ಪರಮೇಶ್ವರ್, ಅವರ ಕ್ಷೇತ್ರದ ಕೆಲಸದ ಕುರಿತು ಮಾತನಾಡಲು ಬಂದಿದ್ದೆ. ಯಾವುದೇ ರಾಜಕೀಯ ವಿಚಾರ ಚರ್ಚೆ ನಡೆಸಿಲ್ಲ. ಅಂಬರೀಶ್ ನಮಗೆ ಮೊದಲಿನಿಂದಲೂ ಆತ್ಮೀಯರು. ಮುಂದಿನ ಚುನಾವಣೆಯಲ್ಲಿಯೂ ಅವರು ಸ್ಪರ್ಧೆ ಮಾಡುತ್ತಾರೆ ಎಂದು ಪರಮೇಶ್ವರ್ ಹೇಳಿದರು.
Advertisement
ಇದೇ ವೇಳೆ ಕುಮಾರ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿ ಸಿರುವ ಅವರು, ಕುಮಾರ ಸ್ವಾಮಿ ರಾಜಕೀಯ ಮಾಡುವುದರ ಬಗ್ಗೆ ನಮಗೆ ಹೊಟ್ಟೆಯುರಿ ಇಲ್ಲ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿದ್ದು, ಎಲ್ಲವನ್ನೂ ಎದುರಿಸುವಸಮರ್ಥರಿದ್ದಾರೆ. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಎಸ್‌ಐಟಿ ನಡೆಸುತ್ತಿರುವ ತನಿಖೆಯಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಎಸ್‌ಐಟಿ ತನಿಖೆ ನಡೆಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಮಂಡ್ಯದಲ್ಲಿ ತಮ್ಮ ಬಿಟ್ಟು ಬೇರೆ ಯಾರು ಸ್ಪರ್ಧಿಸುತ್ತಾರೆ ಎಂದು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯ
ಅವರ ನಾಯಕತ್ವದ ಬಗ್ಗೆ ಯಾವ ಅಸಮಾಧಾನ ಇಲ್ಲ. ಅವರ ಬಗ್ಗೆ ಯಾವತ್ತೂ ಮಾತನಾಡುವುದಿಲ್ಲ ಎಂದು ಅಂಬರೀಶ್ ಹೇಳಿದರು.