Advertisement
ವೈವಿಧ್ಯಮಯ ಟ್ಯಾಬ್ಲೋಗಳುಐದು ಕಿ.ಮೀ. ದೂರದ ವರೆಗೆ ಕ್ರಮಿಸಲಿರುವ ವೈಭವದ ಪುರ ಮೆರವಣಿಗೆಯಲ್ಲಿ ತಿರುಪತಿ ಶ್ರೀ ವೆಂಕಟರಮಣ ದೇವರು, ಶೇಷಶಯನ ಶ್ರೀ ಅನಂತಪದ್ಮನಾಭ ದೇವರು, ಪಂಢರಪುರ ಶ್ರೀ ವಿಟuಲ ರುಕ್ಮಿಣಿ ದೇವರು, ಭಕ್ತಿಗೀತೆ ಸಹಿತ ಶ್ರೀ ಲಕ್ಷ್ಮೀ ದೇವರ ಟ್ಯಾಬ್ಲೋ, ಮಂಗಳೂರು ಬಾಲು ಆರ್ಟ್ಸ್ ಅವರ 5 ವಿಶೇಷ ಟ್ಯಾಬ್ಲೋಗಳು, ಪರ್ಕಳ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯವರ ಟ್ಯಾಬ್ಲೋ, ಪರ್ಕಳ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿಯವರ ಟ್ಯಾಬ್ಲೋ, ವಿಶೇಷ ಪುಷ್ಪಾಲಂಕೃತ ಗಣಪತಿ ದೇವರ ಟ್ಯಾಬ್ಲೋ ಹೀಗೆ ಹತ್ತು ಹಲವಾರು ವೈವಿಧ್ಯಮಯ ವಿಶೇಷ ಟ್ಯಾಬ್ಲೋಗಳು ಆಕರ್ಷಣೆಯಾಗಲಿವೆ.
ಮಂತ್ರಘೋಷದ ವಾಹನಗಳು, ಧ್ವನಿವರ್ಧಕ ವಾಹನಗಳು, ಜನತಾ ವ್ಯಾಯಾಮ ಶಾಲೆಯವರಿಂದ ತಾಲೀಮು, ಬ್ಯಾಂಡ್‌ಸೆಟ್, ಆಕರ್ಷಕ ಬಣ್ಣದ ಕೊಡೆಗಳು, ನಾಸಿಕ್ ಬ್ಯಾಂಡ್‌ಗಳು, 150 ಮಂದಿ ತಂಡದ ಜಾನಪದ ವೈಶಿಷ್ಟéತೆಗಳು, ಡೊಳ್ಳು ಕುಣಿತ, ಸೋಮನ ಕುಣಿತ, ಹೋಳಿ ಕುಣಿತ, 50 ಮಂದಿಯ ಕೇರಳದ ನೃತ್ಯ, ಚಂಡೆ ವಾದನ, ಕೋಳಿ ಕುಣಿತ, ಸೂರಾಲು ಬಳಗದ ಬ್ಯಾಂಡ್‌ಸೆಟ್, ಕೊಂಬು ವಾದನ, ಬಿರುದು ಬಾವಲಿಗಳು ಮೆರವಣಿಗೆಯ ಸೊಬಗು ಹೆಚ್ಚಿಸಲಿವೆ. ಮೆರವಣಿಗೆ ಮಾರ್ಗ
ಪರ್ಕಳ ಶ್ರೀ ವಿಘ್ನೇಶ್ವರ ಸಭಾಭವನದಿಂದ ಹೊರಡಲಿರುವ ಆಕರ್ಷಕ ಮೆರವಣಿಗೆ ಅರ್ಜುನ ಯುವಕ ಮಂಡಲ, ಪರ್ಕಳ ಪೇಟೆ ಮಾರ್ಗವಾಗಿ ಪರ್ಕಳ ಹೈಸ್ಕೂಲ್ ವರೆಗೆ ತೆರಳಿ ಅಲ್ಲಿಂದ ಪುನಃ ಪೇಟೆಗೆ ಬಂದು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸರೋವರದಲ್ಲಿ ವಿಗ್ರಹವನ್ನು ಜಲಸ್ತಂಭನಗೊಳಿಸಲಾಗುವುದು ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಸಂಚಾಲಕ ದಿಲೀಪರಾಜು ಹೆಗ್ಡೆ ಆತ್ರಾಡಿ, ಮೆರವಣಿಗೆ ಉಸ್ತುವಾರಿ ಉಮೇಶ್ ಶಾನುಭಾಗ್ ತಿಳಿಸಿದ್ದಾರೆ.
Related Articles
ಮೆರವಣಿಗೆಯಲ್ಲಿ ಭಾಗವಹಿಸಲಿರುವ ಎಲ್ಲ ಭಕ್ತಾಭಿಮಾನಿಗಳಿಗೆ “ಜೈ ಗಣೇಶ’ ಎಂದು ಬರೆಯಲ್ಪಟ್ಟ ಕೇಸರಿ ಬಣ್ಣದ ಟೋಪಿಯನ್ನು ವಿತರಿಸಲಾಗುವುದು. ಸುವರ್ಣ ಮಹೋತ್ಸವದ ಬಾಲಗಂಗಾಧರ ತಿಲಕ್ ವೇದಿಕೆಯಲ್ಲಿ ಸಂಜೆ 4ರಿಂದ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಎಲ್ಲ ಜಾನಪದ ತಂಡಗಳಿಂದ ವಿಶೇಷ ಮೆರುಗಿನೊಂದಿಗೆ ಜಾನಪದ ಕಲಾ ಪ್ರಾಕಾರಗಳು ಪ್ರದರ್ಶನಗೊಳ್ಳಲಿವೆ.
Advertisement