Advertisement
ಹೌದು, ಸುಮಾರು ವರ್ಷಗಳಿಂದ ಅವನು ಬದುಕಿ¨ªೆಲ್ಲಿ, ದಿನ ಬೆಳಗಾದರೆ ರಾಜ್ಯ ರಕ್ಷಣೆ, ವಿಸ್ತರಣೆಯ ಹೆಸರಲ್ಲಿ , ಶಿಷ್ಟರ ರಕ್ಷಣೆಯ ನೆಪದಲ್ಲಿ ಯುದ್ಧ, ರಕ್ತ, ದ್ವೇಷ, ಕುತಂತ್ರ. ಸಾಲದ್ದಕ್ಕೆ ಪಟ್ಟದರಸಿಯರ ಜಗಳ, ಮುನಿಸು, ಮಾತ್ಸರ್ಯ. ಅವರನ್ನು ಸಮಾಧಾನಪಡಿಸಲು ಮತ್ತೆ ಹಲವಾರು ಪ್ರಹಸನಗಳು. ಒಂದೇ ಎರಡೇ, ಇಂಥ ಹಲವಾರು ಗೊಂದಲಗಳಲ್ಲಿ ಅನುಕ್ಷಣವೂ ಸತ್ತದ್ದೇ ಹೆಚ್ಚು. ಕುರುಕ್ಷೇತ್ರ ಮಹಾಯುದ್ಧದ ಹಸಿ ಹಸಿ ನೆನಪು ಬೇರೆ ಆಗಾಗ ಕಣ್ಮುಂದೆ ಹಾದು ಕಂಗಾಲಾಗಿಸುತ್ತದೆ. ಸಾಮಾನ್ಯ ವ್ಯಕ್ತಿಗಿರುವ ಸ್ವಾತಂತ್ರ್ಯ ನನ್ನಂಥವನಿಗೆಲ್ಲಿಂದ ಬರಬೇಕು. ನನ್ನ ನಡೆ, ನುಡಿ, ನಗು, ಅಳು, ಪ್ರೀತಿ, ದ್ವೇಷ ಯಾವುದೂ ಈಗ ಖಾಸಗಿಯಾಗುಳಿದಿಲ್ಲ.
ಇಂಥ ಹುಡುಗಾಟದ ದಿನಗಳಲ್ಲೂ ಆಗಾಗ ಮನಸ್ಸು ಖನ್ನವಾಗುತ್ತಿತ್ತು. ಒಮ್ಮೊಮ್ಮೆ ಕಾರಣಗಳ ಮಹಾಪೂರವೇ ಇರುತ್ತಿದ್ದರೂ ಇನ್ನೊಮ್ಮೆ ವಿನಾಕಾರಣವಾಗಿ ಮನಸ್ಸನ್ನು ಖಾಲಿತನ ಆವರಿಸಿಬಿಡುತ್ತಿತ್ತು. ತಾನು ಹುಟ್ಟುವ ಮುಂಚಿನಿಂದಲೂ ಕಾರಾಗೃಹವಾಸವನ್ನನುಭವಿಸಿದ, ಹುಟ್ಟಿದ ಮೇಲೂ ತನ್ನನ್ನುಳಿಸಿಕೊಳ್ಳಲು ಪಡಬಾರದ ಪಾಡು ಪಟ್ಟ ತನ್ನ ತಂದೆತಾಯಿಗಳ ಗೋಳನ್ನು ನೆನೆದು ಉಮ್ಮಳಿಸುತ್ತಿದ್ದ. ಎಲ್ಲಿಯೋ ಬೆಳೆಯಬೇಕಾದವ ಮತ್ತೆಲ್ಲಿಯೋ ಬೆಳೆಯಬೇಕಾಗಿ ಬಂದ ಅನಿವಾರ್ಯತೆಯನ್ನು ಹಳಿಯುತ್ತ ಕೆಂಗಣ್ಣನಾಗುತ್ತಿದ್ದ. ಪೂತನಿಯಂಥ ರಕ್ಕಸರನ್ನು ಕೊಂದು ಬಾಯಿ ರಕ್ತವಾಗಿಸಿಕೊಂಡದ್ದು, ಸೋದರಮಾವನಾಗಿದ್ದರೂ ಕಂಸನನ್ನು ಕೊಲ್ಲಲೇಬೇಕಾದ ಕೆಟ್ಟ ನೆನಪುಗಳಿಂದ ತಳಮಳಿಸುತ್ತಿದ್ದ. ಅವನೆದೆಯ ಶಾಂತ ಕಡಲಲ್ಲಿ ಇಂಥ ಅಸಹನೆಯ ತೆರೆಗಳು ಆಗಾಗ ಎದ್ದು ಕೋಲಾಹಲವೆಬ್ಬಿಸುತ್ತಿದ್ದವು. ಆ ಕೋಲಾಹಲ ಎಷ್ಟು ಭಯಂಕರವಾಗಿರುತ್ತಿತ್ತೆಂದರೆ ತಾಯಿ ಯಶೋದೆಯ ಮಮತೆ, ಆತ್ಮೀಯ ಗೆಳೆಯರ ಸಖ್ಯ, ಅಂಬಾ… ಎಂದು ಪ್ರೀತಿಯನ್ನು ತೋರುವ ಗೋವುಗಳು, ಹಸಿರು ಹೊದ್ದ ಬೆಟ್ಟಗಳು, ಜುಳು ಜುಳು ಹರಿವ ನದಿ, ತಂಪಾದ ಗಾಳಿ ಯಾವುವೂ ಸಮಾಧಾನ ನೀಡುತ್ತಿರಲಿಲ್ಲ. ಆಗ ತನ್ನ ಸಖನಂತಿದ್ದ ಮುರಲಿಯನ್ನು ತೆಗೆದುಕೊಂಡು ಯಾರೂ ಇಲ್ಲದ ದೂರ ಕಾಡಿಗೆ ಹೋಗಿ ಒಬ್ಬನೇ ಕುಳಿತು ಮನಸ್ಸಿಗೆ ಸಾಕೆನ್ನುವವರೆಗೂ ಮುರಲಿಯನ್ನೂದುತ್ತಿದ್ದ ದಿನಗಳ ನೆನಪಾಗಿ ಕೃಷ್ಣನ ಕಣ್ಣು ಹನಿಗೂಡಿದವು. ಆಗಲೇ ಅವಳು ಬಂದಿದ್ದು. ನನ್ನ ಮುರಲಿಯ ನಾದದಲ್ಲಿದ್ದ ಅಸಾಧ್ಯ ನೋವನ್ನರಿತುಕೊಂಡವಳು; ನನ್ನ ದುಃಖದ ಭಾರಕ್ಕೆ ಹೆಗಲಾದವಳು, ಕಣ್ಣೀರ ಮಡುವಿಗೆ ಕಾಲುವೆಯಾದವಳು. ನನ್ನ ಮುರಲಿಯ ಆಲಾಪದಲ್ಲಿ ಪ್ರೀತಿ, ಅಂತಃಕರುಣ, ತುಂಬಿದವಳು. ನಿಸ್ವಾರ್ಥ ಸ್ನೇಹದೊರತೆಯನ್ನು ತೋಡಿ ಮೊಗೆ ಮೊಗೆದು ಒಲವನ್ನೇ ಕುಡಿಸಿದವಳು. ರಾಧೆ. ನನ್ನ ರಾಧೆ.
Related Articles
Advertisement
ಹಕ್ಕಿಗಿಲಕಿಗಳಿಗೂ ಗಾನದ ಗುಂಗು ಹಿಡಿದಿದ್ದು. ನನ್ನ ಮುರಲಿಗೆ ಒಂದು ಮೋಹಕತೆ ಬಂದಿದ್ದು, ಅದರ ನಾದಕ್ಕೆ ದೈವಿಕತೆ ತುಂಬಿದ್ದು. ನಾನವಳನ್ನು ಆಗಾಗ ಯಮುನೆಯ ತಟಕ್ಕೆ ಕರೆದು ಕಾಡಿಸುತ್ತಿ¨ªೆ. ಅವಳು ಅಲ್ಲಿ ಬರಲು ಅದೆಷ್ಟು ಕಷ್ಟ ಪಡುತ್ತಿದ್ದಳ್ಳೋ ಅದಕ್ಕಿಂತ ಹತ್ತು ಪಟ್ಟು ಕಷ್ಟವನ್ನು ಬಿಟ್ಟುಹೋಗಲು ಪಡುತ್ತಿದ್ದಳು.
“ಪ್ರಭು… ‘ಓಹ್ ಮತ್ತೆ ಬಂದಿರಾ? ಪ್ರಭುವಂತೆ ಪ್ರಭು… ಈ ಉಪಾಧಿಗಳ ಭಾರ ಹೊತ್ತು ನನಗೆ ಸಾಕಾಗಿಹೋಗಿದೆ. ರಮಣ, ಕಾಂತ, ಭೂಪಾಲ, ಭೂಪತಿ, ಪತಿ, ಒಡೆಯ, ಪ್ರಿಯ, ಈ ಎಲ್ಲ ಪದಗಳೊಳಗಿನ ಟೊಳ್ಳು ಅರ್ಥವಾಗಿದೆ. ರಾಧೆ ಎಂದೂ ಹೀಗೆ ಕರೆಯುತ್ತಿರಲಿಲ್ಲ. ಅವಳು ತುಂಬಾ ಆತ್ಮೀಯತೆಯಿಂದ “ಕಾನ್ಹಾ’ ಎನ್ನುತ್ತಿದ್ದಳಷ್ಟೇ. ಅವಳು ಹಾಗೆ ಕರೆದಾಗಲೆಲ್ಲ ನಾನು ಸಂಪೂರ್ಣವಾಗಿ ಸೋತು ಹೋಗುತ್ತಿ¨ªೆ. ಅವಳದು ನಿಸ್ವಾರ್ಥ ಪ್ರೇಮ, ನಿರ್ಭಿಡೆಯ ಗೆಳೆತನ. ಅವಳ ಆ ಸಖ್ಯ ಎಷ್ಟೊಂದು ಆಪ್ತವಾಗಿರುತ್ತಿತ್ತು. ಯಾವ ಅಲಂಕಾರವನ್ನು ಮಾಡಿಕೊಳ್ಳದೆಯೂ ನನ್ನನ್ನು ಸೂಜಿಗಲ್ಲಿನಂತೆ ಸದಾ ಸೆಳೆಯುತ್ತಿದ್ದಳು. ಈಗ ನನ್ನ ಅಂತಃಪುರದ ಅರಸಿಯರಿಗೆ ಒಂದೊಂದು ಪ್ರತ್ಯೇಕ ಮನೆಗಳು, ಅಲ್ಲಿ ಪ್ರತ್ಯೇಕ ಸ್ನಾನಗೃಹಗಳು. ಬಗೆ ಬಗೆಯ ಸುಗಂಧ ದ್ರವ್ಯಗಳು, ಅಲಂಕರಿಸಿಕೊಳ್ಳಲೆಂದೇ ನಿರ್ಮಾಣಗೊಂಡಿರುವ ಪ್ರತ್ಯೇಕ ಕೊಠಡಿಗಳು. ಬೆಲೆಬಾಳುವ ರನ್ನಗನ್ನಡಿಗಳು. ಕೃಷ್ಣ ಬೇಡ ಬೇಡವೆಂದರೂ ಮನಸ್ಸು ತುಲನೆ ಮಾಡುತ್ತಲೇಯಿತ್ತು.
ದನ ಕಾಯುತ್ತ ಓಡಾಡುವಾಗ ತನಗೆ ಮುಳ್ಳು ಚುಚ್ಚಿದರೂ ರಾಧೆಗೆ ನೋವಾಗುತ್ತಿತ್ತು. ರಾಧೆಯನ್ನು ನೋಡಬೇಕೆನಿಸಿದರೆ ಮುರಲಿಯನೂದಿದರೆ ಸಾಕು, ಅದಾವ ಮಾಯೆಯಿಂದ ಕೇಳಿಸಿಕೊಳ್ಳುತ್ತಿದ್ದಳ್ಳೋ ಕ್ಷಣಾರ್ಧದಲ್ಲಿ ಪ್ರತ್ಯಕ್ಷವಾಗಿಬಿಡುತ್ತಿದ್ದಳು. ಕೃಷ್ಣನ ಕಣ್ಣು ತುಂಬಿದವು. ಈಗ ಮುರಲಿ ಎÇÉೋ. ಅದರ ಜಾಗವನ್ನು ಖಡ್ಗ ಆಕ್ರಮಿಸಿಕೊಂಡಿದೆ. ಮುರಲಿಗೆ ಜೀವಗಳನ್ನು ಸೆಳೆಯುವ, ಆನಂದ ನೀಡುವ, ಪ್ರೀತಿಸುವ, ಬದುಕಿಸುವ, ಬೆಳೆಸುವ ಹಂಬಲ. ಆದರೆ ಖಡ್ಗಕ್ಕೆ ಬರೀ ರಕ್ತದ ದಾಹ. ಸುಯೆÂಂದು ಗಾಳಿ ಬೀಸಿತು. ಆಹಾ ಎಂಥ ಸುಗಂಧಿತ ಗಾಳಿಯಿದು? ಹೂವ ಪರಿಮಳವ ಹೊತ್ತು ತರುತ್ತಿದೆ. ಹಾ… ಎಂದು ಅÇÉೇ ಕಲ್ಲಿಗೊರಗಿದ ಗೋಪಾಲ. ಮತ್ತೆ ಬೀಸಿತು ಗಾಳಿ. ಯಾಕೋ ಈ ಗಾಳಿ ವಿಶೇಷವಾಗಿದೆ. ವಿಚಿತ್ರ ಘಮಲು ಎನಿಸುತ್ತಲೂ ಆ ಗಂಧದ ತೀವ್ರತೆ ಸಮೀಪಿಸುತ್ತಿದೆಯೆನಿಸತೊಡಗಿತು. ಏನಿದು ಸುಗಂಧ ಯಾವ ಹೂವಿನದು? ಹೊಸದೆನಿಸುತ್ತಿದೆಯಲ್ಲ ಅಥವಾ ಈ ರಾಜ್ಯಭಾರದ ಗದ್ದಲದಲ್ಲಿ ನಾನೇ ಹೂಗಳ ಗಂಧವನ್ನು ಮರೆತಿದ್ದೇನೆಯೇ ಎಂದುಕೊಳ್ಳುವಷ್ಟರಲ್ಲಿ “ನಾರಾಯಣ ನಾರಾಯಣ’ ಎಂಬ ಪರಿಚಿತ ಧ್ವನಿ. ಓಹ್ ನಾರದ! ಇತ್ತಲೇ ಬರುತ್ತಿ¨ªಾನೆ. “ಏನು ಪ್ರಭುಗಳು, ಯಾವ ಸವಿನೆನಪಿನ ರಸಗಳಿಗೆಯಲ್ಲಿದ್ದೀರಿ?’ ಈ ನಾರದ ಹೀಗೆಯೇ ತಿವಿ ತಿವಿದು ಮಾತಾಡುತ್ತಾನೆ, ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ಬೆಂಕಿ ಹಚ್ಚುವುದೇ ಇವನ ಕೆಲಸ. ಈಗ ಅದಾವ ಬೆಂಕಿ ತಂದಿ¨ªಾನೋ ಎಂದುಕೊಳ್ಳುತ್ತಲೇ ಅವನ ಕೈಯಲ್ಲಿ ಬೆಳ್ಳಗೆ ಹೊಳೆಯುವ ನಕ್ಷತ್ರದಂತಹ ಹೂಗಳನ್ನು ನೋಡಿ ಬೆರಗಾದ. “”ಇದೇನು ನಾರದರೇ” “”ಪ್ರಭು, ತಮಗೆ ತಿಳಿಯದ್ದೇನಿದೆ, ಇದು ಪಾರಿಜಾತ ಪುಷ್ಪ”
“ಓಹ್’ ಮತ್ತೆ ವ್ಯಂಗ್ಯ. ಈ ನಾರದ ಹೀಗೆಯೇ, ಈತನಷ್ಟೇ ಅಲ್ಲ. ಎಲ್ಲರೂ ಹೇಳುವುದೇ ಹೀಗೆ. ತಮಗೆ ತಿಳಿಯಲಾರದ್ದೇನಿದೆ ತಮಗೆ ತಿಳಿಯಲಾರದ್ದೇನಿದೆ ಎನ್ನುತ್ತ ನನ್ನನ್ನು ವಾಸ್ತವದಿಂದ ತೀರಾ ದೂರವಿಡುತ್ತಾರೆ. ಆಕಸ್ಮಿಕಗಳ ಅಚ್ಚರಿ, ಕುತೂಹಲ, ಆನಂದ, ಆಘಾತಗಳಿಂದ ನನ್ನನ್ನು ವಂಚಿಸಿಬಿಡುವುದು ಇವರ ಹುನ್ನಾರ. ಈ ಎಲ್ಲವನ್ನೂ ಬಲ್ಲ ದೇವನಾಗುತ್ತ ಗೊತ್ತಿರುವ ಘಟನೆಗಳÇÉೇ ಮತ್ತೆ ಮತ್ತೆ ಪಾತ್ರವಾಗುತ್ತ ನಾಟಕವಾಡಿ, ಆಡಿ ನನಗೂ ಸಾಕಾಗಿಹೋಗಿದೆ. “”ಅದೇ ಪ್ರಭು ಸಮುದ್ರಮಂಥನದಲ್ಲಿ ಸಿಕ್ಕಿದ್ದು, ದೇವೇಂದ್ರ, ದೇವಲೋಕದಲ್ಲಿ ನೆಟ್ಟಿ¨ªಾನೆ. ಎಂಥ ಸುಂದರ ಹೂಗಳು ಆ ಪಾರಿಜಾತ ವೃಕ್ಷದಲ್ಲಿ. ಅಂಥ ಸುಂದರ ಹೂವುಗಳು ತಮ್ಮ ಬಳಿ ಇರದಿದ್ದರೆ ಹೇಗೆ ಎನಿಸಿತು. ಅದಕ್ಕೇ ತಂದೆ” ಎಂದ ನಾರದನ ಮಾತಿಗೆ ಮಾಧವ ನಕ್ಕ. “”ಹೌದು ನಾರದರೇ ನೀವು ಯಾರಿಗಾಗಿ ಯಾವಾಗ ಏನನ್ನು ತರುತ್ತೀರೋ, ಅದರಿಂದೇನೇನಾಗುತ್ತದೋ ಬಲ್ಲವರಾರು?” ಎನ್ನುತ್ತ ಆ ಹೂವನ್ನು ಕೈಗೆ ತೆಗೆದುಕೊಂಡ. ಆಹಾ ಎಂಥ ಕೋಮಲ ಸ್ಪರ್ಶ! ಮದೋನ್ಮತ್ತಗೊಳಿಸುವ ಕಡುಸುಗಂಧ. ಗೊಲ್ಲನಾಗಿ¨ªಾಗ ತಾನು ಎಂತೆಂಥ ಹೂಗಳನ್ನು ಕಿತ್ತುಕೊಟ್ಟಿಲ್ಲ! ಮುಡಿಸಿಲ್ಲ ರಾಧೆಗೆ? ಇದು ಅವೆಲ್ಲವುಗಳಿಗಿಂತಲೂ ವಿಶೇಷವಾಗಿದೆ. ಎಷ್ಟೊಂದು ಸ್ನಿಗ್ಧ ಸೌಂದರ್ಯವಿದರದು! ಈಗ ರಾಧೆಯಿರಬಾರದಿತ್ತೇ ಎಂದುಕೊಳ್ಳುತ್ತಲೇ ನಾರದ ಅದನ್ನರಿತುಕೊಂಡವನಂತೆ “ನಾರಾಯಣ ನಾರಾಯಣ’ ಎಂದು ಪುನರುತ್ಛರಿಸಿದ- ನೀನೀಗ ರಾಧಾರಮಣನಲ್ಲ, ರುಕ್ಮಿಣಿ ರಮಣ, ಭಾಮಾವಲ್ಲಭ, ದ್ವಾರಕಾಧೀಶ್ವರ ಎಂಬುದನ್ನು ಅಣಕಿಸುವಂತೆ. ರಾಜಭವನಕ್ಕೆ ಮರಳುವ ಮುನ್ನವೇ ಕೃಷ್ಣ ತರುತ್ತಿದ್ದ ಪುಷ್ಪದ ಸುದ್ದಿಯೂ ಅದರ ಗಂಧದಂತೆ ಆಗಲೇ ಅಂತಃಪುರದವರೆಗೆ ತಲುಪಿ ಅಲ್ಲಿಯೂ ಮತ್ತೇರಿಸಿತ್ತು. ಎಲ್ಲರಿಗೂ ಕಾತರ, ಕುತೂಹಲ. ಓಡಿದಂತೆಯೇ ನಡೆದುಕೊಂಡು ಬರುತ್ತಿ¨ªಾಳೆ ರುಕ್ಮಿಣಿ. ನಾರದ ಮಹರ್ಷಿಗಳು ಬಂದಿದ್ದರು, “ನನಗಾಗಿಯೇ ನೀವು ಪಾರಿಜಾತ ಪುಷ್ಪ ತರುತ್ತಿದ್ದೀರೆಂದು ಹೇಳಿದರು’ ಎಂದು ಹೇಳುತ್ತಲೇ ಅಲ್ಲಿ ಭಟರು, ವಂದಿಮಾಗಧರು, ಸಾಮಾನ್ಯ ಪ್ರಜೆಗಳೂ ಸೇವಕರು ಇರುವರೆಂಬುದನ್ನೂ ಲೆಕ್ಕಿಸದೇ ಕೃಷ್ಣನ ತೋಳು ತಬ್ಬಿ ನಡೆಯತೊಡಗಿದಳು. ಆಹಾ ಎಂಥ ನಾಟಕ ! ಈ ನಾರದ ಇನ್ನೂ ಏನೇನು ಹೇಳಿರುವನೋ ಏನು ಕಥೆಯೋ ಎಂದು ಯೋಚಿಸುತ್ತ ಸುಮ್ಮನೇ ಹೆಜ್ಜೆ ಹಾಕಿದ ಕೃಷ್ಣ. ಅದಾಗಲೇ ರಾಜಭವನ ಅಲಂಕೃತಗೊಂಡಿತ್ತು. ಅದೂ ಥೇಟು ಮದುವೆಯ ದಿನದ ಪ್ರಸ್ಥದಂತೆ. ಇದು ಬೇಕಿತ್ತೇ. ಇದು ರುಕ್ಮಿಣಿಯದೇ ಕಿತಾಪತಿ. ಇದೆಲ್ಲ ಪ್ರೀತಿಗಾಗಿ ಅಂತೂ ಅಲ್ಲ ಕೇವಲ ಭಾಮೆಯ ಹೊಟ್ಟೆ ಉರಿಸುವುದಕ್ಕಾಗಿ. ಈ ಹೆಂಗಸರೇ ಹೀಗೆ, ತಾವು ತುಂಬಾ ಚೆನ್ನಾಗಿದ್ದೇವೆಂದು ಮತ್ತೂಬ್ಬರಿಗೆ ತೋರಿಸಿ ಅವರ ಹೊಟ್ಟೆ ಉರಿಸುವುದರಲ್ಲಿ ಇವರಿಗೆ ತುಂಬಾ ಖುಷಿ. ಈ ನಾರದ ಈಗೆಲ್ಲಿ ಹೋಗಿ¨ªಾನೆ, ಏನು ಮಾಡುತ್ತಿ¨ªಾನೆಂಬುದೇ ಚಿಂತೆ. ಆತ ಖಂಡಿತವಾಗಿಯೂ ಭಾಮೆಯಲ್ಲಿಗೇ ಹೋಗಿರುತ್ತಾನೆ, ಕೃಷ್ಣನಿಗೆ ವಿಚಿತ್ರವಾದ ಸಂಕಟ. ಇಡೀ ಅಂತಃಪುರ ಸಂಭ್ರಮದಲ್ಲಿತ್ತು. ಬಗೆ ಬಗೆಯ ಭಕ್ಷ್ಯಭೋಜ್ಯಗಳೂ ಸಿದ್ಧವಾಗತೊಡಗಿದ್ದವು.
.
“”ಅವಳು ಏನೆಂದುಕೊಂಡಿ¨ªಾಳೆ. ಪ್ರಭುವನ್ನೇನು ತನ್ನ ದಾಸನೆಂದುಕೊಂಡಿ¨ªಾಳೆಯೇ? ಯಾರು ಏನು ಹೇಳಿದರೂ ನಾನು ಕೇಳುವುದಿಲ್ಲ. ನಾನವರನ್ನು ಇಲ್ಲಿರಲು ಬಿಡುವುದಿಲ್ಲ. ಕರೆದುಕೊಂಡೇ ಹೋಗುವುದು”
ಕೃಷ್ಣ ಹೌಹಾರಿದ. ಇದು ಭಾಮೆಯಲ್ಲವೇ? ಇಲ್ಲಿಗೇಕೆ ಬಂದಳು. ಹೀಗೇಕೆ ಕೂಗಾಡುತ್ತಿ¨ªಾಳೆ? ಎಂದುಕೊಳ್ಳುತ್ತ ಅವಸರವಸರವಾಗಿ ಹೊರಗೆ ಬಂದ. ಹೆಚ್ಚಾ ಕಡಿಮೆ ನುಗ್ಗಿದಂತೆಯೇ ಭಾಮೆ ಒಳಬಂದಳು. ಕೋಪದಿಂದ ಬುಸುಗುಡುತ್ತಿ¨ªಾಳೆ. ಅವಳಿಗೆ ಈ ತನ್ನ ರೌದ್ರಾವತಾರವನ್ನು ರುಕ್ಮಿಣಿಗೆ ತೋರಿಸಬೇಕಾಗಿತ್ತು. ಇದೆಲ್ಲ ನಾರದನೇ ಹಚ್ಚಿದ ಬೆಂಕಿಯ ಝಳ ಎಂಬುದು ಕೃಷ್ಣನಿಗೆ ಸ್ಪಷ್ಟವಾಯಿತು. ಭಾಮೆಯ ಅವತಾರವನ್ನು ನೋಡಿ ಅವನಿಗೆ ತುಂಬಾ ಭಯವಾಯಿತು. “”ಭಾಮೆ ಶಾಂತಳಾಗು, ಇಲ್ಲಿರುವ ಸೇವಕರೆಲ್ಲ ನೋಡುತ್ತಿ¨ªಾರೆ. ಏನಿದು? ನಿನಗೇನು ಬೇಕು? ಏನಾಗಿದೆ ನಿನಗೆ?” ಕೃಷ್ಣ ಸಮಾಧಾನಪಡಿಸಲು ಹರಸಾಹಸಪಡುತ್ತಿದ್ದ. ಅವಳು ಶುದ್ಧ ಹಟಮಾರಿ. “”ನನಗೆಲ್ಲ ಗೊತ್ತು. ನೀವು ನನಗಾಗಿ ಪಾರಿಜಾತ ಪುಷ್ಪ ತಂದಿದ್ದಿರಿ. ಮಾರ್ಗ ಮಧ್ಯೆಯೇ ಈ ಮಿಟುಕಲಾಡಿ ಬಂದು ಅದನ್ನು ಕಿತ್ತುಕೊಂಡಿ¨ªಾಳೆ. ನನಗೆ ನಾರದರು ಎÇÉಾ ವಿಷಯವನ್ನು ಹೇಳಿ¨ªಾರೆ. ನನಗೆ ಆ ಹೂವು ಬೇಕೇಬೇಕು” ಎಂದಳು. ಆಗ ರುಕ್ಮಿಣಿ ಸುಮ್ಮನಿ¨ªಾಳೆ? ಅವಳು, “”ಆಹಹಹಾ ನೀನು ಬೇಕೆಂದರೆ ನಾನು ಕೊಟ್ಟುಬಿಡುತ್ತೇನೆ ಬಾ, ಈ ಹೂವು ತಂದಿದ್ದು ನನಗಾಗಿ, ನಿನಗಾಗಿ ಅಲ್ಲ” ಎಂದು ಲಟಕ್ಕನೇ ಮೂಗು ಮುರಿದಳು. “”ಪ್ರಭು ನೀವು ನನಗದನ್ನು ಕೊಡುತ್ತೀರೋ ಇಲ್ಲವೋ” ಎಂದು ಭಾಮೆ, “”ನಾನೇಕೆ ಕೊಡಲಿ” ಎಂದು ರುಕ್ಮಿಣಿ. ಜಗಳ ತಾರಕಕ್ಕೇರಿತು. ಯಾರನ್ನು, ಹೇಗೆ ಸಮಾಧಾನ ಮಾಡುವುದೋ ತಿಳಿಯದೇ ಕೃಷ್ಣ ಸುಮ್ಮನೇ ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟ. ಎಂಥೆಂಥ ರಕ್ಕಸರನ್ನು ಅನಾಯಾಸವಾಗಿ ಕೊಂದಿದ್ದ ತಾನು ಈ ಸಂದರ್ಭದಲ್ಲಿ ಏನೂ ಮಾಡಲಾರದೆ ಅಸಹಾಯಕನಾಗಿದ್ದ. ಆಗ ಯಾಕೋ ಅವನಿಗೆ ತಾನೆಷ್ಟು ದುರ್ಬಲ ಅನಿಸತೊಡಗಿತು. ಕೊನೆಗೆ ಭಾಮೆಯನ್ನು ಪಕ್ಕಕ್ಕೆ ಕರೆದು, “”ನಿನಗೂ ತಂದುಕೊಡುತ್ತೇನೆ ಮಾರಾಯ್ತಿ. ಈಗ ಸುಮ್ಮನಿರು ದಯವಿಟ್ಟು” ಎಂದು ಅಂಗಲಾಚಿದ. ಭಾಮೆ ಸ್ವಲ್ಪ ಹೊತ್ತು ಸುಮ್ಮನಿದ್ದು ಗಂಭೀರವಾಗಿ “ಸರಿ’ ಎಂದಳು. ಕೃಷ್ಣನಿಗೆ ಸಂತೋಷವಾಯಿತು. ಆದರೆ ಮುಂದುವರಿದು “”ನನಗೆ ಈ ಹೂವು ಬೇಡ. ನನಗೆ ಪಾರಿಜಾತ ವೃಕ್ಷವೇ ಬೇಕು” ಎಂದಳು. ಕೃಷ್ಣನಿಗೆ ಆಘಾತವಾದಂತಾಯಿತು. ನಾರದ ಮಾಡಿದ ಎಡವಟ್ಟಿನಿಂದ ಏನೇನು ಅನಾಹುತಗಳು ಕಾದಿವೆಯೋ ಎಂದು ಪರಿತಪಿಸತೊಡಗಿದ.
.
ಅರಮನೆಯ ಮುಖಮಂಟಪದಲ್ಲಿ ಆಸನವನ್ನಿರಿಸಿಕೊಂಡು ತುಂಬಾ ದಣಿದವನಂತೆ ಕುಳಿತಿದ್ದ ಕೃಷ್ಣ ಬೆಳೆದಿದ್ದ ಆ ಪಾರಿಜಾತವನ್ನೇ ನೋಡುತ್ತಿದ್ದ. ಈ ವೃಕ್ಷವನ್ನು ಇಲ್ಲಿ ತಂದು ನೆಡಲು ಏನೇನೆಲ್ಲ ಕಷ್ಟಪಡಬೇಕಾಯ್ತು. ಮನಸೊÕಪ್ಪದಿದ್ದರೂ ದೇವೇಂದ್ರನಲ್ಲಿ ಬೇಡಿಕೊಳ್ಳಬೇಕಾಯಿತು; ಅನಾವಶ್ಯಕ ಗೊಂದಲಗಳಿಂದಾಗಿ ಅವನೊಂದಿಗೆ ಯುದ್ಧವನ್ನೂ ಮಾಡಬೇಕಾಯ್ತು. ಛೇ, ಒಂದೇ ಒಂದು ಮರದ ಟೊಂಗೆಗಾಗಿ ಅದೂ ಈ ಹೆಂಡತಿಯರ ಜಿದ್ದಿಗಾಗಿ ಅಮಾಯಕರಾದ ಎಷ್ಟೊಂದು ಸೈನಿಕರು ತಮ್ಮ ಪ್ರಾಣವನ್ನೇ ತೆರಬೇಕಾಯಿತು. ಕೃಷ್ಣನಿಗೆ ತನ್ನ ಮೇಲೆ ತನಗೇ ನಾಚಿಕೆಯಾಯಿತು. ಈಗ ಪಾರಿಜಾತ ವೃಕ್ಷ ಸಮೃದ್ಧವಾಗಿ ಬೆಳೆದುನಿಂತಿದೆ. ನೆಟ್ಟಿದ್ದು ಭಾಮೆಯ ಮನೆಯ ಅಂಗಳದÇÉಾದರೂ ಅದು ಪಕ್ಕದÇÉೇ ಇರುವ ರುಕ್ಮಿಣಿಯ ಮನೆಯ ಹಜಾರಕ್ಕೆ ಕೊಂಬೆಯನ್ನು ಚಾಚಿ ಹೂಗಳು ಅಲ್ಲಿ ಬೀಳುತ್ತಿವೆ. ಈಗ ಇಬ್ಬರೂ ತುಂಬಾ ಸಂಭ್ರಮದಿಂದಿ¨ªಾರೆ. ಪಾರಿಜಾತ ವೃಕ್ಷವೇ ನನ್ನ ಮನೆಯ ಮುಂದಿದೆ, ಅದು ನನ್ನ ಮರ ಎಂಬ ಅಹಮಿಕೆಯಲ್ಲಿ ಭಾಮೆ, ಮರ ಅಲ್ಲಿದ್ದರೇನು ಹೂಗಳೆಲ್ಲ ನನ್ನ ಮನೆಯ ಮುಂದೆ ಎಂಬ ಜಾಣ್ಮೆಯಲ್ಲಿ ರುಕ್ಮಿಣಿ. ಇಬ್ಬರೂ ವಿಜಯದ ನಗೆ ಬೀರುತ್ತಾರೆ. ಈ ಹೂವು ವೃಕ್ಷಗಳ ಗು¨ªಾಟದಲ್ಲಿ ನಾನು ಯಾರಿಗೆ ಬೇಕಾದವನು ಎಂಬುದು ಕೃಷ್ಣನಿಗೆ ಈಗ ಅರ್ಥವಾಗುತ್ತಿಲ್ಲ. ಯಾಕೆಂದರೆ, ಈಗ ತನ್ನನ್ನು ಯಾರೂ ಕೇಳುತ್ತಿಲ್ಲ. ಮಾತನಾಡಿಸುತ್ತಲೂ ಇಲ್ಲ. ಅವನಿಗೆ ಅಚ್ಚರಿಯಾಯ್ತು. ಯಾಕೋ ರಾಧೆ ನೆನಪಾದಳು ಮತ್ತೆ. ಅವಳೆದುರು ಈ ವೃಕ್ಷ ಮತ್ತು ಪುಷ್ಪಗಳ ಆಯ್ಕೆ ಇದ್ದಿದ್ದರೆ ಏನು ಮಾಡುತ್ತಿದ್ದಳು? ಅವಳು ಇವೆರಡನ್ನೂ ಬಿಟ್ಟು ನನ್ನನ್ನು ಆರಿಸಿಕೊಳ್ಳುತ್ತಿದ್ದಳು. ಕೃಷ್ಣನ ಮುಖದಲ್ಲಿ ಮಂದಹಾಸ ಮೂಡಿತು; ಕಣ್ಣಂಚಿನಲ್ಲಿ ನೀರೂ. – ಮಾರುತಿ ದಾಸಣ್ಣನವರ ಕೌಶಾಂಬಿ