Advertisement
ಒಲಿಂಪಿಕ್ಸ್‌ನ ಈವರೆಗಿನ 20 ಬಾಸ್ಕೆಟ್‌ಬಾಲ್ ಪಂದ್ಯಾವಳಿಗಳ ಇತಿಹಾಸದಲ್ಲಿ ಅಮೆರಿಕಕ್ಕೆ ಒಲಿದ 17ನೇ ಚಿನ್ನದ ಪದಕ ಇದಾಗಿದೆ. ಸ್ಟೀಫನ್ ಕರ್ರಿ 24 ಅಂಕ ಗಳಿಸಿ ಅಮೆರಿಕದ ಗೆಲುವಿನ ಹೀರೋ ಎನಿಸಿದರು. ಎಲ್ಲವೂ “ತ್ರೀ ಪಾಯಿಂಟರ್’ಗಳಾಗಿದ್ದವು. ಇದರೊಂದಿಗೆ ಅವರು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಒಟ್ಟು 17 ತ್ರೀ ಪಾಯಿಂಟರ್‌ಗಳೊಂದಿಗೆ ಮಿಂಚಿದರು.
Related Articles
Advertisement
ಮಸಾಯ್ ರಸೆಲ್‌ಗೆ ಹರ್ಡಲ್ಸ್ ಚಿನ್ನವನಿತೆಯರ 100 ಮೀ. ಹರ್ಡಲ್ಸ್ ನಲ್ಲಿ ಅಮೆರಿಕದ ಮಸಾಯ್ ರಸೆಲ್ ಚಿನ್ನದ ಪದಕ ಗೆದ್ದರು. ಅವರು 12.33 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಬೆಳ್ಳಿ ಪದಕ ಫ್ರಾನ್ಸ್‌ನ ಸಾಂಬಾ ಮಯೇಲಾ ಪಾಲಾಯಿತು (12.34 ಸೆಕೆಂಡ್). ಇದು ಪ್ಯಾರಿಸ್ ಕೂಟದಲ್ಲಿ ಆತಿಥೇಯ ಫ್ರಾನ್ಸ್‌ಗೆ ಒಲಿದ ಮೊದಲ ಟ್ರ್ಯಾಕ್ ಪದಕವಾಗಿತ್ತು. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾಕ್ರಾನ್ ಸ್ಟಾಂಡ್‌ನಲ್ಲಿ ಕುಳಿತು ಈ ಸ್ಪರ್ಧೆಯನ್ನು ವೀಕ್ಷಿಸಿದರು. ಪೋರ್ಟೊ ರಿಕೋದ ಕಮಾಚೊ ಕ್ವಿನ್ ಕಂಚು ಗೆದ್ದರು (12.36 ಸೆ.).ರಿಸಲ್ಟ್ ಬೋರ್ಡ್‌ನಲ್ಲಿ ಈ ಸ್ಪರ್ಧೆಯ ಫಲಿತಾಂಶ ತಪ್ಪಾಗಿ ಕಾಣಿಸ ಲ್ಪಟ್ಟು, ಕ್ಷಣ ಕಾಲ ಗೊಂದಲವಾಯಿತು. ಮೊದಲ ಸ್ಥಾನ ದಲ್ಲಿ ಸಾಂಬಾ ಮಯೇಲಾ, ಬಳಿಕ ಕಮಾಚೊ ಕ್ವಿನ್ ಹೆಸರು ಮೂಡಿ ಬಂದಿತ್ತು. ಬಳಿಕ ಈ ತಪ್ಪನ್ನು ಸರಿಪಡಿಸಲಾಯಿತು. ರಿಲೇಯಲ್ಲಿ ಒಲಿಯಿತು ಅವಳಿ ಸ್ವರ್ಣ
ಪುರುಷರ ಹಾಗೂ ವನಿತೆಯರ 4×400 ಮೀ. ರಿಲೇ ಸ್ಪರ್ಧೆಯ ಚಿನ್ನದ ಪದಕಗಳೆರಡೂ ಅಮೆರಿಕ ಪಾಲಾಗಿದೆ. ಸೈಂಟ್ ಡೆನಿಸ್‌ನಲ್ಲಿ ನಡೆದ ಪುರುಷರ ರಿಲೇಯಲ್ಲಿ 2:54.43 ನಿಮಿಷಗಳ ನೂತನ ಒಲಿಂಪಿಕ್ ದಾಖಲೆಯೊಂದಿಗೆ ಮೊದಲ ಸ್ಥಾನ ಅಲಂಕರಿಸಿತು. ಕ್ರಿಸ್ಟೋ ಫರ್ ಬೈಲಿ, ವೆರ್ನನ್ ನಾವುìಡ್, ಬ್ರೈಸ್ ಡೆಡ್‌ಮಾನ್ ಮತ್ತು ರಾಯ್ ಬೆಂಜಮಿನ್ ವಿಜೇತ ತಂಡದಲ್ಲಿದ್ದರು. ಇವರಲ್ಲಿ ರಾಯ್ ಬೆಂಜಮಿನ್ ಪುರುಷರ 400 ಮೀ. ಹರ್ಡಲ್ಸ್ ನಲ್ಲೂ ಚಿನ್ನದ ಪದಕ ಜಯಿಸಿದ್ದರು. ರಾಯ್ ಬೆಂಜಮಿನ್ ಮತ್ತು ಬೋಟ್ಸ್‌ವಾನಾದ 21 ವರ್ಷದ ಲೆಟ್ಸೆಲ್ ಟೆಬೊಗೊ ನಡುವಿನ ಕೊನೆಯ ಕ್ಷಣದ ಜಿದ್ದಾಜಿದ್ದಿ ಹಣಾಹಣಿ ತೀವ್ರ ಕುತೂಹಲ ಹುಟ್ಟಿಸಿತ್ತು. ಬೋಟ್ಸ್‌ವಾನಾ ಬೆಳ್ಳಿ (2:54.53) ಹಾಗೂ ಗ್ರೇಟ್ ಬ್ರಿಟನ್ ಕಂಚು ಗೆದ್ದಿತು (2:55.83). ಬೋಟ್ಸ್‌ವಾನಾ ನೂತನ ಆಫ್ರಿಕನ್ ದಾಖಲೆ ಸ್ಥಾಪಿಸಿದರೆ, ಗ್ರೇಟ್ ಬ್ರಿಟನ್ ನೂತನ ಯೂರೋಪಿಯನ್ ದಾಖಲೆ ಬರೆಯಿತು. ವನಿತೆಯರಿಗೆ ಸತತ 8ನೇ ಚಿನ್ನ
ವನಿತೆಯರ 4×400 ಮೀ. ರಿಲೇಯಲ್ಲಿ ಅಮೆರಿಕ ಸತತ 8ನೇ ಬಂಗಾರ ಗೆದ್ದು ಪ್ರಭುತ್ವ ಸಾಧಿಸಿತು. ಶಮೀರ್ ಲಿಟ್ಲ, ಸಿಡ್ನಿ ಮೆಕ್‌ಲವಿÉನ್, ಗಾಬ್ಬಿ ಥಾಮಸ್, ಅಲೆಕ್ಸಿಸ್ ಹೋಮ್ಸ್ ಅವರನ್ನೊಳಗೊಂಡ ತಂಡ 3:15.30 ನಿಮಿಷಗಳಲ್ಲಿ ಗುರಿ ಮುಟ್ಟಿತು. ಕೇವಲ 0.1 ಸೆಕೆಂಡ್‌ಗಳಿಂದ ಒಲಿಂಪಿಕ್ಸ್ ದಾಖಲೆಯಿಂದ ವಂಚಿತವಾಯಿತು. ದಾಖಲೆ ಸೋವಿಯತ್ ಯೂನಿಯನ್ ಹೆಸರಲ್ಲಿದೆ. ಅದು 1988ರ ಒಲಿಂಪಿಕ್ಸ್‌ನಲ್ಲಿ ಇದನ್ನು ಸಾಧಿಸಿತ್ತು.
ವಿಜೇತ ತಂಡದ ಗಾಬ್ಬಿ ಥಾಮಸ್ 200 ಮೀ. ರೇಸ್ ಹಾಗೂ 4×100 ಮೀ. ರಿಲೇಯಲ್ಲೂ ಚಿನ್ನದ ಪದಕ ಜಯಿಸಿದ್ದರು. ನೆದರ್ಲೆಂಡ್ಸ್ ಬೆಳ್ಳಿ (3:19.50) ಮತ್ತು ಇವರಿಗಿಂತ 0.22 ಸೆಕೆಂಡ್‌ಗಳಷ್ಟು ಹಿನ್ನಡೆ ಕಂಡ ಗ್ರೇಟ್ ಬ್ರಿಟನ್ ಕಂಚು ಜಯಿಸಿತು.