ಚಿಕ್ಕಮಗಳೂರು: ಚೀನಾದ ಹಾಂಗೌಜ್‌ನಲ್ಲಿ ನಡೆದ ಪ್ಯಾರಾ ಏಷಿಯನ್ ಗೇಮ್ಸ್ ನಲ್ಲಿ ಎರಡು ಚಿನ್ನದ ಪದಕ ಗೆದ್ದಿರುವ ಜಿಲ್ಲೆಯ ರಕ್ಷಿತಾ ರಾಜು ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯನ್ನು ನೀಡುವ ಮೂಲಕ ಪ್ರಧಾನಿಯವರ ಮನಗೆದ್ದರು.
ಪ್ಯಾರ ಏಷಯನ್ ಗೇಮ್‌ನಲ್ಲಿ ಚಿನ್ನಗೆದ್ದ ಅಂಧ ಓಟಗಾರ್ತಿಯರನ್ನು ಭೇಟಿಯಾದ ವೇಳೆ ರಕ್ಷಿತಾ ರಾಜು ತಾನು ಓಡಲು ಸಹಾಯ ಮಾಡುವ ಅಂದಾಜು ಐದು ಸಾವಿರ ರೂ. ಮೌಲ್ಯದ ಟಿಟ್ವರ್ ಅನ್ನು ಕೊಡುಗೆಯಾಗಿ ನೀಡಿದರು. ರಕ್ಷಿತಾರಾಜು ಅವರು ಜಿಲ್ಲೆಯ ಮೂಡಿಗೆರೆ ತಾಲೂಕು ಕುಗ್ರಾಮದ ಗುಡ್ನಳ್ಳಿ ಗ್ರಾಮದವರಾಗಿದ್ದಾರೆ.
ಗೈಡ್ ಜತೆ ಸಮಯೋಚಿತವಾಗಿ ಓಡಲು ಸಹಾಯ ಮಾಡುವ ಟಿಟ್ವರ್ ಇದಾಗಿದ್ದು, ರಕ್ಷಿತಾ ರಾಜು ಅವರಿಂದ ಉಡುಗೊರೆ ಪಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದು, ಇದೇ ವೇಳೆ ಪ್ಯಾರಾ ಒಲಂಪಿಕ್‌ನಲ್ಲಿ ಚಿನ್ನದ ಪದಕ ಗೆಲ್ಲುವಂತೆ ಹೇಳಿದರು ಎಂದು ರಕ್ಷಿತಾ ತಿಳಿಸಿದ್ದಾರೆ.
‘ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನು ಭೇಟಿಯಾಗಿದ್ದು ಖುಷಿ ತಂದಿದೆ. ಈ ವೇಳೆ ಟಿಟ್ವರ್ ಅನ್ನು ಪ್ರಧಾನಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿದೆ. ಅದು ಏನೆಂದು ಕೇಳಿದರು. ಅವರಿಗೆ ನಾನು ವಿವರಿಸಿ ಹೇಳಿದೆ. ಟಿಟ್ವರ್ ಇದು ನನ್ನ ಟ್ರೈನಿಂಗ್ ಪಾಟ್ನರ್‌ರಾಗಿದ್ದು ಅದು ತನಗೆ ಎಷ್ಟು ಮುಖ್ಯ ಅದರಿಂದ ನನಗೆ ಏನೇನು ಓಡಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದೆ. 2018 ರಲ್ಲಿ ಇದೇ ಟಿಟ್ವರ್ ಬಳಸಿ ಚಿನ್ನದ ಪದಕ ಗೆದಿದ್ದೆ. ಈ ಬಾರಿಯೂ ಚಿನ್ನದ ಪದಕವನ್ನು ಗೆದಿದ್ದೇನೆ. ಏಷ್ಯನ್ ಗೇಮ್‌ನಲ್ಲಿ ಚಿನ್ನ ಗೆದಿದ್ದರುವಂತೆ ಪ್ಯಾರಾ ಒಲಂಪಿಕ್ ಗೇಮ್ಸ್ ನಲ್ಲು ಚಿನ್ನಗೆಲ್ಲುವಂತೆ ಹೇಳಿದರು. ನಿನ್ನ ಬೆಸ್ಟ್ ಟ್ರೈನಿಂಗ್ ಪಾಟ್ನರ್ ನನಗೆ ಉಡುಗೊರೆಯಾಗಿ ನೀಡಿದ್ದು ಖುಷಿ ತಂದಿದೆ ಎಂದರು ಎಂದು ರಕ್ಷಿತಾ ರಾಜು ತಿಳಿಸಿದರು.