Advertisement

Parliament committee: ರಕ್ಷಣೆಗೆ ರಾಹುಲ್‌, ಕಂಗನಾಗೆ ಐಟಿ

01:32 AM Sep 28, 2024 | Team Udayavani |

ಹೊಸದಿಲ್ಲಿ: 24 ಪ್ರಮುಖ ಸಮಿತಿಗಳ ರಚನೆಯೊಂದಿಗೆ ಸಂಸತ್ತು ಗುರುವಾರ ತನ್ನ ಸ್ಥಾಯಿ ಸಮಿತಿಯನ್ನು ಪುನಾ
ರಚಿ ಸಿದೆ. ಅದರಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರನ್ನು ರಕ್ಷಣೆಗೆ ಸಂಬಂಧಿಸಿದ ಸಮಿತಿಯಲ್ಲಿ ಸದಸ್ಯರನ್ನಾಗಿ ಮುಂದುವರಿಸಲಾಗಿದೆ. ಹಿಂದಿನ ಲೋಕಸಭೆಯಲ್ಲಿ ಕೂಡ ರಾಹುಲ್‌ ಇದೇ ಸಮಿತಿಯಲ್ಲಿದ್ದರು. ಬಿಜೆಪಿ ಸಂಸದ ರಾಧಾ ಮೋಹನ್‌ ಸಿಂಗ್‌ ಅವರಿಗೆ ಈ ಸಮಿತಿ ಅಧ್ಯಕ್ಷತೆ ನೀಡಲಾಗಿದೆ. ಹಿಮಾ ಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ-ನಟಿ ಕಂಗನಾ ರಣೌತ್‌ ಮಾಹಿತಿ ತಂತ್ರ ಜ್ಞಾನ ಸಮಿತಿಗಾಗಿ ಇರುವ ಸಂಸತ್‌ ಸ್ಥಾಯಿ ಸಮಿತಿ ಸದಸ್ಯೆಯಾಗಿದ್ದಾರೆ. ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಈ ಸಮಿತಿಯ ಅಧ್ಯಕ್ಷರು.

Advertisement

ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಯುವಜನ ಹಾಗೂ ಕ್ರೀಡಾ ಸಮಿತಿಗೆ ಅಧ್ಯಕ್ಷರಾಗಿ ದ್ದಾರೆ. ಎಸ್‌ಪಿ ಮುಖಂಡ ರಾಮ್‌ ಗೋಪಾಲ್‌ ಯಾದವ್‌ಗೆ ಆರೋಗ್ಯ, ಕಾಂಗ್ರೆಸ್‌ ಸಂಸದ ತರೂರ್‌ ವಿದೇಶಾಂಗ ಸಮಿತಿ, ಹಣಕಾಸು ಸಮಿತಿಗೆ ಬಿಜೆಪಿ ಸಂಸದ ಭತೃìಹರಿ ಮಹ್ತಾಬ್‌ ಅಧ್ಯಕ್ಷತೆ ಇದೆ. ಯುಪಿಎ ಮುಖಂಡೆ ಸೋನಿಯಾ ಗಾಂದಿ ಹೆಸರು ಈ ಪಟ್ಟಿಯಲ್ಲಿಲ್ಲದಿರುವುದು ಅಚ್ಚರಿಯೆನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next