Advertisement

Parliament: ಸ್ಪೀಕರ್‌ನತ್ತ ನುಗ್ಗುತ್ತಿದ್ದವನನ್ನು ನಾನೇ ತಡೆದೆ: ಮುನಿಸ್ವಾಮಿ

01:06 AM Dec 14, 2023 | Team Udayavani |

ಕೋಲಾರ: ಸಂಸತ್‌ ಕಲಾಪಕ್ಕೆ ಪ್ರವೇಶಿಸಿ ಸ್ಪೀಕರ್‌ ಆಸನದತ್ತ ನುಗ್ಗುತ್ತಿದ್ದ ಅಪರಿಚಿತನನ್ನು ನಾನೇ ತಡೆದು ನಿಲ್ಲಿಸಿದೆ. ಆ ವೇಳೆಗಾಗಲೇ ಆತ ತನ್ನ ಶೂನಿಂದ ವಸ್ತೊಂದನ್ನು ತೆರೆದು ಹಳದಿ ಹೊಗೆ

Advertisement

ಸೂಸುವಂತೆ ಮಾಡಿಬಿಟ್ಟ. ಆದರೂ ಇತರ ಸಂಸದರ ಸಹಕಾರದೊಂದಿಗೆ ಆತನನ್ನು ಹಿಡಿದು ಭದ್ರತಾ ಸಿಬಂದಿಗೆ ಒಪ್ಪಿಸಲಾಯಿತು.

ಸಂಸತ್ತಿನಲ್ಲಿ ಬುಧವಾರ ನಡೆದ ಘಟನೆ ಸಂಬಂ ಧಿಸಿ ಕೋಲಾರ ಸಂಸದ ಎಸ್‌.ಮುನಿಸ್ವಾಮಿ “ಉದಯವಾಣಿ”ಗೆ ನೀಡಿದ ಮಾಹಿತಿ ಇದು.

ಬುಧವಾರ ಮಧ್ಯಾಹ್ನ ಪ್ರಶ್ನೋತ್ತರ ನಡೆಯುತ್ತಿತ್ತು. ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಸಂಸತ್ತಿನೊಳಕ್ಕೆ ಜಿಗಿದಿದ್ದರು. ಇದರಿಂದ ಸಂಸದರು ಗದ್ದಲ ಆರಂಭಿಸಿದ್ದರು. ನಳಿನ್‌ ಕುಮಾರ್‌ ಕಟೀಲು ಹಾಗೂ ಇತರರು ಆತನನ್ನು ಅಲ್ಲಿಯೇ ತಡೆಯುವ ಪ್ರಯತ್ನ ಮಾಡುತ್ತಿದ್ದರು. ಐದಾರು ಮಂದಿ ಆತನನ್ನು ಹಿಡಿಯುವ ಪ್ರಯತ್ನದಲ್ಲಿದ್ದಾಗಲೇ ಆತ ಶೂನಿಂದ ಹಳದಿ ಹೊಗೆ ಚಿಮ್ಮಿಸುವ ವಸ್ತುವನ್ನು ಎಸೆದು ಬಿಟ್ಟಿದ್ದ. ಗಾಬರಿಯಲ್ಲಿದ್ದಾಗಲೇ ಮತ್ತೂಬ್ಬ ಟೇಬಲ್‌ ಹಾರುತ್ತಾ ಸ್ಪೀಕರ್‌ ಪೀಠದತ್ತ ಜಿಗಿದು ನುಗ್ಗುತ್ತಿದ್ದ ಆತನನ್ನು ನಾನೇ ಅಡ್ಡಗಟ್ಟಿದೆ.

ಖಲಿಸ್ಥಾನ್‌ ಬೆಂಬಲಿಗರು ಮೊದಲೇ ಬೆದರಿಕೆ ಹಾಕಿದ್ದರು. ಸಂಸತ್ತಿನ ಮೇಲೆ ದಾಳಿ ನಡೆಸಿ ಇಂದಿಗೆ 22 ವರ್ಷ ಆಗಿದ್ದರಿಂದ ಅಂದು ಹುತಾತ್ಮರಾಗಿದ್ದ 9 ಮಂದಿಗೆ ಹೂವು ಹಾಕಿ ಗೌರವ ಸಲ್ಲಿಸಿ ಸಂಸತ್ತಿಗೆ ಬಂದಿದ್ದೆವು.

Advertisement

ಸಂಸತ್ತಿಗೆ ಜಿಗಿದ ಇಬ್ಬರೂ ಜಾಕೆಟ್‌ ಧರಿಸಿದ್ದರು. ಅವರಲ್ಲಿ ಏನಿತ್ತು ಎಂಬ ಆತಂಕ ಇತ್ತು. ಆದ್ದರಿಂದ ಏನಾದರೂ ಪರವಾಗಿಲ್ಲ ಎಂದು ತುರ್ತಾಗಿ ಹಿಡಿದು ಭದ್ರತಾ ಸಿಬಂದಿಗೆ ಒಪ್ಪಿಸಿದ್ದೆವು. ಸಂಸತ್ತಿನಲ್ಲಿ ಹೊಗೆ ಹರಡಿದ್ದರಿಂದ ಅದು ಹೊರಗೆ ಹೋಗಲಿ ಎಂಬ ಕಾರಣಕ್ಕೆ ಬಾಗಿಲುಗಳನ್ನು ತೆರೆದಿದ್ದರು. ಅಪರಾಧ ಪತ್ತೆ ತಾಂತ್ರಿಕ ಸಿಬಂದಿ, ದಿಲ್ಲಿ ಕಮಿಷನರ್‌ ಹಾಗೂ ಇತರ ಪೊಲೀಸ್‌ ಅಧಿಕಾರಿಗಳು ಆಗಮಿಸಿ ತನಿಖೆ ಆಗಮಿಸಿದರು. ಮತ್ತೆ ಸಂಸತ್‌ ಆರಂಭವಾಯಿತು.

ಒಳಗೆ ನುಗ್ಗಿದವರು ಸಂಸದ ಪ್ರತಾಪ್‌ಸಿಂಹ  ಅವರ ಪಾಸ್‌ನೊಂದಿಗೆ ಬಂದಿದ್ದರೆಂದು ಹೇಳಲಾಗುತ್ತಿದೆ. ಪಾರ್ಲಿಮೆಂಟ್‌ ನೋಡಲು ಬಂದಾಗ ಪಾಸ್‌ ನೀಡಲಾಗುತ್ತದೆ. ಏನೇ ಪಾಸ್‌ ನೀಡಿದರೂ ಭದ್ರತಾ ಸಿಬಂದಿ ಪರಿಶೀಲಿಸಿ ಬಿಡಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಇಬ್ಬರೂ ಸ್ಮೋಕ್‌ ಬಾಂಬ್‌ ಎತ್ತಿಕೊಂಡು ಬಂದಿದ್ದಾರೆ. ಹೊರಗಡೆಯೂ  ಕೆಲವರಿದ್ದು, ಅವರನ್ನು ಬಂಧಿಸಿರುವುದು ತಿಳಿದಿದೆ. ಬಂಧಿತರು ಯಾರು ಯಾವ ಪಕ್ಷದವರು, ಅವರ ಉದ್ದೇಶವೇನು, ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ಮೋದಿ ಹೆಸರಿಗೆ ಮಸಿ ಬಳಿಯಲು ಕೃತ್ಯ ನಡೆಸಲಾಗಿದೆಯೇ, ವಿರೋಧಿಗಳ ಕೈವಾಡ ಇದೆಯೇ ಇತ್ಯಾದಿಯಾಗಿ ತನಿಖೆ ನಡೆಸಲಾಗುತ್ತಿದೆ.

ಕೆ.ಎಸ್‌. ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next