Advertisement

ಆರೋಗ್ಯವೃದ್ಧಿಗೆ ಪಪ್ಪಾಯಿ ಹಣ್ಣು

09:31 PM Oct 21, 2019 | mahesh |

ಇತ್ತೀಚಿನ ಫಾಸ್ಟ್‌ ಫ‌ುಡ್‌ ಕಾಲಘಟ್ಟದಲ್ಲಿ ದೇಹಕ್ಕೆ ಬೇಕಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ತೀರ ವಿರಳವೆಂಬಂತಾಗಿದೆ. ಮುಂದೆ ಬರಬಹುದಾದ ಸಮಸ್ಯೆಗಳಿಗೆ ಆಹ್ವಾನ ನೀಡುವ ಬದಲು ಈಗಿಂದಲೇ ಅಗತ್ಯ ಆಹಾರವನ್ನು ಆಯ್ಕೆ ಮಾಡಿ ಸೇವಿಸುವುದು ಒಳಿತಲ್ಲವೇ. ಈ ನಿಟ್ಟಿನಲ್ಲಿ ದೇಹದ ಆರೋಗ್ಯವೃದ್ಧಿಗೆ ಉಪಯುಕ್ತವಾಗುವ ಪಪ್ಪಾಯಿ ಸೇವನೆಯನ್ನು ಮಾಡುವುದರಿಂದ ಏನೆಲ್ಲಾ ಒಳಿತಿದೆ ಎಂದು ಇಲ್ಲಿ ನೀವು ಕಾಣಬಹುದಾಗಿದೆ.

Advertisement

ಜೀರ್ಣಕ್ರಿಯೆ ಸುಗಮ
ಜೀರ್ಣಕ್ರಿಯೆಗೆ ಉಪಯುಕ್ತವಾಗುವ ಪಪ್ಪಾಯಿಯಲ್ಲಿ ನಾರಿನಾಂಶವಿದೆ. ಮೊಸರಿನೊಂದಿಗೆ ಪಪ್ಪಾಯಿ ಬೆರೆಸಿ ಸೇವಿಸುವುದರಿಂದ ಹೆಚ್ಚಿನ ಪ್ರೋಟಿನ್‌ ಅಂಶವನ್ನು ಪಡೆಯಬಹುದಾಗಿದೆ. ಪಪ್ಪಾಯಿಯಲ್ಲಿರುವ ಲಾಟೆಕ್ಸ್‌ ಮತ್ತು ಎನ್ನಮ್‌ ಜೀರ್ಣಕ್ರಿಯೆಯ ಸ್ನಾಯುಗಳನ್ನು ಸಡಿಲಗೊಳಿಸಿ ದೇಹದಲ್ಲಿರುವ ಅನುಪಯುಕ್ತ ಮತ್ತು ಹಾನಿಕಾರಕ ಅಂಶಗಳನ್ನು ದೇಹದಿಂದ ಹೊರಹಾಕುತ್ತದೆ.

ಮಲಬದ್ಧತೆ ಸಮಸ್ಯೆ ನಿವಾರಕ
ಹಸಿ ಪಪ್ಪಾಯಿನಲ್ಲಿರುವ ಅಧಿಕ ನಾರಿನಾಂಶ ಕರುಳನ್ನು ಅತ್ಯಂತ ಕ್ರಿಯಾಶೀಲವಾಗಿಸುವಲ್ಲಿ ಉಪಯುಕ್ತ. ಪಪ್ಪಾಯಿ ಕಾಯಿಯನ್ನು ಸಣ್ಣಗೆ ತುಂಡರಿಸಿ ಅದಕ್ಕೆ ಉಪ್ಪು, ನಿಂಬೆರಸ, ಜೀರಿಗೆ ಪುಡಿ ಬೆರೆಸಿ ತಿನ್ನಬೇಕು. ಇದರಿಂದಾಗಿ ಮಲಬದ್ಧತೆ ಸಮಸ್ಯೆ ನಿವಾರಿಸಬಹುದಾಗಿದೆ.

ನರದೌರ್ಬಲ್ಯ ನಿವಾರಕ
ಕಬ್ಬಿಣ ಹಾಗೂ ಕ್ಯಾಲ್ಸಿಯಂ ಹೇರಳವಾಗಿ ಲಭ್ಯವಾಗುವ ಪಪ್ಪಾಯಿ ಸೇವನೆಯೂ ನರದೌರ್ಬಲ್ಯ ಸಮಸ್ಯೆಯ ನಿವಾರಕವಾಗಿದೆ. ಹಾಲು, ಜೇನುತುಪ್ಪದೊಂದಿಗೆ ಪಪ್ಪಾಯಿ ಸೇವಿಸಬೇಕು. ಇದು ನರದೌರ್ಬಲ್ಯದೊಂದಿಗೆ ಮಧುಮೇಹದ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ.

ಸೌಂದರ್ಯ ವೃದ್ಧಿಗೆ ಸಹಕಾರಿ
ಸೌಂದರ್ಯಕ್ಕಾಗಿ ನಾವಿಂದು ಕೆಮಿಕಲ್‌ಗ‌ಳಿಗೆ ಮೊರೆಹೋಗುತ್ತಿರುವುದು ವಿಪರ್ಯಾಸವೆನ್ನಬಹುದು. ನಿಯಾಸಿಸ್‌ ಮತ್ತು ಕ್ಯಾರೋಟಿನ್‌ ಅಂಶಗಳು ದೇಹದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಣ್ಣನ್ನು ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದಾಗಿ ಮೊಡವೆ ಸಮಸ್ಯೆ ನಿವಾರಿಸುತ್ತದೆ.

Advertisement

ಜಂತುಹುಳು ನಿವಾರಕ
ಮಕ್ಕಳಲ್ಲಿ ಹೆಚ್ಚಾಗಿ ಕಾಣಸಿಗುವ ಜಂತುಹುಳು ಸಮಸ್ಯೆ ಅಧಿಕ ಸಿಹಿತಿನಿಸನ್ನು ತಿನ್ನುವುದರಿಂದಾಗಿ ಉದ್ಭವಿಸುವ ಸಮಸ್ಯೆಯಾಗಿದೆ. ಪಪ್ಪಾಯಿ ಬೀಜವನ್ನು ಊಟಕ್ಕೆ ಮೊದಲು ಸೇವಿಸಬಹುದು ಇಲ್ಲವೆ ಹಣ್ಣಿನ ತಿರುಳನ್ನು ನಿಯಮಿತವಾಗಿ ಮಕ್ಕಳಿಗೆ ನೀಡುವುದರಿಂದ ಜಂತುಹುಳು ಸಮಸ್ಯೆ ನಿವಾರಣೆ ಮಾಡಲು ಉಪಯುಕ್ತವಾಗಿದೆ.

-  ರಾಧಿಕಾ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next