Advertisement

ಅರಬ್‌ನಲ್ಲಿ ಮೋಡ ಬಿತ್ತನೆಗೆ ಹೊಸ ವಿಧಾನ

02:22 PM Aug 31, 2022 | Team Udayavani |

ದುಬೈ: ವಿಶ್ವದ ಅತ್ಯಂತ ಗರಿಷ್ಠ ತಾಪಮಾನ ಹೊಂದಿರುವಂತಹ ರಾಷ್ಟ್ರಗಳಲ್ಲಿ ಒಂದಾಗಿರುವ ಅರಬ್‌ ಸಂಯುಕ್ತ ಸಂಸ್ಥಾನವು, ಮಳೆ ಹೆಚ್ಚಿಸುವುದಕ್ಕೆ ಹೊಸ ವಿಧಾನವೊಂದನ್ನು ಕಂಡುಕೊಂಡಿದೆ. ಉಪ್ಪಿನ ಜ್ವಾಲೆ ಬಳಸಿಕೊಂಡು ಮೋಡ ಬಿತ್ತನೆ ಮಾಡುವುದಕ್ಕೆ ಸಿದ್ಧವಾಗಿದೆ.

Advertisement

ಸಾಮಾನ್ಯವಾಗಿ ಸಿಲ್ವರ್‌ ಅಯೋಡೈಡ್‌ ಅನ್ನು ಸುಟ್ಟು ಅದರಿಂದ ಬರುವ ಹೊರಸೂಸಿಕೆಯನ್ನು ಮೋಡಗಳಿಗೆ ತಲುಪುವಂತೆ ಮಾಡಲಾಗುತ್ತದೆ. ಆದರೆ ವಾತಾವರಣದಲ್ಲಿ ಸಿಗುವ ಈ ಸಿಲ್ವರ್‌ ಅಯೋಡೈಡ್‌ ಮಾನವನ ದೇಹಕ್ಕೆ ದುಷ್ಪರಿಣಾಮ ಬೀರುವಂಥದ್ದಾಗಿದೆ. ಆ ಹಿನ್ನೆಲೆಯಲ್ಲಿ ಅರಬ್‌ ಸಂಯುಕ್ತ ಸಂಸ್ಥಾನವು ಮನುಷ್ಯನಿಗೆ ಹಾನಿಕಾರಕವಲ್ಲದ ಉಪ್ಪಿನ ಜ್ವಾಲೆ ಬಳಸಿ ಮೋಡ ಬಿತ್ತನೆ ಮಾಡಲು ಸಜ್ಜಾಗಿದೆ.

ಟ್ವಿನ್‌ ಟಬೋಪ್ರಾಪ್‌ ಹೆಲಿಕಾಪ್ಟರ್‌ಗಳ ರೆಕ್ಕೆಗಳಿಗೆ ಉಪ್ಪಿನ ಕ್ಯಾನಿಸ್ಟರ್‌ಗಳನ್ನು ಅಳವಡಿಸಲಾಗುತ್ತದೆ. ಅವುಗಳು ಸಮುದ್ರ ಮಟ್ಟದಿಂದ 9000 ಅಡಿ ಎತ್ತರ ತಲುಪಿ ಅಲ್ಲಿ ಬಿಳಿ ಮೋಡಗಳಿಗೆ ಈ ಉಪ್ಪಿನ ಜ್ವಾಲೆಯನ್ನು ಬಿಡುಗಡೆ ಮಾಡುತ್ತವೆ. ಇದರಿಂದಾಗಿ ಮೋಡದಲ್ಲಿ ಒತ್ತಡ ಉಂಟಾಗಿ ಹನಿಗಳಾಗಿ ಭೂಮಿಗೆ ಬೀಳುತ್ತದೆ. ಸದ್ಯ ಅರಬ್‌ ದೇಶದಲ್ಲಿ ವರ್ಷಕ್ಕೆ ಸರಾಸರಿ 3.9 ಇಂಚು ಮಳೆಯಾಗುತ್ತಿದ್ದು, ಈ ವಿಧಾನ ಬಳಕೆಯಿಂದ ಮಳೆ ಪ್ರಮಾಣದಲ್ಲಿ ಶೇ.10-30 ಏರಿಕೆ ಕಾಣಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next