Advertisement
ಚೆಸ್‌ನಲ್ಲಿ ಕಳೆದ 10 ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕಿಶನ್ ಗಂಗೊಳ್ಳಿ ಪ್ರಸ್ತುತ ಶಿವಮೊಗ್ಗದ ವಿನೋಬ ನಗರದಲ್ಲಿ ತಾಯಿ ಗೀತಾ ಜತೆ ನೆಲೆಸಿದ್ದಾರೆ. ಮೂಲತಃ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಕಲೈಕಾರ್‌ನವರು. ಅಕ್ಷಯಕಲ್ಪ ಆಗ್ಯಾìನಿಕ್ ಸಂಸ್ಥೆಯಲ್ಲಿ ಕಸ್ಟಮರ್ ಕೇರ್‌ಗೆ ಮನೆಯಿಂದಲೇ ಉದ್ಯೋಗ ಮಾಡುತ್ತಿದ್ದಾರೆ.
30ರ ಹರೆಯದ ಕಿಶನ್ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಹುಟ್ಟಿನಿಂದಲೇ ಶೇ.75 ಭಾಗ ದೃಷ್ಟಿ ಸಮಸ್ಯೆ ಹೊಂದಿದ್ದರು. ಆದರೆ ಕಲಿಕೆಗಾಗಲಿ, ಚೆಸ್‌ಗಾಗಲಿ ಈ ಅಂಧತ್ವ ಹಿನ್ನಡೆಯಾಗಲಿಲ್ಲ. 2011ರಿಂದ ಭಾರತವನ್ನು ಪ್ರತಿನಿಧಿಸುತ್ತ ಬಂದಿರುವ ಇವರು 7 ಬಾರಿ ರಾಷ್ಟ್ರೀಯ ಚಾಂಪಿಯನ್ ಹಾಗೂ ಎರಡು ಬಾರಿ ಒಲಿಂಪಿಯಾಡ್ ಪದಕ ವಿಜೇತರಾಗಿದ್ದಾರೆ. 2012ರಲ್ಲಿ ಚೆನ್ನೈನಲ್ಲಿ ನಡೆದ ಅಂಧರ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಚೈಯಕ್ತಿಕ ಚಿನ್ನದ ಪದಕ ಗೆದ್ದ ದೇಶದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಇವರದು. 2013-2023ರ ವರೆಗೆ ಸತತ 7 ಬಾರಿ ಅಂಧರ ರಾಷ್ಟ್ರೀಯ ಚೆಸ್ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದಾರೆ. ಮೂಲತಃ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಶಿವಮೊಗ್ಗದ ವಿನೋಬಾ ನಗರದ ಬ್ಯೂಟಿಶಿಯನ್ ಗೀತಾ ಗಂಗೊಳ್ಳಿ ಅವರ ಏಕೈಕ ಪುತ್ರ.
Related Articles
ತಂಡ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಕಿಶನ್ ಗಂಗೊಳ್ಳಿ, ಆರ್ಯನ್ ಜೋಶಿ ಹಾಗೂ ಸೋಮೇಂದ್ರ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಅಭಿನಂದಿಸಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ತಮ್ಮಿಂದ ಮೂಡಿಬರುವಂತಾಗಲಿ ಎಂದು ಹಾರೈಸಿದ್ದಾರೆ. ನ. ಒಂದರಂದು ಪದಕ ವಿಜೇತರನ್ನು ಪ್ರಧಾನಿ ಗೌರವಿಸಲಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಕಿಶನ್ ಗಂಗೊಳ್ಳಿ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
4 ಪದಕ ಗೆದ್ದು ಬರುತ್ತೇನೆ ಎಂದಿದ್ದತಾಯಿ ಗೀತಾ”ಈ ಬಾರಿಯ ಪ್ಯಾರಾ ಗೇಮ್ಸ್‌ಗೆ ಹೊರಡುವ ಮುನ್ನ, ಈ ಸಲ ನಾನು 4 ಪದಕ ಗೆದ್ದು ಬರುತ್ತೇನೆ ಎಂದು ಹೇಳಿದ್ದ. ಆದರೆ ಪಂದ್ಯಾ ವಳಿಗೆ ಹೊರಡುವ 15 ದಿನ ಮೊದಲ ಒಂದು ವಾರ ಜ್ವರದಿಂದ ಬಳಲಿದ. ಔಷಧಿಯನ್ನೂ ತೆಗೆದುಕೊಳ್ಳುವಂತಿ ರಲಿಲ್ಲ. ಸರಕಾರದ ಅನು ಮತಿ ಪ್ರಕ್ರಿಯೆಯೂ ತುಸು ವಿಳಂಬ ವಾಗಿತ್ತು. ಈ ಗೊಂದಲದಿಂದ ಚಿಂತೆಗೊಳಗಾಗಿದ್ದ. ಇದು ಟೂರ್ನಿಗೂ ಮುನ್ನ ತರಬೇತಿಗೆ ತುಸು ಹಿನ್ನಡೆಯಾಗಿ ಪರಿಣಮಿಸಿತು. ಆದರೂ ಎರಡು ಪದಕ ಗೆದ್ದಿರುವುದು ತುಂಬಾ ಖುಷಿಯಾಯಿತು. ಅಲ್ಲಿಗೆ ತೆರಳುವ ಮುನ್ನ ಕೊರಗಜ್ಜ ದೈವಸ್ಥಾನ, ಶಿರಡಿ ಸಹಿತ ಅನೇಕ ಧಾರ್ಮಿಕ ಸ್ಥಳಗಳಿಗೆ ತೆರಳಿ ಪ್ರಾರ್ಥಿಸಿದ್ದೆವು. ದೇವರ ದಯೆಯಿಂದ ಈ ಸಾಧನೆ ಮಾಡುವಂತಾಗಿದೆ’ ಎಂದು “ಉದಯವಾಣಿ’ ಜತೆ ಕಿಶನ್ ಗಂಗೊಳ್ಳಿ ಅವರ ತಾಯಿ ಗೀತಾ ಗಂಗೊಳ್ಳಿ ಸಂತಸ ಹಂಚಿಕೊಂಡಿದ್ದಾರೆ. 2 ಕಂಚಿನ ಪದಕ ಗೆದ್ದ ಬಳಿಕ ಅಮ್ಮನಿಗೆ ಕರೆ ಮಾಡಿದ ಕಿಶನ್, “ಎರಡು ಚಿನ್ನ ಗೆಲ್ಲುವ ಅವಕಾಶ ತಪ್ಪಿತು’ ಎಂದು ಬೇಸರ ವ್ಯಕ್ತಪಡಿ ಸಿದ್ದರು. ಮುಂದಿನ ಬಾರಿ ಇದಕ್ಕಿಂತ ಉತ್ತಮ ಸಾಧನೆ ಮಾಡುತ್ತೇನೆ ಎಂದು ತಾಯಿ ಜತೆ ಹೇಳಿಕೊಂಡಿದ್ದಾರೆ.