Advertisement

ಪ್ಯಾರಾಲಿಂಪಿಕ್ಸ್‌ : ಭಾರತಕ್ಕೆ ಪದಕವಿಲ್ಲದ ದಿನ

10:09 PM Sep 01, 2021 | Team Udayavani |

ಟೋಕಿಯೊ: ಕಳೆದ 3 ದಿನ ಬರೋಬ್ಬರಿ 10 ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದು ಮೆರೆದಿದ್ದ ಭಾರತಕ್ಕೆ ಬುಧವಾರದ ಸ್ಪರ್ಧೆಗಳಲ್ಲಿ ಯಾವುದೇ ಪದಕ ಒಲಿಯಲಿಲ್ಲ. ಬ್ಯಾಡ್ಮಿಂಟನ್‌, ಈಜು, ಶೂಟಿಂಗ್‌ ಸ್ಪರ್ಧೆಗಳಲ್ಲಿ ವೈಫ‌ಲ್ಯವೇ ಎದುರಾಯಿತು. ಸದ್ಯ ಭಾರತ 2 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕ ಗೆದ್ದು 34ನೇ ಸ್ಥಾನದಲ್ಲಿದೆ.

Advertisement

ಮಿಕ್ಸೆಡ್‌ ಬ್ಯಾಡ್ಮಿಂಟನ್‌ ಜೋಡಿಯಾದ ಪ್ರಮೋದ್‌ ಭಗತ್‌-ಪಲಕ್‌ ಕೊಹ್ಲಿ ಎಸ್‌ಎಲ್‌3-ಎಸ್‌ಯು5 ಕ್ಲಾಸ್‌ ವಿಭಾಗದ “ಬಿ’ ಸುತ್ತಿನ ಮೊದಲ ಪಂದ್ಯದಲ್ಲಿ ವೀರೋಚಿತ ಸೋಲು ಕಂಡರು. ಇವರನ್ನು ಫ್ರಾನ್ಸ್‌ನ ಲೂಕಾಸ್‌ ಮಜೂರ್‌-ಫಾಸ್ಟಿನ್‌ ನೋಯೆಲ್‌ 21-9, 15-21, 21-19 ಅಂತರದಿಂದ ಮಣಿಸಿದರು.

ಮೊದಲ ಗೇಮ್‌ನಲ್ಲಿ 9-21 ಹಿನ್ನಡೆಯೊಂದಿಗೆ ನೀರಸ ಪ್ರದರ್ಶನ ತೋರಿದ ಭಗತ್‌-ಕೊಹ್ಲಿ ದ್ವಿತೀಯ ಗೇಮ್‌ನಲ್ಲಿ ತಿರುಗಿ ಬಿದ್ದು ಮೇಲುಗೈ ಸಾಧಿಸಿದರು. ನಿರ್ಣಾಯಕ ಸುತ್ತಿನಲ್ಲಿ ತೀವ್ರ ಪೈಪೋಟಿ ಕಂಡುಬಂತು. ಆದರೆ ಭಾರತದ ಜೋಡಿಯಿಂದ ಕಡೇ ಗಳಿಗೆಯ ಒತ್ತಡವನ್ನು ನಿಭಾಯಿಸಲಾಗಲಿಲ್ಲ.

ಪುರುಷರ ಸಿಂಗಲ್ಸ್‌ ವಿಭಾಗದ ಆಲ್‌ ಇಂಡಿಯನ್‌ ಸ್ಪರ್ಧೆಯೊಂದರಲ್ಲಿ ಮನೋಜ್‌ ಸರ್ಕಾರ್‌ ವಿರುದ್ಧ ವಿಶ್ವದ ನಂ.1 ಪ್ರಮೋದ್‌ ಭಗತ್‌ ಜಯ ಸಾಧಿಸಿದರು. ಆದರೆ ಪಲಕ್‌ ಕೊಹ್ಲಿ ವನಿತಾ ಸಿಂಗಲ್ಸ್‌ನಲ್ಲೂ ಪರಾಭವಗೊಂಡರು.

ಯಶಸ್ಸು ಕಾಣದ ಸುಯಶ್‌ :

Advertisement

ಪ್ಯಾರಾ ಸ್ವಿಮ್ಮರ್‌ ಸುಯಶ್‌ ಜಾಧವ್‌ 100 ಮೀ. ಬ್ರೆಸ್ಟ್‌ ಸ್ಟ್ರೋಕ್‌ ಎಸ್‌ಬಿ7 ವಿಭಾಗದ ಫೈನಲ್‌ ತಲುಪಿಯೂ ನಿಯಮ ಉಲ್ಲಂಘಿಸಿ ಅನರ್ಹಗೊಂಡರು.

ಸ್ವಿಮ್ಮಿಂಗ್‌ ನಿಯಮ 11.4.1ರ ಪ್ರಕಾರ, ಪ್ರತಿಯೊಂದು ಟರ್ನ್ ವೇಳೆ ಒಂದೇ ಬಟರ್‌ಫ್ಲೈ ಕಿಕ್‌ಗೆ ಅವಕಾಶವಿರುತ್ತದೆ. ಆದರೆ ಸುಯಶ್‌ ಒಂದಕ್ಕಿಂತ ಹೆಚ್ಚಿನ ಫ್ಲೈ ಕಿಕ್‌ ಮಾಡಿ ಅವ ಕಾಶ ಕಳೆದುಕೊಂಡರು. ಸುಯಶ್‌ ಜಾಧವ್‌ ಶೀತ ಹಾಗೂ ಗಂಟಲು ಕೆರೆತದಿಂದಾಗಿ ಶುಕ್ರವಾರದ 200 ಮೀ. ಮಿಡ್ಲೆ ಎಸ್‌ಎಂ7 ಸ್ಪರ್ಧೆಯಿಂದ ಹೊರಗುಳಿದಿದ್ದರು.

ಅವನಿ ಲೇಖರ ವಿಫ‌ಲ:

ಎರಡು ದಿನಗಳ ಹಿಂದೆ ಶೂಟಿಂಗ್‌ ಸ್ವರ್ಣ ಗೆದ್ದು ಇತಿಹಾಸ ನಿರ್ಮಿಸಿದ್ದ ಅವನಿ ಲೇಖರ, ಬುಧವಾರದ 10 ಮೀ. ಏರ್‌ ರೈಫ‌ಲ್‌ ಪ್ರೋನ್‌ ಎಸ್‌ಎಚ್‌1 ವಿಭಾಗದ ಅರ್ಹತಾ ಸುತ್ತಿನ ಫೈನಲ್‌ಗೆ ಏರಲು ವಿಫ‌ಲರಾದರು. ಇಲ್ಲಿ ಅವರು 27ರಷ್ಟು ಕೆಳ ಸ್ಥಾನಕ್ಕೆ ಕುಸಿದರು.

Advertisement

Udayavani is now on Telegram. Click here to join our channel and stay updated with the latest news.

Next