Advertisement
ರೇಡಿಯೋ ಪುನರಾರಂಭಿಸಿಸುಮಾರು 50 ವರ್ಷಗಳ ಹಿಂದೆ ಅಂದಿನ ರಾಜ್ಯಪಾಲ ಧರ್ಮವೀರ ಅವರಿಂದ ಉದ್ಘಾಟನೆಗೊಂಡ ರೇಡಿಯೋ ಕೇಂದ್ರ ಕಾರಣಾಂತರಗಳಿಂದ ಅಂತ್ಯ ಕಂಡಿದ್ದರೂ ಅದನ್ನು ಪುನರಾರಂಭಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆ.
ಜನಾಕರ್ಷಣೆಯ ಕೇಂದ್ರ
ಈ ರೇಡಿಯೋ ಕೇಂದ್ರದ ಬಳಿ ಸಾರ್ವಜನಿಕರಿಗೆ ಕುಳಿತು ಕೇಳಲು ಅನುಕೂಲವಾಗುವಂತೆ ಕಲ್ಲು ಹಾಸುಗಳನ್ನು, ಜಗುಲಿಗಳನ್ನು ನಿರ್ಮಿಸಲಾಗಿತ್ತು. ಅಲ್ಲದೇ ಸಣ್ಣ ಪ್ರಮಾಣದ ವೇದಿಕೆಯನ್ನೂ ನಿರ್ಮಿಸಲಾಗಿತ್ತು. ಈಗ ಅವೆಲ್ಲ ನಿಷ್ಪ್ರಯೋಜಕವಾಗಿವೆ. ಆ ದಿನಗಳಲ್ಲಿ ಪರ್ಕಳ ಹಾಗೂ ಸುತ್ತಮುತ್ತಲಿನ ಜನರು ನಿಗದಿತ ಸಮಯದಲ್ಲಿ ಇಲ್ಲಿಗೆ ಬಂದು ಕೃಷಿ, ಪ್ರಾದೇಶಿಕ ಸಮಾಚಾರ, ಮನೋರಂಜನೆ ಪಡೆಯುತ್ತಿದ್ದರು. ಈಗ ಆಧುನಿಕ ಪ್ರಭಾವದಿಂದಾಗಿ ಶ್ರೋತೃಗಳೇ ಇಲ್ಲ ಎಂಬಂತಾಗಿದೆ. ಮುಖ್ಯ ರೇಡಿಯೋ ಉಪಕರಣಗಳೂ ಕಳವಾಗಿವೆ. ಸಂಸ್ಕೃತಿ, ಸಮಾರಂಭಗಳ ಬಗ್ಗೆ ವಿಷಯ ತಿಳಿಯುತ್ತಿದ್ದರಲ್ಲದೇ, ಅನಂತರದ ದಿನಗಳಲ್ಲಿ ಇದರ ಅಭಿವೃದ್ಧಿ ಕಡೆಗೆ ಯಾವುದೇ ಚಿಂತನೆ ನಡೆಸದ್ದರಿಂದ ಹಾಳುಬಿದ್ದಿದೆ.
ಕೃಷಿಕರಾದ ನಮಗೆ ಕೃಷಿ ವಿಚಾರಗಳು, ರೈತರಿಗೆ ಸಲಹೆ ಮೊದಲಾದ ಸಮಕಾಲೀನ ಮಾಹಿತಿಗಳು ರೇಡಿಯೋ ಕೇಂದ್ರದಿಂದ ದೊರಕುತ್ತಿತ್ತು. ಅಂದಿನ ಕಾಲಕ್ಕೆ ನಮಗೆ ಅದೇ ದೊಡ್ಡ ಮಾಹಿತಿ ಕಣಜದೊಂದಿಗೆ ಮನೋರಂಜನೆಯಾಗಿತ್ತು. ಹೊಸ ತಾಂತ್ರಿಕತೆಯೊಂದಿಗೆ ಯುವ ಜನತೆಗೆ ಮೆಚ್ಚುಗೆಯಾಗಬಲ್ಲ ಕಾರ್ಯಕ್ರಮಗಳನ್ನು ಬಿತ್ತರಿಸುವ ಮೂಲಕ ಈ ಕೇಂದ್ರಕ್ಕೆ ಮರು ಚಾಲನೆ ನೀಡಬೇಕು.
-ಪದ್ಮನಾಭ ನಾಯಕ್,
ಕೃಷಿಕರು ಪರ್ಕಳ ಆಧುನಿಕ ಮಾಧ್ಯಮಗಳ ಭರಾಟೆ
ಅಂದು ಬಾನುಲಿಯಲ್ಲಿ ಪ್ರಸಾರವಾಗುತ್ತಿದ್ದ ಕೃಷಿರಂಗ, ಪ್ರಾದೇಶಿಕ ಸಮಾಚಾರಗಳನ್ನು ಕೇಳುವುದಕೋಸ್ಕರ ದೂರಗಳಿಂದ ಜನರು ಇಲ್ಲಿಗೆ ಬರುತ್ತಿದ್ದರು. ಆದರೆ ಕಾಲಕ್ರಮೇಣ ಜನರು ಟಿವಿ, ಇಂಟರ್‌ನೆಟ್, ಫೇಸ್‌ಬುಕ್, ವಾಟ್ಸಾéಪ್‌ಗ್ಳಿಂದಾಗಿ ಇಲ್ಲಿಗೆ ಬರುತ್ತಿಲ್ಲ. ರೇಡಿಯೋ ಕೇಂದ್ರವನ್ನು ಪ್ರಸ್ತುತ ಕಾಲಘಟ್ಟಕ್ಕೆ ಸರಿಯಾಗಿ ಹೊಂದಿಸಿಕೊಂಡು ಪರಿಸರದ ಜನರ ಆಕರ್ಷಣೆಯ ಕೇಂದ್ರವನ್ನಾಗಿಸಬೇಕಿದೆ.
– ದೇವರಾಯ ಕಾಮತ್,
ಸ್ಥಳೀಯರು
Related Articles
Advertisement