Advertisement

Papua New Guinea ಭೂಕುಸಿತ: ಮೃತರ ಸಂಖ್ಯೆ 2,000ಕ್ಕೇರಿಕೆ

12:53 AM May 28, 2024 | Team Udayavani |

ಮೆಲ್ಬೊರ್ನ್: ಪಪುವಾ ನ್ಯೂಗಿನಿಯಾದ ಯೆಂಗಾ ಪ್ರಾಂತದಲ್ಲಿ ಉಂಟಾದ ಭೂಕುಸಿತದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಸಜೀವವಾಗಿ ಸಮಾಧಿಯಾಗಿದ್ದಾರೆ. ಈ ಬಗ್ಗೆ ಅಲ್ಲಿನ ಸರಕಾರವೇ ದೃಢಪಡಿಸಿದೆ. ಜತೆಗೆ ಅಂತಾರಾಷ್ಟ್ರೀಯ ಸಮುದಾಯ ನೆರವು ನೀಡಬೇಕು ಎಂದೂ ಮನವಿ ಮಾಡಿಕೊಂಡಿದೆ. ಈ ಬಗ್ಗೆ ಅದು ವಿಶ್ವಸಂಸ್ಥೆಗೆ ಮನವಿ ಮಾಡಿ ಕೊಂಡಿದೆ. ಸಾವಿನ ಸಂಖ್ಯೆ 670ಕ್ಕೆ ಏರಿಕೆ ಯಾಗಿದೆ ಎಂದು ಎಂದು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವಿಶ್ವಸಂಸ್ಥೆ ಅಧಿಕಾರಿಗಳು ರವಿವಾರ ತಿಳಿಸಿದ್ದರು. ಇದೀಗ ಆ ದೇಶದ ಸರಕಾರದಿಂದಲೇ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ಬಗ್ಗೆ ದೃಢೀಕರಣ ನೀಡಿದೆ.

Advertisement

ಇದರ ಜತೆಗೆ ಭೂಕುಸಿತದಿಂದಾಗಿ ನೂರಾರು ಮನೆಗಳು, ಕೃಷಿ ಭೂಮಿ ನಾಶವಾಗಿದೆ ಎಂದು ಸರಕಾರ ಹೇಳಿ ಕೊಂಡಿದೆ. ಈ ಹಿನ್ನೆಲೆಯಲ್ಲಿ ಅಂತಾ ರಾಷ್ಟ್ರೀಯ ಸಮುದಾಯ ನೆರವು ನೀಡಬೇಕು. ಪ್ರಾಕೃತಿಕ ದುರಂತ ಉಂಟಾಗಿರುವ ಪ್ರದೇಶದಲ್ಲಿ ಇನ್ನೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ ಎಂದೂ ಸರಕಾರ ಹೇಳಿದೆ. ಅಂತಾರಾಷ್ಟ್ರೀಯ ವಲಸೆಗಾರರ ಒಕ್ಕೂಟ ಭೂಕುಸಿತದಿಂದ ಉಂಟಾಗಿರುವ ಸಾವಿನ ಸಂಖ್ಯೆ 670 ಮಂದಿ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next