Advertisement

ಬಿಜೆಪಿಯವರಿಗಾಗಿಯೇ ಪಾರ್ಕ್‌ ಮೀಸಲು: ಶೆಟ್ಟಿ ತಿರುಗೇಟು

03:21 PM Aug 29, 2017 | Team Udayavani |

ದಾವಣಗೆರೆ: ಈಗಾಗಲೇ ಜನರಿಂದ ತಿರಸ್ಕೃತಗೊಂಡಿರುವ ಬಿಜೆಪಿಯವರಿಗೆ ಮುಂದಿನ ಚುನಾವಣೆಯಲ್ಲೂ ಅದೇ ಗತಿ ಒದಗಲಿದ್ದು, ಕಾಲ ಕಳೆಯಲು ಅವರಿಗಾಗಿಯೇ ನಗರದಲ್ಲಿ ಪಾರ್ಕ್‌ ನಿರ್ಮಿಸಲಾಗುವುದು ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ ತಿರುಗೇಟು ನೀಡಿದ್ದಾರೆ.

Advertisement

ಸೋಮವಾರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಎಂದರೆ ಭ್ರಷ್ಟ ಜನತಾ ಪಾರ್ಕ್‌. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅ ಧಿಕಾರದಲ್ಲಿದ್ದಾಗ ಸ್ವತಃ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದ ಆರೋಪದಡಿ
ಜೈಲಿಗೆ ಹೋದರು ಎಂದರು. ದಾವಣಗೆರೆಯಲ್ಲಿಯೂ ಸಹ ಬಿಜೆಪಿ ಈಗಿನ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ನಗರಸಭೆ ಅಧ್ಯಕ್ಷರಾಗಿದ್ದಾಗ ಅಕ್ರಮ ಡೋರ್‌ ನಂಬರ್‌ ಗಳನ್ನು ನೀಡಿರುವುದಲ್ಲದೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ತಮ್ಮ ಸಂಬಂಧಿಕರ ಹೆಸರಿನಲ್ಲಿ ನಿವೇಶನ ಬರೆದುಕೊಂಡಿದ್ದಾರೆ. ಜಿ.ಎಂ.ಸಿದ್ದೇಶ್ವರ್‌ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಡಿ ತಮ್ಮ ಸಂಸ್ಥೆಯಿಂದಲೇ ಬಸ್‌ ತಂಗುದಾಣ ನಿರ್ಮಿಸುವ ಹೆಸರಿನಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.

ಇಂತಹ ಭ್ರಷ್ಟರಿಂದ ಕೊಡಿದ ಪಕ್ಷವನ್ನು ದಾವಣಗೆರೆ ಜಿಲ್ಲೆಯ ಜನತೆ 2013ರ ಚುನಾವಣೆಯಲ್ಲಿ ತಿರಸ್ಕರಿಸಿದ್ದು, 2018ರ ಚುನಾವಣೆಯಲ್ಲೂ ಸಹ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಜನತೆಯ ತೀರ್ಪಿನ ನಂತರ ಒಂದು ಪಾರ್ಕ್‌ ನಿರ್ಮಿಸಿ, ಬಿಜೆಪಿಯವರಿಗಾಗಿಯೇ ಮೀಸಲಿಟ್ಟು, ಅವರ ಹೆಸರನ್ನೇ ಇಡಲಾಗುವುದು. ಬಿಜೆಪಿಯವರು ಅಲ್ಲೇ ಕಾಲ ಕಳೆಯಲಿ ಎಂದು ಲೇವಡಿ ಮಾಡಿದರು. ದಾವಣಗೆರೆ ನಗರದಲ್ಲಿ ಹಂದಿ ನಿರ್ಮೂಲನೆಗೆ ಕ್ರಮಕೈಗೊಳ್ಳಲಾಗಿದೆ. ನಾವು ಯಾರ ಮೇಲೂ ಹಲ್ಲೆ ನಡೆಸಿಲ್ಲ. ಹಂದಿ ಸಾಗಾಣಿಕೆಗೆ ಪೋಲೀಸರ ಭದ್ರತೆಯೊಂದಿಗೆ ಪಾಲಿಕೆ ಅಧಿಕಾರಿಗಳು ಕ್ರಮ
ಕೈಗೊಂಡಿದ್ದಾರೆ ಎಂದರು. ಕಾಂಗ್ರೆಸ್‌ ವೀಕ್ಷಕರಾಗಿ ಆಗಮಿಸಿರುವ ಮಹಮದ್‌ ಘನಿ ಮತ್ತು ದಿಲ್‌ಶಾದ್‌ ಅಹ್ಮದ್‌ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಹಗರಣಗಳಿಲ್ಲದೇ ಬಡವರ ಪರವಾದ ಅನ್ನಭಾಗ್ಯ, ಕ್ಷೀರ ಭಾಗ್ಯದಂತಹ 12ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್‌ ಕಾಂಗ್ರೆಸ್‌ನ ಅಧ್ಯಕ್ಷ ಅಯೂಬ್‌ ಪೈಲ್ವಾನ್‌ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಫೈರೋಜ್‌ ಪಟೇಲ್‌, ಎನ್‌ ಎಸ್‌ಯುಐ ರಾಜ್ಯ ಕಾರ್ಯದರ್ಶಿ ಮುಜಾಹಿದ್‌ ಪಾಷ, ಶಶಿಧರ್‌ ಪಾಟೀಲ್‌, ಯುವ ಕಾಂಗ್ರೆಸ್‌ ನ ಖಾಲಿದ್‌, ಇಬ್ರಾಹಿಂ ಖಲೀಲುಲ್ಲಾ, ಆರೀಫ್‌ ಪೈಲ್ವಾನ್‌, ಇಮ್ರಾನ್‌, ಮನ್ಸೂರ್‌, ಬಾಬಾಜಾನ್‌, ಸಂದೀಪ್‌ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next