Advertisement

ಪಾದಚಾರಿ ಮಾರ್ಗಗಳ ಮೇಲೆ ಪಾರ್ಕಿಂಗ್‌ ದಂಡನಾರ್ಹ ಅಪರಾಧ: ಹೈಕೋರ್ಟ್‌

10:23 PM Apr 21, 2021 | Team Udayavani |

ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳ ಮೇಲೆ ಇನ್ನು ಮುಂದೆ ವಾಹನಗಳನ್ನು ನಿಲುಗಡೆ ಮಾಡುವುದು ಕಾನೂನುಬಾಹಿರ ಹಾಗೂ ದಂಡನಾರ್ಹ ಅಪರಾಧ ಎಂದು ಹೈಕೋರ್ಟ್‌ ಹೇಳಿದೆ.

Advertisement

ವಿರುದ್ಧ ದಂಡ ವಿಧಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡಿದರೆ, ಅದು ಕಾನೂನುಬಾಹಿರವಾಗುವುದಲ್ಲದೆ ಅದಕ್ಕೆ ದಂಡ ತೆರಬೇಕಾಗುತ್ತದೆ ಮತ್ತು ಕ್ರಿಮಿನಲ್‌ ಪ್ರಕರಣವನ್ನು ಎದುರಿಸಬೇಕಾಗುತ್ತದೆ.

ಬೆಂಗಳೂರಿನ ವಕೀಲ ರಾಮಚಂದ್ರ ರೆಡ್ಡಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಇದನ್ನೂ ಓದಿ :ನಗರದ 12 ವಿದ್ಯುತ್ ಚಿತಾಗಾರದಲ್ಲಿ ಶವ ಸಂಸ್ಕಾರ ನಡೆಸಲು ಬಿಬಿಎಂಪಿ ಆದೇಶ

ಕರ್ನಾಟಕ ಮೋಟಾರು ವಾಹನ ಕಾಯ್ದೆ, ಮೋಟಾರು ವಾಹನ ನಿಯಮ 2017ರ ಚಾಲನಾ ನಿಯಮ ಸೇರಿದಂತೆ ಹಲವು ಕಾಯ್ದೆ ಮತ್ತು ನಿಯಮಗಳನ್ನು ಉಲ್ಲೇಖೀಸಿದ ನ್ಯಾಯಪೀಠ, “ಪುಟ್‌ ಪಾತ್‌ ಗಳಿರುವುದು ಪಾದಚಾರಿಗಳಿಗಾಗಿ, ಪಾದಚಾರಿಗಳು ಯಾವುದೇ ಅಡೆತಡೆ ಇಲ್ಲದೆ ಸುರಕ್ಷಿತವಾಗಿ ನಡೆದಾಡುವುದಕ್ಕಾಗಿ, ಆ ಜಾಗದಲ್ಲಿ ವಾಹನಗಳ ಪಾರ್ಕಿಂಗ್‌ ಮಾಡುವುದು ಕಾನೂನುಬಾಹಿರ” ಎಂದು ಆದೇಶಿಸಿತು.

Advertisement

ಅಲ್ಲದೆ ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡಿದವರ ವಿರುದ್ಧ ದಂಡನಾ ಕ್ರಮವನ್ನು ಕೈಗೊಳ್ಳಲು ಪೊಲೀಸರಿಗೆ ಮತ್ತು ಬಿಬಿಎಂಪಿಗೆ ಸೂಕ್ತ ಆದೇಶವನ್ನು ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಂಚಾರಕ್ಕೆ ಅಡ್ಡಿಯಾಗುವಂತೆಯೂ ಪಾರ್ಕಿಂಗ್‌ ಮಾಡುವಂತಿಲ್ಲ, ಈ ನಿಯಮವನ್ನು ಉಲ್ಲಂ ಸಿದವರ ಮೇಲೆ ಪೊಲೀಸರು ಕ್ರಮಿನಲ್‌ ಪ್ರಕರಣ ದಾಖಲಿಸುವಂತೆ ಸರ್ಕಾರ ಆದೇಶಿಸಬೇಕು. ಪೊಲೀಸರು ಮೋಟಾರು ವಾಹನ ಕಾಯ್ದೆ ಮತ್ತು ಭಾರತೀಯ ದಂಡಸಂಹಿತೆ ಅಡಿ ಕಾನೂನು ಕ್ರಮಗಳನ್ನು ಕೈಗೊಳ್ಳಬಹುದು. ಈ ಬಗ್ಗೆ ಬಿಬಿಎಂಪಿ ಮತ್ತು ಪೊಲೀಸರಿಗೆ ಅಗತ್ಯ ಸುತ್ತೋಲೆ ಹೊರಡಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತು.

ಇದಕ್ಕೂ ಮೊದಲು ಸರ್ಕಾರದ ಪರ ವಕೀಲರಾದ ವಿಜಯಕುಮಾರ್‌ ಪಾಟೀಲ್‌ ಅವರು, ಮೋಟಾರು ವಾಹನ ಕಾಯ್ದೆ, ಕರ್ನಾಟಕ ಸಂಚಾರಿ ನಿಯಮ 1960 ಮತ್ತು ಐಪಿಸಿ ಕಾಯ್ದೆಗಳಡಿ ಫುಟ್‌ ಪಾತ್‌ ಗಳ ಮೇಲೆ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂದು ನಿಯಮಗಳನ್ನು ವಿವರಿಸಿದರು.

ಬಿಬಿಎಂಪಿ ಪರ ವಾದಿಸಿದ ನ್ಯಾಯವಾದಿ ಕೆ.ಎನ್‌. ಪುಟ್ಟೇಗೌಡ ಅವರು ಪಾದಚಾರಿ ಮಾರ್ಗಗಳು ರಸ್ತೆಯ ಭಾಗವಾಗಿದ್ದು, ಅವುಗಳ ಮೇಲೆ ವಾಹನ ನಿಲುಗಡೆ ಮಾಡಿ, ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವಂತಿಲ್ಲ. ಹಾಗೆ ಮಾಡುವುದು ನಿಯಮ ಬಾಹಿರವಾಗುತ್ತದೆ. ವಾಹನ ನಿಲುಗಡೆಗಾಗಿ ಸಂಚಾರಿ ಪೊಲೀಸರು ಹಾಗೂ ಪಾಲಿಕೆಯ ಅಧಿಕಾರಿಗಳು ಸೇರಿ ಹಲವು ಪ್ರದೇಶಗಳನ್ನು ಗುರುತಿಸಿ ಅಲ್ಲಿ ಪಾರ್ಕಿಂಗ್‌ ವಲಯವನ್ನು ರಚಿಸಿರುತ್ತಾರೆ. ಅಂತಹ ಕಡೆ ಮಾತ್ರ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next