Advertisement

Parliament; ಗದ್ದಲದ ನಡುವೆ ಕಲಾಪ ಉತ್ಪಾದಕತೆ ಶೇ.74:ಅಂಗೀಕಾರಗೊಂಡ ಮಸೂದೆ‌ಗಳು 18

12:55 AM Dec 22, 2023 | Team Udayavani |

ಹೊಸದಿಲ್ಲಿ: ಸಂಸತ್‌ ಭದ್ರತೆ ಉಲ್ಲಂಘನೆ, 140 ಸಂಸದರ ಅಮಾನತು, ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಉಚ್ಚಾಟನೆ ಮುಂತಾದ ಗದ್ದಲಗಳಿಗೆ ಸಾಕ್ಷಿಯಾದ ಲೋಕಸಭೆಯ ಕಲಾಪವು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಅಧಿವೇಶನ ಅಂತ್ಯಕ್ಕೆ ಒಂದು ದಿನ ಬಾಕಿಯಿರುವಂತೆಯೇ, ಗುರುವಾರ ಕಲಾಪವನ್ನು ಮುಂದೂಡಲಾಗಿದೆ.

Advertisement

ಡಿ. 4ರಂದು ಅಧಿವೇಶನ ಆರಂಭವಾಗಿದ್ದು, ಮೊದಲ ವಾರ ಸುಗುಮವಾಗಿ ಕಲಾಪಗಳು ನಡೆದವು. ಡಿ.13ರ ಭದ್ರತಾ ವೈಫ‌ಲ್ಯದ ಬಳಿಕ ಇಡೀ ಸನ್ನಿವೇಶ ಬದಲಾಯಿತು. ಈ ಬಾರಿಯ ಲೋಕಸಭೆ ಕಲಾಪದಲ್ಲಿ ಕ್ರಿಮಿನಲ್‌ ಕಾನೂನುಗಳ ತಿದ್ದುಪಡಿ ಮಸೂದೆ, ಟೆಲಿಗ್ರಾಫ್ ಕಾಯ್ದೆ, ಪ್ರಸ್‌ ಆ್ಯಂಡ್‌ ರಿಜಿಸ್ಟ್ರೇಷನ್‌ ಆಫ್ ಬುಕ್ಸ್‌ ಆ್ಯಕ್ಟ್, ಅಂಚೆ ಕಚೇರಿ ಮಸೂದೆ ಮುಂತಾದ ಪ್ರಮುಖ ಮಸೂದೆಗಳು ಅಂಗೀಕಾರಗೊಂಡವು.

ಇನ್ನು ವೃತ್ತಪತ್ರಿಕೆ ನೋಂದಣಿ ಸುಲಭ

ವೃತ್ತಪತ್ರಿಕೆಗಳ ನೋಂದಣಿಯನ್ನು ಸರಳೀಕರಿಸುವ ನಿಟ್ಟಿನಲ್ಲಿ ಮಂಡನೆಯಾದ ಪ್ರಸ್‌ ಆ್ಯಂಡ್‌ ರಿಜಿಸ್ಟ್ರೇಷನ್‌ ಆಫ್ ಪೀರಿಯಾಡಿಕಲ್ಸ್‌ ಬಿಲ್‌- 2023 ಮಸೂದೆಗೆ ಸಂಸತ್‌ನ ಅನುಮೋದನೆ ದೊರೆತಿದೆ. ಹಳೆಯ ಕಾನೂನಿನಲ್ಲಿ ವೃತ್ತಪತ್ರಿಕೆಗಳ ನೋಂದಣಿಗೆ 8 ಹಂತದ ಪ್ರಕ್ರಿಯೆಗಳನ್ನು ನಡೆಸಬೇಕಿತ್ತು. ಹೊಸ ಕಾನೂನಿನಂತೆ, ಕೇವಲ ಒಂದು ಹಂತದಲ್ಲೇ ನೋಂದಣಿ ಪೂರ್ಣಗೊಳ್ಳಲಿದೆ. ಇದೇ ವೇಳೆ, ಟೆಲಿಕಮ್ಯೂನಿಕೇಶನ್ಸ್‌ ಮಸೂದೆಗೆ ಗುರುವಾರ ರಾಜ್ಯಸಭೆಯ ಅನುಮೋದನೆ ದೊರೆತಿದೆ.

ಧನ್‌ಕರ್‌ ಮಿಮಿಕ್ರಿ: ಜಾಟ್‌ ಪ್ರತಿಭಟನೆ

Advertisement

ರಾಜ್ಯಸಭೆ ಸಭಾಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರನ್ನು ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ಗೇಲಿ ಮಾಡಿದ್ದನ್ನು ಖಂಡಿಸಿ ದಿಲ್ಲಿಯಲ್ಲಿ ಜಾಟ್‌ ಸಮುದಾಯ ಪ್ರತಿಭಟನೆ ನಡೆಸಿದೆ. ಗೇಲಿ ಮಾಡಿದ ಕಲ್ಯಾಣ್‌ ಬ್ಯಾನರ್ಜಿ, ಅದರ ವೀಡಿಯೋ ಮಾಡಿದ ರಾಹುಲ್‌ಗಾಂಧಿ ಇಬ್ಬರನ್ನೂ ಸಂಸತ್‌ನಿಂದ ಶಾಶ್ವತವಾಗಿ ಅಮಾನತು ಮಾಡಬೇಕು ಎಂದು ಜಾಟ್‌ ಮಹಾಸಭಾ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next