Advertisement

ವಿಜೃಂಭಣೆಯ ಚಿಲುಮೆ ರುದ್ರಸ್ವಾಮಿ ರಥೋತ್ಸವ

05:39 PM Feb 05, 2020 | Naveen |

ಪರಶುರಾಂಪುರ: ಸಮೀಪದ ನಾಗಗೊಂಡನಹಳ್ಳಿ ಗ್ರಾಮದ ಬಳಿಯ ವೇದಾವತಿ ನದಿ ದಡದಲ್ಲಿನ ಶ್ರೀ ಚಿಲುಮೆ ರುದ್ರಸ್ವಾಮಿ ಮಠದಲ್ಲಿ ಮಂಗಳವಾರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

Advertisement

ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಿದ್ದರು. ಗದ್ದುಗೆ ಮಠದ ಚರಮೂರ್ತಿಗಳಾದ ಶ್ರೀ ಬಸವಕಿರಣ ಸ್ವಾಮೀಜಿ ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ರಥೋತ್ಸವಕ್ಕೆ ಚಾಲನೆ ನೀಡಿದರು.

ನಾಗಗೊಂಡನಹಳ್ಳಿಯ ಹನ್ನೆರಡು ಕೈವಾಡಸ್ಥರು, ರೈತ ಮುಖಂಡ ಕೆ.ಪಿ. ಭೂತಯ್ಯ, ತಾಪಂ ಮಾಜಿ ಅಧ್ಯಕ್ಷ ಜಿ. ವೀರೇಶ್‌, ಶ್ರೀ ಗುರು ಚಿಲುಮೆ ರುದ್ರಸ್ವಾಮಿ ಗದ್ದುಗೆ ಮಠ ಸಮಿತಿ ಉಪಾಧ್ಯಕ್ಷ ಎಚ್‌. ಓಬಳೇಶಪ್ಪ, ಕಾರ್ಯದರ್ಶಿ ಜೆ.ಎಚ್‌. ಬೊಮ್ಮಯ್ಯ, ಸಹ ಕಾರ್ಯದರ್ಶಿ ಜಿ.ಟಿ. ರವಿಕುಮಾರ್‌, ಎಂ. ಉಮಾಮಹೇಶ್ವರಯ್ಯ, ರವಿಚಂದ್ರ, ಬಸವರಾಜು, ಪಾಲನೇತ್ರಪ್ಪ, ನರಸಿಂಹಪ್ಪ ಮೊದಲಾದವರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ರಥವನ್ನು ವಿವಿಧ ಹೂವುಗಳು, ಬಾಳೆಗೊನೆ, ಎಳನೀರಿನ ಗೊಂಚಲಿನಿಂದ ಅಲಂಕರಿಸಲಾಗಿತ್ತು. ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ರಥಕ್ಕೆ ಹಣ್ಣು-ಕಾಯಿ ಸಮರ್ಪಿಸಿ ಭಕ್ತರು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ರಥೋತ್ಸವಕ್ಕೂ ಮುನ್ನ ಮುಕ್ತಿ ಬಾವುಟ ಹರಾಜು ನಡೆಯಿತು. ಮೂರನೇ ಬಾರಿಯೂ ಜಾಜೂರು ಗ್ರಾಪಂ ಅಧ್ಯಕ್ಷೆ ಭೀಮಕ್ಕ 21 ಸಾವಿರ ರೂ.ಗಳಿಗೆ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next