Advertisement

ನವಜಾತನಿಗೆ ‘ಮೋದಿ’ಹೆಸರು ಬಂದದ್ದು ಹೀಗೆ!

03:55 PM May 30, 2019 | Team Udayavani |

ದುಬೈ: ಉತ್ತರ ಪ್ರದೇಶದ ಮುಸ್ಲಿಂ ಮಹಿಳೆಯೊಬ್ಬರು ಮೇ 23ರಂದು ಜನಿಸಿದ್ದ ತಮ್ಮ ಶಿಶುವಿಗೆ ನರೇಂದ್ರ ದಾಮೋದರ್‌ ಮೋದಿ ಎಂದು ನಾಮಕರಣ ಮಾಡಲು ಹೊರಟಿರುವುದು ವರದಿಯಾಗಿತ್ತು. ಆದರೆ, ದೂರದ ದುಬೈನಲ್ಲಿ ಸೇವೆ ಸಲ್ಲಿಸುತ್ತಿರುವ ಆ ಮಗುವಿನ ತಂದೆ ಮುಷ್ತಾಕ್‌ ಅಹ್ಮದ್‌ (29) ತನ್ನ ಮಗನಿಗೆ ಮೋದಿ ಹೆಸರಿಟ್ಟ ಹಿಂದಿನ ಕಾರಣ ತಿಳಿಸಿದ್ದಾರೆ.

Advertisement

“ಫ‌ಲಿತಾಂಶದ ದಿನವೇ ಪತ್ನಿಗೆ ಹೆರಿಗೆಯಾಗಿತ್ತು. ಅಂದೇ ಆಕೆ ಫೋನಿನಲ್ಲಿ ಈ ವಿಚಾರ ತಿಳಿಸಿದರು. ಆಗ ನಾನು ಚುನಾವಣಾ ಫ‌ಲಿತಾಂಶ ಏನಾಯ್ತು ಎಂದು ಕೇಳಿದೆ. ಅದಕ್ಕೆ ಅವರು, ದೇಶಕ್ಕೂ ಮೋದಿ ಬಂದಿದ್ದಾರೆ. ನಮ್ಮ ಮನೆಗೂ ಮೋದಿ ಬಂದಿದ್ದಾರೆ ಎಂದರು. ಇದೇ ನಮಗೆ ಮೋದಿ ಹೆಸರಿಡಲು ಪ್ರೇರಣೆಯಾಯಿತು” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next