ಕಾರ್ಕಳ: ಬೈಲೂರಿನ ಪರಶುರಾಮನ ಮೂರ್ತಿ ಕಂಚಿನದ್ದಲ್ಲ, ನಕಲಿ ಎಂದು ಹೇಳಲು ಕೊನೆಯ ಸಾಕ್ಷಿ ಉಳಿದಿತ್ತು. ಅದನ್ನು ತೆರವುಗೊಳಿಸುವ ಹುನ್ನಾರ ನಡೆಯುತ್ತಿದ್ದು, ನಮ್ಮ ಪ್ರಬಲ ವಿರೋಧವಿದೆ ಎಂದು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈಗಾಗಲೇ ಮೂರ್ತಿಯ ಅರ್ಧ ಭಾಗ ತೆರವು ಗೊಳಿಸಲಾಗಿದೆ. ಮಳೆಗಾಲದಲ್ಲಿ ನೀರು ತುಂಬಿದರೆ ಮೂರ್ತಿ ಮುರಿದು ಬೀಳಬಹುದು ಎಂಬ ಕಾರಣ ನೀಡಿ ಟಾರ್ಪಾಲು ಹೊದೆಸು
ವುದಾಗಿ ತಿಳಿಸಿದ್ದರು. ಈಗ ಹೈಕೋರ್ಟ್ ಆದೇಶದಂತೆ ಮೂರ್ತಿಯ ಬಾಕಿ ಭಾಗವನ್ನು ತೆರವು ಗೊಳಿಸಿ ಶಿಲ್ಪಿಗೆ ಕೊಡುತ್ತಾರೆಂಬ ವಿಷಯ ತಹಶೀಲ್ದಾರ್ ಮೂಲಕ ನನಗೆ ತಿಳಿಯಿತು. ಇದು ಉಳಿದ ಸಾಕ್ಷ್ಯವನ್ನೂ ನಾಶ ಮಾಡುವ ಪ್ರಯತ್ನ ಎಂದು ಆರೋಪಿಸಿದರು.
ಕೆಂಪೇಗೌಡ, ಶಿವಾಜಿಯ ಮೂರ್ತಿಗಳನ್ನು ನಿರ್ಮಿಸಿದ ಹಲವು ಪ್ರತಿಭೆಗಳು ರಾಜ್ಯ ದಲ್ಲಿ¨ªಾರೆ. ಆದರೂ ಜಿಎಸ್‌ಟಿ ಡಿಫಾಲ್ಟರ್ ಆಗಿರುವ ಕೃಷ್ಣ ನಾಯ್ಕ ಅವರಿಗೆ ಯಾವುದೇ ಅರ್ಹತೆ ಇಲ್ಲದಿದ್ದರೂ ಮೂರ್ತಿ ಮಾಡಲು ನೀಡಲಾಗಿದೆ ಎಂದು ಆಪಾದಿಸಿದ ಅವರು, ಈಗ ತರಾತುರಿಯಲ್ಲಿ ಮೂರ್ತಿಯ ಉಳಿದ ಭಾಗವನ್ನು ಕೃಷ್ಣ ನಾಯಕ್‌ರಿಗೆ ನೀಡಿ ಏನು ಸಾಧಿಸುವುದಿದೆ? ಇದು ಸಾಕ್ಷ್ಯ ಅಳಿಸುವ ಹುನ್ನಾರವಲ್ಲದೇ ಮತ್ತೇನೂ ಅಲ್ಲ ಎಂದರು.
ಪ್ರತಿಮೆಯನ್ನು ಸುನಿಲರೇ ಸ್ಥಾಪಿಸಲಿ
ಪರಶುರಾಮನ ಮೂರ್ತಿಯ ಈ ಸ್ಥಿತಿಗೆ ಸುನಿಲ್ ಕುಮಾರ್ ಹಾಗೂ ಅವರ ಹಿಂಬಾಲಕರೇ ಕಾರಣ. ಮೂರ್ತಿ ಯಾವುದರಿಂದ ತಯಾರಾ ದದ್ದು (ಫೈಬರ್ /ಕಂಚು) ಎಂಬ ತನಿಖೆಯಾಗಲಿ ಎಂದ ಅವರು, 2 ಕೋಟಿ ರೂ. ವೆಚ್ಚದ ಮೂರ್ತಿ ಉದ್ಘಾಟನೆ ಕಾರ್ಯಕ್ರಮಕ್ಕೆ 2.5. ಕೋಟಿ ರೂ.ಗಳನ್ನು ಸುನಿಲ್ ಕುಮಾರ್ ಖರ್ಚು ಮಾಡಿಸಿ¨ªಾರೆ ಎಂದು ಟೀಕಿಸಿದರು.
ನಮ್ಮ ಉದ್ದೇಶ ಅಲ್ಲಿ ಸ್ಥಾಪಿಸ ಬೇಕಿದ್ದ ಪರಶುರಾಮನ ಕಂಚಿನ ಮೂರ್ತಿಯನ್ನು ಸುನಿಲ್ ಕುಮಾರ್ ಅವರೇ ಸ್ಥಾಪಿಸಲಿ. ಆದರೆ ಕೃಷ್ಣ ನಾಯಕ್ ಅವರಿಗೆ ಪುನಃ ಕೆಲಸ ನೀಡಬಾರದು. ನಿರ್ಮಿತಿ ಕೇಂದ್ರದವರಿಗೆ ಈ ಮೂರ್ತಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು. ಸಂಪೂರ್ಣ ತನಿಖೆಯ ಬಳಿಕವೇ ಪರಿಣಿತರಿಂದ ಥೀಂ ಪಾರ್ಕ್ ಕೆಲಸ ಮುಂದುವರಿಸಬೇಕು ಎಂದು ಆಗ್ರಹಿಸಿದರು.ಸದಾಶಿವ ದೇವಾಡಿಗ, ಉದಯ ಕುಮಾರ್ ಶೆಟ್ಟಿ ಕುಕ್ಕುಂದೂರು, ಜಾರ್ಜ್ ಕ್ಯಾಸ್ತಲಿನೋ ಉಪಸ್ಥಿತರಿದ್ದರು.