Advertisement

ಯುವ ಬ್ರಿಗೇಡ್‌ ನಿಂದ ಉದ್ಯಾನವನ ಸ್ವತ್ಛತೆ

04:06 PM Jan 01, 2018 | Team Udayavani |

ಯಾದಗಿರಿ: ಕನಸಿನ ಕರ್ನಾಟಕ ಕಾರ್ಯಕ್ರಮದಡಿ ಜಿಲ್ಲಾ ಯುವ ಬ್ರಿಗೇಡ್‌ ವತಿಯಿಂದ ನಗರದ ಬಸವೇಶ್ವರ ಬಡಾವಣೆಯ ಉದ್ಯಾನವನ ಸ್ವತ್ಛತೆ ಕಾರ್ಯ ರವಿವಾರ ಬೆಳಿಗ್ಗೆ ನಡೆಯಿತು.

Advertisement

ಜಿಲ್ಲಾ ಯುವ ಬ್ರಿಗೇಡ್‌ ಸಂಚಾಲಕ ಸಂಗಮೇಶ ಕೆಂಭಾವಿ ನೇತೃತ್ವದಲ್ಲಿ ಯುವಕರ ತಂಡ ಹಾಳು ಬಿದ್ದಿದ್ದ
ಉದ್ಯಾನವನ ಒಳಗೆ ಗುದ್ದಲಿ, ಬುಟ್ಟಿ, ಬಾರಿಗೆ ಹಿಡಿದು ಸ್ವತ್ಛತೆ ಕಾರ್ಯ ಕೈಗೊಂಡರು.

ಈ ಸಂದರ್ಭದಲ್ಲಿ ಸಂಗಮೇಶ ಕೆಂಭಾವಿ ಮಾತನಾಡಿ, ಸರಕಾರವೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ನಮ್ಮ
ಸುತ್ತಮುತ್ತಲಿನ ಪರಿಸರದ ಸ್ವತ್ಛತೆಯನ್ನು ನಾವು ಕಾಪಾಡಿಕೊಳ್ಳಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸ್ವತ್ಛತೆ ಇದ್ದರೆ ಯಾವುದೇ ರೋಗಗಳು ಬರುವುದಿಲ್ಲ ಎಂದರು.

ಪೌರಾಯುಕ್ತ ಸಂಗಪ್ಪ ಉಪಾಸೆ ಮಾತನಾಡಿ, ಸ್ವತ್ಛತೆ ಮಾಡುವ ಮೂಲಕ ಹೊಸ ವರ್ಷ ಆಚರಿಸುತ್ತಿದ್ದೇವೆ.
ಸ್ವತ್ಛತಾ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ಸಲಕರಣೆಗಳು ಹಾಗೂ ಕಾರ್ಮಿಕರನ್ನು ಒದಗಿಸುವ ಭರವಸೆ ನೀಡಿದರು.
ಮುಂಬರುವ ದಿನಗಳಲ್ಲಿ ಉದ್ಯಾನವನಕ್ಕೆ ಭದ್ರತೆ ಹಾಗೂ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸುವುದಾಗಿ ಹೇಳಿದರು. 

ಈ ಸಂದರ್ಭದಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತರಾದ ಸುರೇಶ ಕುರುಂದಿ, ಮಲ್ಲಿಕಾರ್ಜುನ ಕಟ್ಟಿಮನಿ, ನಿಖೀಲ್‌
ಪಾಟೀಲ್‌, ಸಾಗರ್‌ ಬೇಳಿಕಟ್ಟಿ, ಗುರು ಅಬ್ಬೆ ತುಮಕೂರ, ಶರಣಬಸವ, ಶಿವಕುಮಾರ ಎಲ್ಹೇರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next