Advertisement

ಹೆಂಗಳೆಯರ ಮನಸೂರೆಗೊಂಡ ಪೇಪರ್‌ ಆಭರಣ

10:11 AM Mar 21, 2020 | mahesh |

ಮಕ್ಕಳಿಗೊಪ್ಪುವ ಹೇರ್‌ಬ್ಯಾಂಡ್‌
ಚಿಕ್ಕ ಮಕ್ಕಳಿಗೆ ಡ್ರೇಸ್‌ಗಳಿಗೆ ಮ್ಯಾಚ್‌ ಆಗುವಂತಹ ಹೇರ್‌ಬ್ಯಾಂಡ್‌ ತೊಡಬೇಕೆಂಬ ಆಸೆ ಇರುತ್ತವೆ.. ಅದಲ್ಲದೆ ತಾಯಂದಿರಿಗೆ ಮಗುವನ್ನು ಸುಂದರವಾಗಿ ರೆಡಿ ಮಾಡಬೇಕು ಎನ್ನುವ ಹಂಬಲವಿರುತ್ತದೆ, ಅಂತವರು ಪೇಪರ್‌ ಹೇರ್‌ಬ್ಯಾಂಡ್‌ಗಳನ್ನು ಮಕ್ಕಳಿಗೆ ತೊಡಿಸಬಹುದು. ಇದು ತುಂಬಾ ಭಾರವಿಲ್ಲದೆ, ಕೂದಲು ಹಾಳಾಗುವದನ್ನು ತಡೆಗಟ್ಟುತ್ತದೆ. ಇದರ ಬೆಲೆ ಕೂಡ ಕಡಿಮೆ ಇದ್ದು, ಫ್ರಾಕ್‌, ಸ್ಕರ್ಟ್‌, ಜೀನ್ಸ್‌ಗಳಿಗೂ ತುಂಬಾ ಸುಂದರವಾಗಿ ಕಾಣುತ್ತದೆ.

Advertisement

ಚೆಂದ ಚೆಂದದ ಉಂಗುರ
ಪೇಪರ್‌ ಉಂಗುರಗಳ ನಿರ್ವಹಣೆ ಸ್ವಲ್ಪ ಕಷ್ಟವಾಗಿದ್ದರೂ ಕೂಡ ಗೌನ್‌, ಚಿಕ್ಕ ಚಿಕ್ಕ ಸ್ಕರ್ಟ್‌ಗಳಿಗೆ ಇದು ತುಂಬಾ ಸುಂದರವಾಗಿ ಕಾಣುತ್ತದೆ. ನೀಮಗೆ ಯಾವ ರೀತಿಯ ಸೈಜ್‌ ಎಂಬುದನ್ನು ಖಚಿತ ಪಡಿಸಿಕೊಂಡು ಖರೀದಿಸಬೇಕಾಗುತ್ತದೆ.

ಇತ್ತೀಚೆಗೆ ಅನೇಕ ಮಾದರಿಯ ಕಡಗಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು ಇದಕ್ಕೆ ಸೇಡ್ಡು ಹೊಡೆಯಲು ಪೇಪರ್‌ ಕ್ವಿಲ್ಲಿಂಗ್‌ ಬ್ರ್ಯಾಸ್‌ಲೈಟ್‌ ಸಿದ್ಧವಾಗಿದೆ. ಇದು ಅನೇಕ ರೀತಿಯ ಮಾದರಿಯನ್ನು ಒಳಗೊಂಡಿದ್ದು ನೀವು ಹೇಳಿದ ರೀತಿಯ ಕಡಗಗಳು ಸಿಗಲಿವೆ. ನಿಮ್ಮ ಆಯ್ಕೆಗನುಗುಣವಾಗಿ ಅದರ ಬೆಲೆಯನ್ನು ನಿಗದಿ ಮಾಡಲಾಗುತ್ತದೆ.

ಮನಸೆಳೆಯುವ ಆಭರಣಗಳು
ಇದರಲ್ಲಿ ಅನೇಕ ರೀತಿಯ ಮಾದರಿಗಳಿದ್ದು ಬಳೆ, ಸರಗಳಿಗೆ ಹಾಕುವ ಪದಕ(ಪೇಡೆಂಟ್‌), ಪೇಪರ್‌ ಕ್ವಿಲ್ಲಿಂಗ್‌ ಕಣಗಾಲುಗಳು, ಕಾಲಿಗೆ ಹಾಕುವ ಗೆಜ್ಜೆಗಳು, ಸಿಂಗಲ್‌ ಚೈನ್‌ಗಳು, ಸ್ಟೋನ್‌ ಇಯರಿಂಗ್ಸ್‌, ನಕ್ಲೇಸ್‌ ವಿತ್‌ ಇಯರಿಂಗ್‌ ಹೀಗೆ ಬಗೆ ಬಗೆಯ ಆಭರಣಗಳು ಹೆಂಗಳೆಯರ ಮನಸೂರೆಗೊಳ್ಳುತ್ತಿವೆ.

- ಪ್ರೀತಿ ಭಟ್‌ ಗುಣವಂತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next