Advertisement

ಪರದೇಸಿ ಹಾಡು-ಪಾಡು

06:00 AM Oct 26, 2018 | |

ಒಂದೇ ವೇದಿಕೆ. ಆ ವೇದಿಕೆ ಮೇಲೆ ಅದೇ ಮೊದಲ ಸಲ ಅಪ್ಪ, ಮಗನ ಮುಖಾಮುಖೀ. ಒಂದಷ್ಟು ಖುಷಿ, ಒಂದಷ್ಟು ಮುಜುಗರ….

Advertisement

– ಇದು ಕಂಡು ಬಂದದ್ದು “ಪರದೇಸಿ ಕೇರ್‌ ಆಫ್ ಲಂಡನ್‌’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ. ಅಲ್ಲಿ ಮುಖಾಮುಖೀಯಾಗಿದ್ದು ವಿಜಯ ರಾಘವೇಂದ್ರ ಮತ್ತು ಅವರ ತಂದೆ ಎಸ್‌.ಎ.ಚಿನ್ನೇಗೌಡ. ವಿಜಯರಾಘವೇಂದ್ರ ಚಿತ್ರದ ಹೀರೋ.

ಆ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಯಾಗಿದ್ದು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ. “ವೇದಿಕೆ ಹಂಚಿಕೊಳ್ಳಲು ಮುಜುಗರ ಆಗುತ್ತಿದೆ. ತಂದೆ ಮಂಡಳಿಯ ಅಧ್ಯಕ್ಷರಾದ ಬಳಿಕ ಮೊದಲ ಸಲ ಒಟ್ಟಾಗಿ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿರುವುದು ಖುಷಿಯೂ ಇದೆ, ಜೊತೆಗೆ ಮುಜುಗರವೂ ಇದೆ’ಅಂದರು ವಿಜಯ ರಾಘವೇಂದ್ರ.

ಇನ್ನು, ಅಂದಿನ ಆಕರ್ಷಣೆ ಸಂಗೀತ ನಿರ್ದೇಶಕ ವೀರ್‌ಸಮರ್ಥ್. “ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದೇನೆ. ನಾಗೇಂದ್ರ ಪ್ರಸಾದ್‌,ಕವಿರಾಜ್‌, ಯೋಗರಾಜ್‌ಭಟ್‌, ಶಿವುಬೆರಗಿ ಗೀತೆ ರಚಿಸಿದ್ದು, ವಿಜಯಪ್ರಕಾಶ್‌, ಶಶಾಂಕ್‌ ಶೇಷಗಿರಿ, ರವೀಂದ್ರ ಸೊರಗಾವಿ, ಶಮಿತಾ, ಅನುರಾಧ ಭಟ್‌, ಹೇಮಂತ್‌, ಗಂಗಮ್ಮ ಹಾಡಿದ್ದಾರೆ’ ಎಂದು ವಿವರ ಕೊಟ್ಟರು ವೀರ್‌ಸಮರ್ಥ್.

ಲಹರಿ ಆಡಿಯೋ ಸಂಸ್ಥೆ ಹಾಡುಗಳನ್ನು ಹೊರತಂದಿದ್ದು , ಲಹರಿ ವೇಲು, ಚಿತ್ರತಂಡಕ್ಕೆ ಶುಭ ಕೋರಿದರು.

Advertisement

ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ ಎಲ್ಲರಿಗೂ ಚಿತ್ರ ಯಶಸ್ಸು ಕೊಡಲಿ ಎಂದು ಹಾರೈಸಿದರು. ಅಂದು ನಿರ್ಮಾಪಕ ಬಿ.ಬದರಿನಾರಾಯಣ ಖುಷಿಯಲ್ಲಿದ್ದರು. ಚಿತ್ರ ಚೆನ್ನಾಗಿ ಬಂದಿದ್ದು, “ಎಲ್ಲರ ಸಹಕಾರ ಅಗತ್ಯವಾಗಿದೆ. ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.

ನಿರ್ದೇಶಕ ರಾಜಶೇಖರ್‌, “ದಿಕ್ಕುದಿಸೆ ಇಲ್ಲದವನಿಗೆ “ಪರದೇಸಿ’ ಎನ್ನುತ್ತಾರೆ. ಇಲ್ಲಿ ನಾಯಕ ಪರದೇಸಿ ಯಾಕೆ ಎಂಬುದಕ್ಕೆ ಚಿತ್ರ ನೋಡಬೇಕು. ಬೆಂಗಳೂರು, ಮೈಸೂರು,ಸಿರಗುಪ್ಪ ಇತರೆಡೆ ಚಿತ್ರೀಕರಿಸಿದ್ದಾಗಿ’ ಹೇಳಿದರು. ಅಂದು ನಟಿ ಪ್ರಣೀತಾ ಕೂಡ ವೇದಿಕೆಯಲ್ಲಿದ್ದರು. ಚಿದಾನಂದ ಛಾಯಾಗ್ರಹಣ ಮಾಡಿದರೆ, ಥ್ರಿಲ್ಲರ್‌ ಮಂಜು ಸಾಹಸವಿದೆ. ಕಲೈ ಮಾಸ್ಟರ್‌ ನೃತ್ಯ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next