Advertisement

ಶಿಯಾ ಮುಸ್ಲಿಮ ರಿಂದ ಮೆರವಣಿಗೆ; ದೇಹ ದಂಡನೆ

02:56 PM Sep 22, 2018 | Team Udayavani |

ಬೀದರ: ಮೊಹರಂ ಪ್ರಯುಕ್ತ ನಗರದಲ್ಲಿ ಶುಕ್ರವಾರ ಶಿಯಾ ಮುಸ್ಲಿಮರು ಮೆರವಣಿಗೆ ನಡೆಸಿದರು. ಶೋಕಾಚರಣೆ ಸಂಕೇತವಾಗಿ ನಡೆದ ಮೆರವಣಿಗೆಯಲ್ಲಿ ಕಪ್ಪು ಬಟ್ಟೆ ಧರಿಸಿ ನೂರಾರು ಜನರು ಭಾಗವಹಿಸಿದ್ದರು.

Advertisement

ಸುಮಾರು ಎರಡು ಗಂಟೆಗಳ ಕಾಲ ನಡೆದ ಮೆರವಣಿಗೆಯಲ್ಲಿ ಮಕ್ಕಳು, ಯುವಕರು ಮತ್ತು ವೃದ್ಧರು “ಆಲಿ ದೂಲಾ’ ಎಂದು ಕೂಗುತ್ತಾ ದೇಹ ದಂಡನೆ ಮಾಡಿಕೊಂಡರು. ದಾರಕ್ಕೆ ಕಟ್ಟಿದ ಬ್ಲೇಡ್‌ ಗಳ ಗೊಂಚಲನ್ನು ಎದೆ ಹಾಗೂ ಬೆನ್ನಿಗೆ ಬಡಿದುಕೊಂಡರು. ಆಗ ಅವರ ದೇಹದಿಂದ ರಕ್ತ ಚಿಮ್ಮುತ್ತಿತ್ತು. ಬಹುತೇಕರು ಕೈಗೆಳಿಂದ ಎದೆಗೆ ಬಡಿದುಕೊಂಡು ಶೋಕ ಗೀತೆ ಹಾಡಿ ಮೊಹರಂ ಆಚರಿಸಿದರು.

ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಮೊಮ್ಮಗ ಇಮಾಮಿ ಹುಸೇನ್‌ ಧರ್ಮದ ಉಳಿವಿಗಾಗಿ ಹಾಗೂ ನ್ಯಾಯಕ್ಕಾಗಿ ಹೋರಾಡಿ ಯುದ್ಧದಲ್ಲಿ ಮರಣ ಹೊಂದಿರುವ ಪ್ರತೀಕವಾಗಿ ಈ ಆಚರಣೆ ಮಾಡಲಾಗುತ್ತದೆ ಎಂಬುದು ಸಮುದಾಯದ ಜನರ ಮಾತು. ಸಾವಿನ ಸ್ಮರಣಾರ್ಥ ಶೋಕ ಆಚರಿಸಿ ದೇವರನ್ನು ಸ್ಮರಿಸುವ ಕಾರ್ಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next