ಕೈರೊ (ಈಜಿಪ್ಟ್): ಭಾರತದ ಯುವ ಶೂಟರ್ ರುದ್ರಾಂಕ್ಷ್ ಪಾಟೀಲ್ ಐಎಸ್‌ಎಸ್‌ಎಫ್ ವರ್ಲ್ಡ್ ಚಾಂಪಿಯನ್‌ಶಿಪ್ ಶೂಟಿಂಗ್‌ನಲ್ಲಿ ಚಿನ್ನದ ಪದಕಕ್ಕೆ ಗುರಿ ಇರಿಸಿದ್ದಾರೆ.
10 ಮೀ. ಏರ್ ರೈಫಲ್ ವಿಭಾಗದಲ್ಲಿ ಈ ಸಾಧನೆಗೈದು 2024ರ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದರು.
18 ವರ್ಷದ ರುದ್ರಾಂಕ್ಷ್ ಪಾಟೀಲ್ ಇಟಲಿಯ ಡ್ಯಾನಿಲೊ ಡೆನ್ನಿಸ್ ಸೊಲಾಝೊ ವಿರುದ್ಧ 17-13 ಅಂತರದ ಗೆಲುವು ಸಾಧಿಸಿದರು. ಒಂದು ಹಂತದಲ್ಲಿ ಪಾಟೀಲ್ 4-10ರ ಹಿನ್ನಡೆಯಲ್ಲಿದ್ದರು.
ರುದ್ರಾಂಕ್ಷ್ ಪಾಟೀಲ್ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ ಭಾರತದ ಎರಡನೇ ಶೂಟರ್. ಭೌನೀಶ್ ಮೆಂಡಿರಟ್ಟ ಮೊದಲಿಗ. ಅವರೊ ಕ್ರೊವೇಶಿಯಾದಲ್ಲಿ ನಡೆದ ಶಾಟ್‌ಗನ್ ವಿಶ್ವ ಚಾಂಪಿಯನ್‌ಶಿಪ್ ಟ್ರ್ಯಾಪ್ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ್ದರು.
ಬಿಂದ್ರಾ ಬಳಿಕ ಪಾಟೀಲ್
ರುದ್ರಾಂಕ್ಷ್ ಪಾಟೀಲ್ ಐಎಸ್‌ಎಸ್‌ಎಫ್ ವರ್ಲ್ಡ್ ಚಾಂಪಿಯನ್‌ಶಿಪ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಕೇವಲ ದ್ವಿತೀಯ ಶೂಟರ್. 2008ರ ಬೀಜಿಂಗ್ ಒಲಿಂಪಿಕ್ಸ್ ಚಾಂಪಿಯನ್ ಅಭಿನವ್ ಬಿಂದ್ರಾ ಮೊದಲಿಗ. ಅವರು 2006ರ ಝಾಗ್ರೆಬ್ ಟೂರ್ನಿಯ 10 ಮೀ. ಏರ್ ರೈಫಲ್ ವಿಭಾಗದಕಲ್ಲಿ ಬಂಗಾರ ಜಯಿಸಿದ್ದರು.