Advertisement

ಬೆಟ್ಟಕುರುಬ ಜನಾಂಗಕ್ಕೆ ಎಸ್‌ಟಿ ಸ್ಥಾನಮಾನ

12:07 AM Dec 23, 2022 | Team Udayavani |

ನವದೆಹಲಿ: ಕರ್ನಾಟಕದಲ್ಲಿ ಪರಿಶಿಷ್ಟ ಜನಾಂಗದ ಪಟ್ಟಿಗೆ ಕಾಡು ಕುರುಬ ಜನಾಂಗದ ಜತೆಗೆ ಬೆಟ್ಟಕುರುಬ ಸಮುದಾಯವನ್ನೂ ಸೇರಿಸುವ ವಿಧೇಯಕಕ್ಕೆ ಸಂಪುಟದ ಅಂಗೀಕಾರ ದೊರೆತಿದೆ.

Advertisement

ಸಾಂವಿಧಾನಿಕ (ಪರಿಶಿಷ್ಟ ಜನಾಂಗಗಳು) ಆದೇಶ (4ನೇ ತಿದ್ದುಪಡಿ) ವಿಧೇಯಕ, 2022 ಗುರುವಾರ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ. ಡಿ.19ರಂದು ಈ ವಿಧೇಯಕವು ಲೋಕಸಭೆಯಲ್ಲಿ ಪಾಸ್‌ ಆಗಿತ್ತು.

ಕರ್ನಾಟಕದಲ್ಲಿ ಕೇವಲ 5 ಸಾವಿರ ಮಂದಿ ಬೆಟ್ಟ ಕುರುಬ ಸಮುದಾಯಕ್ಕೆ ಸೇರಿದ್ದಾರೆ. ಈ ವಿಧೇಯಕವು ಅವರಿಗೆ ನ್ಯಾಯ ಒದಗಿಸಲಿದೆ. ಕರ್ನಾಟಕ ಸರ್ಕಾರದ ಕೋರಿಕೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಯಿತು ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾ ಹೇಳಿದ್ದರು.

ಈ ವಿಧೇಯಕ ಈಗ ಅಂಗೀಕಾರಗೊಂಡಿರುವ ಕಾರಣ, ಪರಿಶಿಷ್ಟ ಪಂಗಡಗಳಿಗೆ ಸಿಗುವ ಎಲ್ಲ ಸೌಲಭ್ಯಗಳೂ ಇನ್ನು ಮುಂದೆ ಬೆಟ್ಟಕುರುಬ ಸಮುದಾಯಕ್ಕೂ ಲಭ್ಯವಾಗಲಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯೂ ಸಿಗಲಿದೆ.

ಈ ನಡುವೆ, ತಮಿಳುನಾಡಿನ ನರಿಕೊರವನ್‌ ಮತ್ತು ಕುರಿವಿಕ್ಕರನ್‌ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ವಿಧೇಯಕವೂ ರಾಜ್ಯಸಭೆಯಲ್ಲಿ ಗುರುವಾರ ಅನುಮೋದನೆಗೊಂಡಿದೆ.

Advertisement

ಇದೇ ವೇಳೆ, ಕೆಲವೊಂದು ಕ್ಷುಲ್ಲಕ ಅಪರಾಧಗಳನ್ನು “ಕ್ರಿಮಿನಲ್‌ ಅಪರಾಧ ಪಟ್ಟಿ’ಯಿಂದ ಹೊರಗಿಡುವ ಪ್ರಸ್ತಾಪವುಳ್ಳ ವಿಧೇಯಕವನ್ನು ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಗುರುವಾರ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಈ ವಿಧೇಯಕ ಮಂಡಿಸುತ್ತಿರುವುದಾಗಿ ಹೇಳಿದ್ದಾರೆ. ನಂತರ, ಇದನ್ನು ಪರಿಶೀಲನೆಗಾಗಿ ಸಂಸತ್‌ನ 31 ಸದಸ್ಯರ ಜಂಟಿ ಸಮಿತಿಗೆ ಒಪ್ಪಿಸಲಾಯಿತು.

ಬೆಟ್ಟಕುರುಬ ಸಮುದಾಯದಂತೆ ಅನೇಕ ಬುಡಕಟ್ಟು ಸಮುದಾಯಗಳಿದ್ದು, ಅದನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನಹರಿಸುವುದು ಅಗತ್ಯವಿದೆ.-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next