Advertisement

ಮಕ್ಕಳ ತಪ್ಪಿಗೆ ಪೋಷಕರು ಜೈಲಿಗೆ

06:00 AM Apr 29, 2018 | Team Udayavani |

ಹೈದರಾಬಾದ್‌: ಮಕ್ಕಳು ತಾವು ಮಾಡಿದ ತಪ್ಪಿಗೆ ಹೆತ್ತವರನ್ನು ಕಂಬಿ ಎಣಿಸುವಂಥ ಪರಿಸ್ಥಿತಿಗೆ ಒಡ್ಡಿದ್ದಾರೆ. ಕಳೆದ 2 ತಿಂಗಳ ಅವಧಿಯಲ್ಲಿ ಹೈದರಾಬಾದ್‌ನ ಟ್ರಾಫಿಕ್‌ ಪೊಲೀಸರ ಕಾರ್ಯಾಚರಣೆಯಿಂದ ಒಟ್ಟು 26 ಪೋಷಕರು ಜೈಲು ಸೇರಿದ್ದಾರೆ. ಅನೇಕ ಅಪಘಾತ ಪ್ರಕರಣಗಳಲ್ಲಿ ಮಕ್ಕಳೇ ವಾಹನ ಚಲಾಯಿಸುತ್ತಿದ್ದುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಾಫಿಕ್‌ ಜಂಟಿ ಪೊಲೀಸ್‌ ಆಯುಕ್ತ ಅನಿಲ್‌ ಕುಮಾರ್‌, “”ಮಾರ್ಚ್‌ ತಿಂಗಳಲ್ಲಿ ಅಪ್ರಾಪ್ತರು ಭಾಗಿಯಾಗಿರುವ ಪ್ರಕರಣಗಳಲ್ಲಿ 20 ಮಂದಿ ಪೋಷಕರನ್ನು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದೇವೆ. ಏಪ್ರಿಲ್‌ನಲ್ಲಿ 6 ಪೋಷಕರು ಬಂಧಿಸಿದ್ದೇವೆ” ಎಂದಿದ್ದಾರೆ.

Advertisement

ಇಂಥ ಪ್ರಕರಣದಲ್ಲಿ ಬಂಧಿಸಲಾಗುವ ಅಪ್ರಾಪ್ತರನ್ನೂ ಒಂದು ತಿಂಗಳು ಜೈಲಿಗೆ ಕಳುಹಿಸಲಾಗುತ್ತಿದೆ. ಈ ಬಗ್ಗೆ ನಿರಂತರವಾಗಿ ಜನತೆಗೆ ಸಂದೇಶ ರವಾನಿಸುತ್ತಿದ್ದೇವೆ. ಅಪ್ರಾಪ್ತರಿಂದ ವಾಹನ ಚಾಲನೆ ಅವರಿಗಷ್ಟೇ ಅಲ್ಲ, ಬೇರೆಯವರೂ ಅಪಾಯ ತಪ್ಪಿದ್ದಲ್ಲ ಎಂದಿದ್ದಾರೆ ಅನಿಲ್‌ ಕುಮಾರ್‌.

Advertisement

Udayavani is now on Telegram. Click here to join our channel and stay updated with the latest news.

Next