Advertisement

38.86 ಮಿಲಿಯನ್‌ ಟನ್‌ ಸರಕು ಸಾಗಣೆ : ನೈಋತ್ಯ ರೈಲ್ವೆವಲಯ ಹೊಸ ದಾಖಲೆ

02:01 PM Feb 27, 2022 | Team Udayavani |

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಸರಕು ಸಾಗಣೆಯಲ್ಲಿ ಒಟ್ಟು 38.86 ಮಿಲಿಯನ್‌ ಟನ್‌(ಎಂಟಿ)ಗಳಷ್ಟು ಲೋಡಿಂಗ್‌ ಮಾಡಿದ್ದು, ಇದು ಕಳೆದ ಹಣಕಾಸು ವರ್ಷದ ಒಟ್ಟು ಲೋಡಿಂಗ್‌ ಮೀರಿದೆ. 2022ರ ಫೆ.18ರಿಂದ 38.19 ಮಿಲಿಯನ್‌ ಟನ್‌ಗಳ ಲೋಡಿಂಗ್‌ ಮಾಡಿದೆ. ಇದು ಕಳೆದ 2020-21ರ ಹಣಕಾಸು ವರ್ಷಕ್ಕಿಂತ ಅಧಿಕವಾಗಿದೆ.

Advertisement

ವಲಯ 2020-21ವರೆಗಿನ ಅವಧಿಯಲ್ಲಿ 3401.74 ಕೋಟಿ ರೂ. ಆದಾಯ ಗಳಿಸಿದ್ದು, ಇದು ಕಳೆದ ಹಣಕಾಸು ವರ್ಷದ ಆದಾಯ 2603.89 ಕೋಟಿ ರೂ.ಗಿಂತ ಶೇ.30 ಹೆಚ್ಚಾಗಿದೆ.
ಏಪ್ರಿಲ್‌ 2021-ಫೆಬ್ರವರಿ 2022ರ ಅವಧಿಯಲ್ಲಿ ವಲಯವು ಕಳೆದ ಹಣಕಾಸು ವರ್ಷದ ಒಟ್ಟು ಸರಕು ಲೋಡಿಂಗ್‌ ಮೀರಿಸಿದೆ. ಇಲ್ಲಿಯವರೆಗೆ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳ 196 ರೇಕ್‌
ಗಳನ್ನು ಸಾಗಿಸಿದೆ. ಇದು ಕಳೆದ ವರ್ಷಕ್ಕಿಂತ ಅತ್ಯಧಿಕವಾಗಿದೆ (ಕಳೆದ ಹಣಕಾಸು ವರ್ಷದಲ್ಲಿ 193 ರೇಕ್‌). ಟೊಯೊಟಾ ತಮ್ಮ ವಾಹನಗಳ ಸಾಗಣೆಗಾಗಿ ರಸ್ತೆ ಮಾರ್ಗ ಬದಲು ರೈಲ್ವೆ ಆಯ್ಕೆ
ಮಾಡಿಕೊಂಡಿರುವುದು ಗಮನಾರ್ಹ. ಟಿವಿಎಸ್‌, ಕೆಐಎ, ಮಾರುತಿ ಸುಜುಕಿ, ಟಾಟಾ ರೈಲ್ವೆ ಮೂಲಕ ನಿಯತವಾಗಿ ವಾಹನಗಳನ್ನು ಸಾಗಿಸುವ ಕೆಲವು ಪ್ರಮುಖ ಗ್ರಾಹಕರಾಗಿದ್ದಾರೆ.

ಸಕ್ಕರೆಯ ಲೋಡಿಂಗ್‌ನಲ್ಲಿ ಇಲ್ಲಿಯವರೆಗೆ 355 ರೇಕ್‌ಗಳನ್ನು ಸಾಗಿಸುವ ಮೂಲಕ ಕಳೆದ 18 ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಸಕ್ಕರೆ ರೇಕು ಸಾಗಾಣಿಕೆ ಮಾಡಿದಂತಾಗಿದೆ. ಸಕ್ಕರೆ ಪ್ರಾಥಮಿಕವಾಗಿ ಬೆಳಗಾವಿ-ರಾಯಬಾಗ-ಚಿಕ್ಕೋಡಿ ಪ್ರದೇಶದಿಂದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಾಂಗ್ಲಾದೇಶಕ್ಕೆ ರವಾನೆಯಾಗುತ್ತದೆ. ಸಿಮೆಂಟ್‌ ಸಾಗಣೆ ಬೇಡಿಕೆ ಸದುಪಯೋಗ ಮಾಡಿಕೊಂಡು ಹಾಗೂ ವ್ಯಾಪಾರ ಅಭಿವೃದ್ಧಿ ಘಟಕಗಳ ಸಕ್ರಿಯ ಮಾರುಕಟ್ಟೆ ಪ್ರಯತ್ನಗಳೊಂದಿಗೆ ಕಳೆದ ವರ್ಷದ 217 ರೇಕ್‌ ಗಳಿಗೆ ಹೋಲಿಸಿದರೆ ಇಲ್ಲಿಯವರೆಗೆ 265 ರೇಕ್‌ಗಳನ್ನು ಲೋಡ್‌ ಮಾಡಲಾಗಿದೆ.

ಇದನ್ನೂ ಓದಿ : ಉಕ್ರೇನ್‍ನಿಂದ ಕಟ್ಟ ಕಡೆಯ ವಿದ್ಯಾರ್ಥಿಯನ್ನು ಕರೆತರುವ ತನಕ ಆಪರೇಷನ್: ಆರ್ ಅಶೋಕ್

105 ಕೋಟಿ ರೂ. ಆದಾಯ: ಪಾರ್ಸೆಲ್‌ ಆದಾಯದಲ್ಲಿ ನೈಋತ್ಯ ರೈಲ್ವೆಯು 105 ಕೋಟಿ ರೂ. ಆದಾಯ ಗಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಇದು ವಲಯ ರಚನೆಯಾದ
ನಂತರ ಗರಿಷ್ಠ ಆದಾಯವಾಗಿದೆ. ಎರಡು ಟೈಮ್‌- ಟೇಬಲ್ಡ್‌ ಪಾರ್ಸೆಲ್‌ ಕಾರ್ಗೊà ಎಕ್ಸ್‌ಪ್ರೆಸ್‌ ರೈಲುಗಳ ಗುತ್ತಿಗೆಗಳನ್ನು ಯಶವಂತಪುರದಿಂದ ಐಸಿಒಡಿ, ದೆಹಲಿ ಮತ್ತು ವಾಸ್ಕೋಡಗಾಮಾದಿಂದ ಅಜಾರಾ, ಅಸಾಂಗೆ (ಕ್ರಮವಾಗಿ) ಬೆಂಗಳೂರು ಮತ್ತು ಹುಬ್ಬಳ್ಳಿ ವಿಭಾಗದ ವತಿಯಿಂದ ನೀಡಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 232 ಟ್ರಿಪ್‌ಗ್ಳ ಟೈಮ್‌
ಟೇಬಲ್‌ ಪಾರ್ಸೆಲ್‌ ರೈಲುಗಳು, ಇಂಡೆಂಟೆಡ್‌ ಸ್ಪೆಷಲ್‌, ಜಿಎಸ್‌ ಸ್ಪೆಷಲ್‌ ಮತ್ತು ಕಿಸಾನ್‌ ಸ್ಪೆಷಲ್‌ ರೈಲುಗಳಲ್ಲಿ 1.67 ಲಕ್ಷ ಟನ್‌ ಹಣ್ಣುಗಳು, ತರಕಾರಿಗಳು, ಐಸ್ಡ್ ಮೀನು, ಟೈರುಗಳು, ನೆಸ್ಲೆ
ಉತ್ಪನ್ನಗಳು ಮತ್ತು ಇತರೆ ಆಹಾರ ಪದಾರ್ಥಗಳ ಸಾಗಣೆಗೆ ರೈಲ್ವೆ ಅನುವು ಮಾಡಿಕೊಟ್ಟಿದೆ.

Advertisement

ಬೆಂಗಳೂರು ವಿಭಾಗವು ದೆಹಲಿ ಮತ್ತು ಉತ್ತರ ಭಾರತದ ಇತರ ನಗರಗಳಿಗೆ 33 ಕಿಸಾನ್‌ ಸ್ಪೆಷಲ್‌ ರೈಲುಗಳನ್ನು ರವಾನಿಸಿದೆ. ಇದರಿಂದ ರೈತರು ಸರಕು ಸಾಗಣೆಯಲ್ಲಿ ಶೇ.50 ಸಬ್ಸಿಡಿ ಮತ್ತು ದೊಡ್ಡ ಮಾರುಕಟ್ಟೆಗಳಿಗೆ ಪ್ರವೇಶ ಪಡೆದಿದ್ದಾರೆ.

ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಷಮತೆ, ಸರಕು ಸಾಗಣೆ ಮತ್ತು ಪಾರ್ಸೆಲ್‌ ಗ್ರಾಹಕರು ರೈಲ್ವೆಯೊಂದಿಗೆ ತಮ್ಮ ನಂಬಿಕೆ ಉಳಿಸಿಕೊಂಡಿರುವುದು ಅಭಿನಂದನಾರ್ಹ. ವಲಯವು ಗ್ರಾಹಕರಿಗೆ ಸೇವೆ ಸಲ್ಲಿಸಲು ಮತ್ತು ಅಗತ್ಯ ಸರಕುಗಳು ಸಮಯಕ್ಕೆ ಅಂತಿಮ ಬಳಕೆದಾರರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸಮರ್ಪಿತವಾಗಿ ಕೆಲಸ ಮಾಡುತ್ತದೆ.
– ಸಂಜೀವ ಕಿಶೋರ, ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next