಟ್ ದಾಳಿಯಲ್ಲಿ 7 ಭದ್ರತಾ ಸಿಬ್ಬಂದಿಗಳು, ಉರಿ ದಾಳಿಯಲ್ಲಿ 19 ಯೋಧರು ಹುತಾತ್ಮರಾಗಿದ್ದರು. ಹಾಗಿದ್ದರೆ ನಮ್ಮ ಗುಪ್ತಚರ ಇಲಾಖೆ ಏನು ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next