Advertisement
ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಇತರ ಅಧಿಕಾರಿಗಳು ಆರೋಪಿಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರಿಗೆ ಸೂಕ್ತ ಎಚ್ಚರಿಕೆ ನೀಡಿ ಕಳುಹಿಸಿದರು.
Related Articles
ಸಂದೀಪ್ ಪಾಟೀಲ್ ನಗರದ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಮಿಷನರೆಟ್ ವ್ಯಾಪ್ತಿಯಲ್ಲಿ 50ರಿಂದ 60ರಷ್ಟು ಮಾದಕ ವಸ್ತು ಪ್ರಕರಣಗಳು ಪತ್ತೆ ಯಾಗಿವೆ. ಅದರಲ್ಲಿ ಗಾಂಜಾ, ಎಂಡಿ ಎಂಎ- (ಮಿಥೈಲೆನೆಡಿಯಾಕ್ಷಿ ಮೆಥಾಂ ಫೆಟಮೈನ್), ಕೊಕೇನ್ ಮತ್ತಿತರ ಮಾದಕ ವಸ್ತುಗಳು ಸೇರಿವೆ. ಮಾದಕ ವಸ್ತು ಪೂರೈಕೆ ಮಾಡು ತ್ತಿರುವವರು, ಸೇವಿಸು ವ ವರು ಮತ್ತು ಮಾರಾಟಗಾರ ರನ್ನು ಬಂಧಿಸಲಾಗಿದೆ.
Advertisement
ಜನರ ಸಹಕಾರ ಅಗತ್ಯಮಾದಕ ವಸ್ತುಗಳ ಹಾವಳಿ ನಿಯಂತ್ರಿಸಲು ಪೊಲೀಸರು ಆದ್ಯತೆ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು, ರಕ್ಷಕರು ಸಹಿತ ನಾಗರಿಕರ ಸಂಪೂರ್ಣ ಸಹಕಾರ ಸಿಕ್ಕಿದರೆ ಈ ಪಿಡುಗನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾದೀತು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ “ಉದಯವಾಣಿ’ಗೆ ತಿಳಿಸಿದ್ದಾರೆ.