Advertisement

ಶಿಶುಕಾಮಿಗಳಿಗೆ ಗಲ್ಲು, ಎನ್‌ಸಿಬಿಸಿ ವಿಧೇಯಕಕ್ಕೆ ಸಂಸತ್‌ ಅಂಗೀಕಾರ

11:33 PM Aug 06, 2018 | Team Udayavani |

ನವದೆಹಲಿ: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ (ಎನ್‌ಸಿಬಿಸಿ)ಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ವಿಧೇಯಕಕ್ಕೆ ಸೋಮವಾರ ರಾಜ್ಯಸಭೆ ಅಂಗಿಗೀಕಾರ ನೀಡಿದೆ. ಹಿಂದುಳಿದ ವರ್ಗಗಳ ಮೇಲೆ ಕಾಂಗ್ರೆಸ್‌ಗೆ ನಿಜಕ್ಕೂ ಕಾಳಜಿಯಿದ್ದರೆ ಲೋಕಸಭೆಯಲ್ಲಿ ಪಾಸ್‌ ಆಗಿರುವ ಈ ವಿಧೇಯಕಕ್ಕೆ ರಾಜ್ಯಸಭೆಯಲ್ಲೂ ಅಂಗೀಕಾರ ಸಿಗುವಂತೆ ಬೆಂಬಲ ನೀಡಲಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸವಾಲು ಹಾಕಿದ್ದರು. ಇದರ ಮಾರನೇ ದಿನವೇ ರಾಜ್ಯಸಭೆಯಲ್ಲೂ ವಿಧೇಯಕ ಪಾಸ್‌ ಆಗಿದೆ.

Advertisement

ವಿಧೇಯಕಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ಜಾತಿ ಗಣತಿಯ ವರದಿ ಬಹಿರಂಗ ಮಾಡಿ, ಅದಕ್ಕೆ ಅನುಸಾರವಾಗಿ ಮೀಸಲು ವ್ಯವಸ್ಥೆ ಜಾರಿ ಮಾಡಬೇಕೆಂದು ಹಲವು ಸದಸ್ಯರು ಒತ್ತಾಯಿಸಿದ್ದಾರೆ. ಇದೇ ವೇಳೆ, 12 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಕ್ರಿಮಿನಲ್‌ ಕಾನೂನು (ತಿದ್ದು ಪಡಿ) ವಿಧೇಯಕಕ್ಕೂ ಸೋಮವಾರ ರಾಜ್ಯಸಭೆಯಲ್ಲಿ ಅಂಗೀ ಕಾರ ಸಿಕ್ಕಿದೆ. ಎರಡೂ ಮನೆಗಳಲ್ಲಿ ವಿಧೇಯಕ ಅಂಗೀಕಾರಗೊಂಡಿದೆ. 

ಎಸ್ಸಿ, ಎಸ್ಟಿ ವಿಧೇಯಕಕ್ಕೆ ಅಸ್ತು: ಈ ನಡುವೆ, ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಮೂಲ ಸ್ವರೂಪವನ್ನು ಪುನರ್‌ ಜಾರಿ ಮಾಡುವ ಹೊಸ ತಿದ್ದುಪಡಿ ವಿಧೇ ಯಕಕ್ಕೆ ಸೋಮವಾರ ಲೋಕಸಭೆ ಅಂಗೀ ಕಾರ ನೀಡಿದೆ. ಮಾ.20ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಸುಪ್ರೀಂಕೋರ್ಟ್‌ ತೀರ್ಪಿನಿಂದಾಗಿ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸಿದಂತಾಗಿದೆ ಎಂದು ಆರೋಪಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next