Advertisement

ಪಾರ್ಕಿನ್ಸನ್‌ ಬಗ್ಗೆ ಭಯ ಬೇಡ

04:52 PM Apr 12, 2022 | Team Udayavani |

ಪಾರ್ಕಿನ್ಸನ್‌ ರೋಗವೆಂಬುದು ಒಂದು ನ್ಯೂರೋ ಡಿಜೆನೆರೇಟಿವ್‌ ಡಿಸಾರ್ಡರ್‌. ಕನ್ನಡದಲ್ಲಿ ಹೇಳುವುದಾದರೆ ಚಲನೆಯಲ್ಲಿನ ಅಸ್ವಸ್ಥತೆ. ಕೈ ಮತ್ತು ಕಾಲುಗಳಲ್ಲಿ ನಡುಕ, ಚಲನೆಯಲ್ಲಿ ನಿಧಾನಗತಿ ಕಾಣಿಸುವುದು ಇದರ ಪ್ರಮುಖ ಲಕ್ಷಣ. ಹಾಗಾದರೆ, ಇದು ಯಾವ ರೀತಿ ಬಾಧಿಸುತ್ತದೆ? ಇದಕ್ಕೆ ಚಿಕಿತ್ಸೆ ಹೇಗೆ ಎಂಬುದರ ಮೇಲೊಂದು ನೋಟ.

Advertisement

ಪಾರ್ಕಿನ್ಸನ್‌ ಬಾಧಿಸುವುದೇಕೆ?

ಇದೇ ಕಾರಣದಿಂದ ಬರುತ್ತದೆ ಎಂದು ಹೇಳಲು ಅಸಾಧ್ಯ. ಅನುವಂಶಿಕ ಮತ್ತು ಪರಿಸರ ಅಂಶಗಳು ಕಾರಣವಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಕೆಲವೊಮ್ಮೆ ಈ ಎರಡು ಸಂಯೋಜನೆಯ ಮೂಲಕವು ಬರಬಹುದು. ಈ ಕಾಯಿಲೆಗೆ ತುತ್ತಾದ ವ್ಯಕ್ತಿಯ ಮೆದುಳಿನಲ್ಲಿ ಡೋಪಮೈನ್‌ ನಷ್ಟ ಅನುಭವಿಸುತ್ತಾನೆ. ಡೋಪಮೈನ್‌ ಮುಖ್ಯವಾಗಿ ಚಲನೆ, ಭಾವನಾತ್ಮಕ ಪ್ರತಿಕ್ರಿಯೆಗಳು, ಸಂತೋಷ, ನೋವು ಅನುಭವಿಸುವ ಸಾಮರ್ಥ್ಯವನ್ನು ಹೊಂದಿದೆ. ಡೋಪಮೈನ್‌ ಹಾನಿಯಾದಂತೆ ಚಲನೆ ನಿಧಾನಗೊಳ್ಳುತ್ತದೆ.

ಪಾರ್ಕಿನ್ಸನ್‌ ಬಂದಿದೆ ಎಂದು ತಿಳಿಯುವುದು ಹೇಗೆ?

ನಡುಕ, ಸಣ್ಣ ಕೈಬರಹ, ವಾಸನೆಯ ನಷ್ಟ, ನಿದ್ರೆಗೆ ತೊಂದರೆ, ಓಡಲು ಅಥವಾ ನಡೆಯಲು ತೊಂದರೆ, ಮಲಬದ್ಧತೆ, ಮೃದು ಅಥವಾ ಕಡಿಮೆ ಧ್ವನಿ, ಭಾವನೆ ತೋರ್ಪಡಿಸಲು ಕಷ್ಟವಾಗುವುದು, ತಲೆತಿರುಗುವಿಕೆ, ಮೂಛೆì, ನಿಂತಿರುವಾಗ ಬಗ್ಗುವುದು ಪ್ರಮುಖ ಲಕ್ಷಣಗಳು. ಇವು ಕಾಣಿಸಿಕೊಂಡ ತತ್‌ಕ್ಷಣ ನರವಿಜ್ಞಾನಿ ವೈದ್ಯರನ್ನು ಕಾಣಬೇಕು.

Advertisement

ಪಾರ್ಕಿನ್ಸನ್‌ ಕಾಯಿಲೆ ಇರುವವರಿಗೆ ವ್ಯಾಯಾಮ ಬಹುಮುಖ್ಯ. ದಿನವೂ ತಪ್ಪದೇ ವ್ಯಾಯಾಮ ಮತ್ತು ದೈಹಿಕ ಕಸರತ್ತು ಮಾಡುತ್ತಿದ್ದರೆ ಪಾರ್ಕಿನ್ಸನ್‌ ಕಾಯಿಲೆಯಿಂದ ಗುಣಮುಖರಾಗಬಹುದು. ಜತೆಗೆ ಆಗಾಗ ತಜ್ಞ ವೈದ್ಯರನ್ನು ಭೇಟಿ ಮಾಡಿ ಅಗತ್ಯವಿರುವ ಚಿಕಿತ್ಸೆ ಪಡೆದರೆ, ಪಾರ್ಕಿನ್ಸನ್‌ ಜತೆಯಲ್ಲಿಯೂ ಬಾಳಬಹುದು.

– ಡಾ| ಸಾತ್ವಿಕ್‌ ಆರ್‌.ಶೆಟ್ಟಿ, ಮಣಿಪಾಲ್‌ ಆಸ್ಪತ್ರೆ, ಬೆಂಗಳೂರು.

ಚಿಕಿತ್ಸೆಯುಂಟೇ?

ಚಿಕಿತ್ಸೆ ಇದೆ. ಕೆಲವೊಮ್ಮೆ ಔಷಧಗಳನ್ನು ನೀಡಿ ನಿಯಂತ್ರಿಸಬಹುದು. ಇನ್ನೂ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ನಡೆಸಿ ನಿವಾರಿಸಬಹುದು. ಹಾಗೆಯೇ, ಲೆಸಿಯೋನಿಂಗ್‌, ಡಿಯುಒಪಿಎ ಚಿಕಿತ್ಸೆ ಮೂಲಕವೂ ನಿಯಂತ್ರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next