Advertisement

ಈಕ್ವೇಸ್ಟ್ರಿಯನ್‌ ಅನುಷ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌  ಟಿಕೆಟ್‌

11:23 PM Feb 20, 2024 | Team Udayavani |

ಹೊಸದಿಲ್ಲಿ: ಏಷ್ಯನ್‌ ಗೇಮ್ಸ್‌ ಪದಕ ವಿಜೇತ ಈಕ್ವೇಸ್ಟ್ರಿಯನ್‌ ಅನುಷ್‌ ಅಗರ್ವಲ್ಲ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿದ್ದಾರೆ. ಅವರು “ಡ್ರೆಸ್ಸೇಜ್‌ ಡಿಸಿಪ್ಲಿನ್‌’ ವಿಭಾಗದಲ್ಲಿ ಈ ಅರ್ಹತೆ ಗಳಿಸಿದರೆಂದು ಈಕ್ವೇಸ್ಟ್ರಿಯನ್‌ ಫೆಡರೇಶನ್‌ ಆಫ್ ಇಂಡಿಯಾ (ಇಎಫ್ಐ) ತಿಳಿಸಿದೆ.

Advertisement

24 ವರ್ಷದ ಕುದುರೆ ಸವಾರ ಅನುಷ್‌ ಕಳೆದ ಹ್ಯಾಂಗ್‌ಝೂ ಏಷ್ಯಾಡ್‌ನ‌ ವೈಯಕ್ತಿಕ ಡ್ರೆಸ್ಸೇಜ್‌ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಬಾರಿ ಎಫ್ಇಐ ಪಂದ್ಯಾವಳಿಗಳಲ್ಲಿ ತೋರ್ಪಡಿಸಿದ ಒಟ್ಟಾರೆ ಸಾಧನೆ ಮಾನದಂಡದಂತೆ ಪ್ಯಾರಿಸ್‌ ಅರ್ಹತೆ ಲಭಿಸಿದೆ. ಪೋಲೆಂಡ್‌ (73.485), ನೆದರ್ಲೆಂಡ್ಸ್‌ (74.4), ಫ್ರ್ಯಾಂಕ್‌ಫ‌ರ್ಟ್‌ (72.9), ಬೆಲ್ಜಿಯಂನಲ್ಲಿ (74.2) ಅನುಷ್‌ ಸಾಧನೆ ಗಮನಾರ್ಹ ಮಟ್ಟದಲ್ಲಿತ್ತು.

ಇದಕ್ಕೂ ಮುನ್ನ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿದ್ದ ಭಾರತೀಯರೆಂದರೆ ದರ್ಯಾ ಸಿಂಗ್‌ (1980, ಮಾಸ್ಕೊ), ಇಂದ್ರಜಿತ್‌ ಲಾಂಬಾ (1996, ಅಟ್ಲಾಂಟಾ), ಇಮಿ¤ಯಾಜ್‌ ಅನೀಸ್‌ (2000, ಸಿಡ್ನಿ) ಮತ್ತು ಫ‌ವಾದ್‌ ಮಿರ್ಜಾ (2022, ಟೋಕಿಯೊ).

“ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ನನ್ನ ಬಾಲ್ಯದ ಕನಸಾಗಿತ್ತು. ಅದೀಗ ಸಾಕಾರಗೊಳ್ಳುತ್ತಿದೆ. ಬಹಳ ಹೆಮ್ಮೆ ಆಗುತ್ತಿದೆ. ಇದೊಂದು ಐತಿಹಾಸಿಕ ಕ್ಷಣ…’ ಎಂಬು ದಾಗಿ ಅನುಷ್‌ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next