Advertisement

Para Archery 9 ಪದಕ: ಭಾರತಕ್ಕೆ ಅಗ್ರಸ್ಥಾನದ ಗೌರವ

12:05 AM Nov 23, 2023 | Team Udayavani |

ಬ್ಯಾಂಕಾಕ್‌: ಏಷ್ಯನ್‌ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ 9 ಪದಕ ಗೆದ್ದ ಭಾರತ ಅಗ್ರಸ್ಥಾನ ಸಂಪಾದಿಸಿದೆ. ಆರ್ಚರಿ ಪವರ್‌ಹೌಸ್‌ ದಕ್ಷಿಣ ಕೊರಿಯಾ ದ್ವಿತೀಯ ಸ್ಥಾನಕ್ಕೆ ಇಳಿಯಿತು (3-1-1).

Advertisement

ವಿಶ್ವದ 5ನೇ ರ್‍ಯಾಂಕಿಂಗ್‌ ಆರ್ಚರ್‌ ರಾಕೇಶ್‌ ಕುಮಾರ್‌ ಸ್ವರ್ಣ ಪದಕಗಳ ಹ್ಯಾಟ್ರಿಕ್‌ ಸಾಧಿಸಿದ್ದು ಈ ಕೂಟದ ವಿಶೇಷ. ಅವರು ಕಳೆದ ಹ್ಯಾಂಗ್‌ಝೂ ಪ್ಯಾರಾ ಏಷ್ಯಾಡ್‌ನ‌ಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಭಾರತ ಈ ಕೂಟದಲ್ಲಿ 4 ಚಿನ್ನ, 4 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿತು. ಪುರುಷರ ಕಂಪೌಂಡ್‌, ಪುರುಷರ ಕಂಪೌಂಡ್‌ ಓಪನ್‌ ಟೀಮ್‌ ಮತ್ತು ಮಿಶ್ರ ತಂಡ ವಿಭಾಗದಲ್ಲಿ ರಾಕೇಶ್‌ ಕುಮಾರ್‌ ಬಂಗಾರ ಗೆದ್ದರು. ಕೂಟದ ಮತ್ತೂಂದು ಚಿನ್ನ ವನಿತಾ ಕಂಪೌಂಡ್‌ ಓಪನ್‌ ವಿಭಾಗ ದಲ್ಲಿ ಒಲಿಯಿತು. ಇಲ್ಲಿ ಶೀತಲ್‌-ಜ್ಯೋತಿ ಸೇರಿಕೊಂಡು ದಕ್ಷಿಣ ಕೊರಿಯಾದ ಜಿನ್‌ ಯಂಗ್‌ ಜಿಯೊಂಗ್‌-ನಾ ಮಿ ಚೊç ಜೋಡಿಗೆ ಆಘಾತವಿಕ್ಕಿದರು.

Advertisement

Udayavani is now on Telegram. Click here to join our channel and stay updated with the latest news.

Next