Advertisement
“ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದ ಅವನಿ ಲೇಖರಾ, ಸುಮಿತ್ ಅಂತಿಲ್, ಪ್ರಮೋದ್ ಭಗತ್‌ಗೆ ಖೇಲ್‌ರತ್ನ ನೀಡಿದ್ದೀರಿ. ಅದೇ ಬಣ್ಣ, ಅದೇ ಪದಕ, ಅದೇ ಕೂಟ. ನನಗೇಕೆ ಪ್ರಶಸ್ತಿ ಇಲ್ಲ’ ಎಂದು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಬಿಲ್ಗಾರಿಕೆಯಲ್ಲಿ ಚಿನ್ನ ಗೆದ್ದಿರುವ ಹರ್ವಿಂದರ್ ಸಿಂಗ್ ಪ್ರಶ್ನಿಸಿದ್ದಾರೆ. ಹರ್ವಿಂದರ್ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
ಇತ್ತೀಚೆಗಷ್ಟೇ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 2 ಕಂಚು ಗೆದ್ದಿದ್ದ ಶೂಟರ್ ಮನು ಭಾಕರ್ ಹೆಸರು ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿಲ್ಲ ಎಂದು ವಿವಾದ ಶುರುವಾಗಿತ್ತು. ಇನ್ನೂ ಕೇಂದ್ರ ಸರಕಾರ ಪ್ರಶಸ್ತಿ ಪುರಸ್ಕೃತರ ಅಂತಿಮಪಟ್ಟಿ ಬಿಡುಗಡೆ ಮಾಡಿಲ್ಲ.