Advertisement

ಸುಂದರ ನಗರಕ್ಕೆ ಪಾಕ್ಲೆìಟ್‌ ಉದ್ಯಾನವನ

10:57 PM Aug 10, 2019 | mahesh |

ನಮ್ಮ ನಗರದಲ್ಲಿ ಎಷ್ಟು ಪಾರ್ಕ್‌ಗಳಿವೆ ಎಂದು ಕೇಳಿದರೆ ನಮಗೆ ಲೆಕ್ಕಕ್ಕೆ ಸಿಗುವಷ್ಟು ಇರಬಹುದು. ಆದರೆ ಇಲ್ಲೊಂದು ನಗರದಲ್ಲಿ ಗಲ್ಲಿಗೊಂದು ಪಾರ್ಕ್‌ಗಳಿವೆ. ಅದು ಹೇಗೆ ಅಂತೀರಾ.. ಪಾರ್ಕ್‌ ಅಂದರೆ ನಮ್ಮ ಮನಸ್ಸಲ್ಲಿ ಬೇರೆಯದೇ ಕಲ್ಪನೆಯಿದೆ. ವಿಶಾಲವಾದ ಜಾಗ ಇರಬೇಕು, ತುಂಬಾ ಜನರು ಅಡ್ಡಾಡುತ್ತಿರಬೇಕು, ಮಕ್ಕಳಿಗೆ ಆಟವಾಡುವಂತಹ ವ್ಯವಸ್ಥೆ ಇರಬೇಕು. ಎಲ್ಲದಕ್ಕಿಂತಲೂ ಹೆಚ್ಚಾಗಿ ಮರಗಿಡಗಳು ತುಂಬಿಕೊಂಡು ಪ್ರಶಾಂತತೆ ಕಾಯ್ದುಕೊಂಡಿರಬೇಕು. ಆದರೆ ಇಲ್ಲಿ ಹೇಳುತ್ತಿರುವ ಈ ಪಾರ್ಕ್‌ ಇದಕ್ಕೆ ತದ್ವಿರುದ್ದ. ಇದಕ್ಕೆ ವಿಶಾಲ ಜಾಗವೂ ಬೇಡ, ಜನರು ತುಂಬಿಕೊಂಡಿರುವುದು ಬೇಡ. ಆದರೆ ಪಾರ್ಕ್‌ನಲ್ಲಿರುವ ಪ್ರಶಾಂತ ವಾತಾವರಣ, ಏಕಾಂತದ ಅನುಭವ ಇಲ್ಲಿ ಸಿಗುತ್ತದೆ. ಅಂದ ಹಾಗೆ ಇಂತಹ ಉದ್ಯಾನವನಗಳ ಹೆಸರು ಪಾಕ್ಲೆìಟ್‌

Advertisement

ಪಾಕ್ಲೆìಟ್‌ ಉದ್ಯಾನವನ
ಪಾಕ್ಲೆìಟ್‌ ಉದ್ಯಾನವನ ಹೆಚ್ಚಾಗಿ ಕಂಡು ಬರುವುದು ಸ್ಯಾನ್‌ಫ್ರಾನ್ಸಿಸ್ಕೋದ ರಸ್ತೆ ಇಕ್ಕೆಲಗಳಲ್ಲಿ. ಪಾಕ್ಲೆìಟ್‌ ಉದ್ಯಾನವನವನ್ನು ಜನರಿಗೆ ಮೊದಲು ಪರಿಚಯಿಸಿದ್ದು ಕೂಡ ಇದೇ ಸ್ಯಾನ್‌ಫ್ರಾನ್ಸಿಸ್ಕೋ. ಇಲ್ಲಿ ಅದು ಎಲ್ಲಿ ನಿರ್ಮಿತವಾಗಿದೆಯೆಂದರೆ ಹೆಚ್ಚಿನ ವಾಹನ ಸಂಚಾರವಿಲ್ಲದ ಜಾಗಗಳಲ್ಲಿ . ಜನರಿಗೆ ಇಷ್ಟವಾಗುವ ರೀತಿಯಲ್ಲಿ . ಈ ಪಾಕ್ಲೆìಟ್‌ ಉದ್ಯಾನವನಗಳು ವಿಶೇಷ ವಿನ್ಯಾಸದೊಂದಿಗೆ ನಿರ್ಮಾಣಗೊಂಡಿವೆ. ಚಿತ್ರದಲ್ಲಿರುವಂತೆ ಸಣ್ಣ ಜಾಗವನ್ನು ಆಯ್ಕೆ ಮಾಡಿಕೊಂಡು ಅದು ಹೇಗೆ ಜನರನ್ನು ಆಕರ್ಷಿಸುವಂತೆ ನಿರ್ಮಿಸಿದ್ದಾರೆ ಎನ್ನುವುದನ್ನು ನೋಡಬಹುದು.

ಮಕ್ಕಳನ್ನೇ ಕೇಂದ್ರವಾಗಿಟ್ಟುಕೊಂಡು ಮಾಡಿಕೊಂಡ ಪಾಕ್ಲೆìಟ್‌ ಉದ್ಯಾನವನಗಳು ಕೂಡ ಇವೆ. ಮುಖ್ಯವಾಗಿ ಈ ಉದ್ಯಾನವನ ಪಾದಚಾರಿಗಳು ಮತ್ತು ಸೈಕಲ್‌ ಸವಾರರಿಗೆ ವಿಶ್ರಾಂತಿ ಪಡೆಯಲು ಸೂಕ್ತವಾಗುವ ದೃಷ್ಟಿಕೋನದಲ್ಲಿ ನಿರ್ಮಾಣವಾಗಿವೆ. ಜತೆಗೆ ಸೈಕಲ್‌ ಸವಾರರಿಗೆ ಇಲ್ಲಿ ಸೈಕಲ್‌ ಸ್ಟಾಂಡ್‌ ಕೂಡ ಇದೆ. ಇಂತಹ ಅನೇಕ ಪಾಕ್ಲೆìಟ್‌ ಉದ್ಯಾನವನಗಳು ಇಲ್ಲಿ ಕಂಡು ಬರುತ್ತವೆ. ಈ ಯೋಜನೆಯನ್ನು ಹೆಚ್ಚಿನ ದೇಶಗಳು ಅನುಸರಿಸಲಾರಂಭಿಸಿದ್ದು, ಹೊಸ ಹೊಸ ಬದಲಾವಣೆಯನ್ನು ತರುತ್ತಿದೆ.

ನಮ್ಮ ನಗರಕ್ಕೂ ಬರಲಿ
ನಮ್ಮಲ್ಲಿ ಇಂತಹ ಪಾರ್ಕ್‌ಗಳ ನಿರ್ಮಾಣಕ್ಕೆ ಹೇರಳ ಅವಕಾಶವಿದೆ. ಪ್ರಶಾಂತ ವಾತಾವರಣವಿರುವ ಮಣ್ಣಗುಡ್ಡ, ಫ‌ಳ್ನೀರ್‌, ಕಾಪಿಕಾಡ್‌, ಜೆಪ್ಪು ಮುಂತಾದ ಸ್ಥಳಗಳಲ್ಲಿ ಈ ರೀತಿಯ ಪಾರ್ಕ್‌ ಗಳನ್ನು ನಿರ್ಮಾಣ ಮಾಡಬಹುದಾಗಿದೆ.ಇಂತಹ ಪಾಕ್ಲೆìಟ್‌ ಉದ್ಯಾನವನಗಳ ನಿರ್ಮಾಣಕ್ಕೆ ನಗರ ಆಡಳಿತವೇ ಮುಂದೆ ಬರಬೇಕೆಂದೇನಿಲ್ಲ . ನಗರದ ಮೇಲೆ ಪ್ರೀತಿ, ಕಾಳಜಿ ಇರುವಂಥವರು, ಸಂಘ ಸಂಸ್ಥೆಗಳು ಇದರ ನಿರ್ಮಾಣಕ್ಕೆ ಮನಸ್ಸು ಮಾಡಬಹುದು. ಮಂಗಳೂರು ನಗರ ಸುಂದರವಾಗಿರಬೇಕು ಎಂಬುದಕ್ಕೆ ಈ ಯೋಜನೆ ಸೂಕ್ತ ಆಯ್ಕೆಯಾಗಿದೆ. ಹೊಸ ಉದ್ಯಾನವನಗಳನ್ನು ನಿರ್ಮಿಸಲು ವಿಶಾಲವಾದ ಜಾಗಗಳನ್ನು ಹುಡುಕುವ ಬದಲು ಸ್ವಲ್ಪ ಜಾಗದಲ್ಲೇ ಸುಂದರವಾದ, ಆಕರ್ಷಣೀಯ ಸಣ್ಣ ಉದ್ಯಾನವನಗಳನ್ನು ಸೃಷ್ಟಿಸಿ ನಗರದ ಸೌಂದರ್ಯವನ್ನು ಹೆಚ್ಚಿಸಬಹುದು.

-   ವಿಶ್ವಾಸ್‌ ಅಡ್ಯಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next