Advertisement
ಉಡುಪಿ-ಕಾರ್ಕಳ ಹೆದ್ದಾರಿ ಮಧ್ಯೆ ಬರುವ ಬೈಲೂರಿನಲ್ಲಿ 10 ಕೋ.ರೂ. ಅಧಿಕ ವೆಚ್ಚದಲ್ಲಿ ಪರಶುರಾಮನ ಕಂಚಿನ ಪ್ರತಿಮೆ ಒಳಗೊಂಡ ಪಾರ್ಕ್ ರಚಿಸಲಾಗುತ್ತಿದೆ. ಪಾರ್ಕ್ ರಚನೆಗೆ ಸಂಬಂಧಿಸಿ ಕಟ್ಟಡಗಳ ಫೌಂಡೇಶನ್, ಗೋಡೆ ನಿರ್ಮಾಣ ಕೆಲಸ ಪೂರ್ಣಗೊಂಡು, ಆಡಿಯೋ ವಿಶುವಲ್ ಕೊಠಡಿಯೊಂದಿಗೆ ಸ್ಟೇಟ್ ಆಪ್ ದಿ ಆರ್ಟ್ ಮ್ಯೂಸಿಯಂ, ಪರಶುರಾಮನ ಕ್ಷೇತ್ರ ಆನಂದಿಸಲು ನೇಯ್ಗೆ ಡೆಕ್ ಗ್ಯಾಲರಿ, ಸಾವಿರ ಜನರ ಸಾಮರ್ಥ್ಯದ ಬಯಲು ಮಂದಿರ, ಭಜನ ಮಂದಿರ, ಹಾಲ್ ಪ್ರೇಂ ಕೆಲಸ, ಹಸುರು ಕೋಣೆಗಳ ಪಾಪ್ ಸಂಗ್ರಹಣೆ, ವೇದಿಕೆ, ನೈಸರ್ಗಿಕ ಸೈಟ್ ವೈಶಿಷ್ಟéಗಳಿಗೆ ಪೂರಕ ನಿರ್ಮಾಣ ಕಾರ್ಯ ಶೇ. 90ರಷ್ಟು ಪೂರ್ಣಗೊಂಡಿವೆ.
ರಸ್ತೆಯಿಂದ 450 ಅಡಿ ಎತ್ತರದಲ್ಲಿ ಬೆಟ್ಟದಿಂದ 57 ಅಡಿ ಎತ್ತರದಲ್ಲಿ 33 ಅಡಿಯ ಕಂಚಿನ ಪ್ರತಿಮೆ ಸ್ಥಾಪನೆಯಾಗ ಲಿದೆ. 10 ಅಡಿ ಪೀಠ ಇರಲಿದೆ. ಕಾಮಗಾರಿ ನಡೆಯುವ
ಸ್ಥಳಕ್ಕೆ ಅಗತ್ಯ ವಸ್ತುಗಳನ್ನು ಕೊಂಡೊಯ್ದು ಕಾಮಗಾರಿ ನಡೆಸುವುದು ಸಾಹಸ ಕೆಲಸವಾಗಿತ್ತು. ಈ ನಡುವೆ ನಿರ್ಮಿತಿ ಕೇಂದ್ರವು ಆರಂಭದಿಂದಲೂ ತ್ವರಿತವಾಗಿ ಕಾಮಗಾರಿ
ನಡೆಸಿಕೊಂಡು ಬಂದಿತ್ತು. ಈ ಭಾಗದಲ್ಲಿ ನಿರಂತರ ಸುರಿದ ಮಳೆಯಿಂದ ಕಾಮಗಾರಿಗೆ ಕೊಂಚ ಹಿನ್ನಡೆ ಆಗಿತ್ತು. ಆದರೂ ವೇಗವಾಗಿ ಕಾಮಗಾರಿ ಮುಂದುವರಿದು ಇದೀಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಅಂತಿಮ ಸ್ಪರ್ಶ ನೀಡುವ ಕೆಲಸವಾಗುತ್ತಿದ್ದು, ಕಂಚಿನ ಪ್ರತಿಮೆ ಯಿರುವ ಸ್ಥಳದ ಸುತ್ತಲ ಮೇಲ್ಛಾವಣಿ ಇನ್ನಿತರ ಶೇ.10ರಷ್ಟು ಕಾಮಗಾರಿಗಳಷ್ಟೇ ಇನ್ನು ಪೂರ್ಣವಾಗಲು ಬಾಕಿ ಉಳಿದಿವೆ. ಜ. 10ರ ವೇಳೆಗೆ ಪೂರ್ಣವಾಗಲಿದೆ.
Related Articles
ಡಿಸೆಂಬರ್‌ನಲ್ಲಿ ಲೋಕಾರ್ಪಣೆ ಅಂತ ನಿರ್ಧರಿಸಲಾಗಿತ್ತು. ನಾನಾ ಕಾರಣಗಳಿಂದ ಹಾಗೂ ಉಡುಪಿಗೆ ಪ್ರಧಾನಿ ಮೋದಿ ಅಥವಾ ಯೋಗಿ ಆದಿತ್ಯನಾಥ್ ಇಬ್ಬರಲ್ಲಿ ಒಬ್ಬರು ಬರುವ ಕಾರಣವೂ ಸೇರಿ ಮುಂದೂಡಲ್ಪಟ್ಟು ಜನವರಿಯಲ್ಲಿ ಲೋಕಾರ್ಪಣೆಯಾಗಲಿದೆ. ಮುಂದಿನ ವಾರದಲ್ಲಿ ಕಂಚಿನ ಪ್ರತಿಮೆಯ ಮೊದಲ ಅರ್ಧ ಭಾಗ ಕಾರ್ಕಳ ತಲುಪಲಿದೆ. ಶೀಘ್ರ ದಿನ ಪ್ರಕಟಿಸಲಾಗುವುದು.
-ವಿ. ಸುನಿಲ್ ಕುಮಾರ್, ಸಚಿವ
Advertisement
ಜನವರಿ 10ರೊಳಗೆ ಪ್ರತಿಮೆ ಕಾರ್ಕಳಕ್ಕೆ ಪರಶುರಾಮನ ಕಂಚಿನ ಪ್ರತಿಮೆ ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದ್ದು. ಅಲ್ಲಿಂದ ಕಾರ್ಕಳಕ್ಕೆ ಜನವರಿ ಆರಂಭದ ವಾರದಲ್ಲಿ ತರಲಾಗುತ್ತಿದೆ. ಅದಕ್ಕೂ ಮೊದಲು ಮುಂದಿನ ವಾರ ಪ್ರತಿಮೆ ನಿಲ್ಲುವ ಬೇಸ್, ಇತರ ಪಾರ್ಟ್‌ಗಳು ಒಂದೊಂದಾಗಿ ಬೆಟ್ಟ ತಲುಪಿ, ಜೋಡಿಸಲ್ಪಡಲಿದೆ. ಜ. 10ರೊಳಗೆ ಎಲ್ಲವೂ ಪೂರ್ಣಗೊಳ್ಳುವ ಸಾಧ್ಯತೆಯಿದೆ.