ಪುಣೆ: ಎಳೆವೆಯಲ್ಲಿಯೇ ಸ್ವ ಇಚ್ಛೆಯಿಂದ ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಒರೆಗೆ ಹಚ್ಚಿ, ಅದರಲ್ಲಿ ಸಾಧನೆಯನ್ನು ಮಾಡಿದಾಗ ಅದರಿಂದ ಸಿಗುವ ತೃಪ್ತಿ ಪರಿಪೂರ್ಣವಾಗಿರುತ್ತದೆ. ಧನಾತ್ಮಕ ಮನೋಭಾವ, ತನ್ನಲ್ಲಿರುವ ಸಾಮರ್ಥ್ಯ, ಪ್ರತಿಭೆಯ ಬಗ್ಗೆ ನಂಬಿಕೆ, ಸರಿಯಾದ ಆಯ್ಕೆ ಮತ್ತು ಬದ್ದತೆಯಿಂದ ಒಬ್ಬ ವ್ಯಕ್ತಿಯು ತಾನು ಆಯ್ದುಕೊಂಡ ಕಾರ್ಯ ಕ್ಷೇತ್ರದಲ್ಲಿ ಯಶಸ್ವಿನತ್ತ ಮುನ್ನಡೆಯುತ್ತಾನೆ. ಮಹತ್ವಾಕಾಂಕ್ಷೆಯ ನಿರ್ದಿಷ್ಟ ಗುರಿಯೊಂದಿಗೆ ಕ್ರಿಯಾಶೀಲತೆಯಿಂದ ತಾನು ಸಾಧಿಸುವ ಛಲದೊಂದಿಗೆ ಮುನ್ನಡೆದರೆ ಫಲ ಸಾಧ್ಯ. ಹರೀಶ್ ಶೆಟ್ಟಿ ಎರ್ಮಾಳ್ ಇವರು ಇಂದು ಗಾಯನ ಕ್ಷೇತ್ರದಲ್ಲಿ ಸಾಧನೆಗೈದು ತನ್ನದೇ ಅದ ಒಂದು ಕಲಾ ಸಂಸ್ಥೆಯನ್ನು ಹುಟ್ಟುಹಾಕಿ ಮುಂಬಯಿಯಲ್ಲಿ ಯಶಸ್ಸನ್ನು ಕಂಡು ಪುಣೆಯಲ್ಲಿಯು ಅದರ ಶಾಖೆಯನ್ನು ತೆರೆದಿ¨ªಾರೆ. ಪ್ರತಿಭೆ ಮತ್ತು ಸಾಮರ್ಥ್ಯದಿಂದ ಕಲಾ ಪ್ರೌಢಿಮೆಯನ್ನು ಪಡೆಯಬಹುದು ಎಂದು ಇವರು ತೋರಿಸಿಕೊಟ್ಟಿ¨ªಾರೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ನುಡಿದರು.
ಮಾ. 8 ರಂದು ಪುಣೆಯ ಗಣೇಶ್ ನಗರದ ಕನ್ನಡ ಸಂಘದ ಶಕುಂತಳಾ ಜಗನ್ನಾಥ ಸಭಾಗ್ರಹದಲ್ಲಿ ಜರಗಿದ ಮುಂಬಯಿಯ ಹೆಸರಾಂತ ನಟ, ಹಿನ್ನೆಲೆ ಗಾಯಕರಾದ ಹರೀಶ್ ಶೆಟ್ಟಿ ಎರ್ಮಾಳ್ ಇವರ ಸಾರಥ್ಯದಲ್ಲಿ, ಪನ್ವಿ ಕ್ರಿಯೇಶನ್ಸ್ ಮುಂಬಯಿ ಇದರ ನೂತನ ಪುಣೆ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಇವರು, ನಮ್ಮೊಳಗಿನ ಮನದಾಳದ ಧ್ವನಿಯು ಭಾವನೆಯೊಂದಿಗೆ ತುಂಬಿ ಹೊರಹೊಮ್ಮಿದಾಗ ಇಂಪಾದ ಗಾಯನ ಕೇಳುಗರ ಮನಸನ್ನು ಗೆಲ್ಲುತ್ತದೆ. ಅಂತಹ ಪ್ರತಿಭೆಯ ಹರೀಶ್ ಅವರ ಹಾಡು ನಮ್ಮೆಲ್ಲರ ಮನತುಂಬಿದೆ. ಅವರ ಈ ಸಂಸ್ಥೆಯು ಪ್ರಗತಿಯನ್ನು ಹೊಂದಿ ಯಶಸ್ಸನ್ನು ಪಡೆಯಲಿ ಎಂದು ಶುಭ ಹಾರೈಸಿದರು.
ಈ ಉದ್ಘಾಟನಾ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಪುಣೆ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ, ಪಿಂಪ್ರಿ- ಚಿಂಚಾÌಡ್ ಬಂಟ್ಸ್ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಎರ್ಮಾಳ್, ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಪುಣೆ ತುಳು ಕೂಟದ ಅಧ್ಯಕ್ಷ ತಾರಾನಾಥ್ ರೈ ಮೇಗಿನಗುತ್ತು, ಅಯ್ಯಪ್ಪ ಸೇವಾ ಸಂಘ ಕಾತ್ರಜ್ ಪುಣೆ ಅಧ್ಯಕ್ಷ ಸುಭಾಷ್ ಶೆಟ್ಟಿ, ಪುಣೆ ಬಿಲ್ಲವ ಸಂಘದ ನಿಕಟಪೂರ್ವ ಅಧ್ಯಕ್ಷ ಸದಾಶಿವ ಎಸ್. ಸಾಲ್ಯಾನ್, ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ವಲಯದ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಬಂಟರ ಸಂಘ ಪುಣೆ ದಕ್ಷಿಣ ಪ್ರಾದೇಶಿಕ ವಲಯದ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ, ಪತ್ತನಾಜೆ ಚಲನಚಿತ್ರದ ಸಹ ನಿರ್ಮಾಪಕ ಮಂಜುನಾಥ್ ಬನ್ನೂರು, ಹೋಟೆಲ್ ಉದ್ಯಮಿ ಬಾಲಚಂದ್ರ ಶೆಟ್ಟಿ ಎರ್ಮಾಳ್ ಇವರು ಉಪಸ್ಥಿತರಿದ್ದರು. ಅತಿಥಿ ಗಣ್ಯರು ಪನ್ವಿ ಕ್ರಿಯೇಶನ್ಸ್ ನ ಪುಣೆ ಶಾಖೆಯನ್ನು ದೀಪ ಬೆಳಗಿಸಿಸುವುದರ ಮೂಲಕ ಉದ್ಘಾಟಿಸಿದರು.
ಪನ್ವಿ ಕ್ರಿಯೇಶನ್ಸ್‌ನ ಮಾರ್ಗದರ್ಶಕ, ಕಲಾ ಜಗತ್ತು ಮುಂಬಯಿ ಇದರ ರೂವಾರಿ ಪತ್ತನಾಜೆ ತುಳು ಚಲನಚಿತ್ರ ನಿರ್ಮಾಪಕ, ನಿರ್ದೇಶಕ ತೋನ್ಸೆ ವಿಜಯಕುಮಾರ್ ಶೆಟ್ಟಿ ಇವರು ಮಾತನಾಡಿ, ನಮ್ಮ ತಾಯ್ನಾಡಿನ ನಮ್ಮ ಮಾತೃ ಭಾಷೆ, ನಮ್ಮ ಮಾತೃ ಸಂಸ್ಕೃತಿಯ ಅರಿವನ್ನು ಮಕ್ಕಳಿಗೆ ಎಳೆವೆಯಲ್ಲಿಯೇ ಪರಿಚಯಿಸುವ ಕೆಲಸ ಆಗಬೇಕು. ನಮ್ಮ ಶ್ರೀಮಂತ ಕಲಾ ವೈಭವಗಳು ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಸಿಗಲು ಸಾಧ್ಯವಿಲ್ಲ. ನಾವು ಎÇÉೇ ಇದ್ದರು ನಮ್ಮ ತನವನ್ನು ತೋರಿಸಿಕೊಳ್ಳುತ್ತೇವೆ. ನಮ್ಮ ಮೂಲ ತುಳು ನಾಡಿನೊಂದಿಗೆ ಎರಡನೆಯ ತುಳುನಾಡಿನತಿರುವ ಮುಂಬಯಿಯೊಂದಿಗೆ ಮೂರನೆಯದು ಪುಣೆ ಎಂಬುದು ಸತ್ಯ. ಪುಣೆಯಲ್ಲಿ ಅದೆಷ್ಟು ತುಳು ಸಂಸ್ಕೃತಿಯ ಅಚಾರ ವಿಚಾರಗಳ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇಲ್ಲಿ ನಮ್ಮ ಸಂಸ್ಕೃತಿಗೆ ಪ್ರೋತ್ಸಾಹ ನೀಡುವಂತಹ ಜನರಿ¨ªಾರೆ. ಪ್ರವೀಣ್ ಶೆಟ್ಟಿ ಪುತ್ತೂರು ಇವರು ತೆರೆಯ ಮರೆಯಲ್ಲಿ ಅದೆಷ್ಟೋ ಕಲಾ ಸೇವೆಗಳನ್ನು ಮಾಡುತಿ¨ªಾರೆ. ನಮ್ಮ ಶ್ರೀಮಂತ ಕಲೆ ಯಕ್ಷಗಾನಕ್ಕೆ ಒಂದು ತಳಪಾಯವನ್ನು ಪುಣೆಯಲ್ಲಿ ಹಾಕಿಸಿಕೊಟ್ಟಿ¨ªಾರೆ. ಅಲ್ಲದೆ ಬೇರೆ ಬೇರೆ ಮಹನೀಯರು ಕಲಾ ಸೇವೆಯ ಮೂಲಕ ತಮ್ಮ ಸೇವೆ ಸಲ್ಲಿಸಿ¨ªಾರೆ. ಈ ಪನ್ವಿ ಕ್ರಿಯೇಶನ್ಸ್‌ಗೆ ಕೂಡಾ ತಮ್ಮದೇ ಸಂಸ್ಥೆ ಎಂಬ ಅಭಿಮಾನದೊಂದಿಗೆ ಸಹಕಾರ ನೀಡಿ ಎಂದರು.
ಈ ಸಂದರ್ಭದಲ್ಲಿ ಹರೀಶ್ ಶೆಟ್ಟಿ ಎರ್ಮಾಳ್ ಇವರನ್ನು ಪುಣೆಯ ಕಲಾಭಿಮಾನಿಗಳ ಪರವಾಗಿ ಸಮ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪನ್ವಿ ಕ್ರಿಯೇಷನ್ಸ್‌ನ ರೂವಾರಿ ಹರೀಶ್ ಶೆಟ್ಟಿ ಎರ್ಮಾಳ್ ಇವರ ಸಾರಥ್ಯದಲ್ಲಿ ತಂಡದವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ಹಾಗು ಉಮೇಶ್ ಹೆಗ್ಡೆ ಕಡ್ತಲ ಇವರ ನೇತೃತ್ವದಲ್ಲಿ ಮುಂಬಯಿ ಹಾಗು ಊರಿನ ಪ್ರಸಿದ್ದ ಕಲಾವಿದರಿಂದ ರಾಗದ ರಸೊಕು ತೆಲಿಕೆದ ನೆಸಲ್ ಎಂಬ ಮನೋರಂಜನಾ ಕಾರ್ಯಕ್ರಮ ಜರಗಿತು.ಪನ್ವಿ ಕ್ರಿಯೇಶನ್ಸ್ ರೂವಾರಿ ಹರೀಶ್ ಶೆಟ್ಟಿ ಅವರು ಪುಣೆಯಲ್ಲಿ ತಮ್ಮ ಸಂಸ್ಥೆಯ ಬ್ಯಾನರ್ ಉದ್ಘಾಟನಾ ಕಾರ್ಯಕ್ರಮಕ್ಕೆ ಪುಣೆಯ ಉದ್ಯಮಿಗಳು ಕಲಾಭಿಮಾನಿಗಳು, ಮಿತ್ರರು ತುಂಬು ಹೃದಯದಿಂದ ಸಹಕಾರವನ್ನು ನೀಡಿ¨ªಾರೆ. ಅವರೆಲ್ಲರಿಗೂ ಕ್ರತಜ್ಞತೆ ಸಲ್ಲಿಸಿದರು. ವಿಶ್ವನಾಥ್ ಶೆಟ್ಟಿ ಬಸ್ತಿ ಹಿರಿಯಡ್ಕ, ಅರುಣ್ ಶೆಟ್ಟಿ ಎರ್ಮಾಳ್, ಸುದೀಪ್ ಪೂಜಾರಿ ಮತ್ತು ಇತರರು ಸಹಕರಿಸಿದರು. ತೋನ್ಸೆ ವಿಜಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಲಾ ಸೇವೆ ಎಂದರೆ ಅದು ಸರಸ್ವತೀಯ ಪೂಜೆಗೈ ದಂತೆ. ಮುಂಬಯಿಯಲ್ಲಿ ಯಶಸ್ಸನ್ನು ಕಂಡು ಉತ್ತಮ ನಾಮಾಂಕಿತದೊಂದಿಗೆ ರಾಗ, ಹಾಸ್ಯದ ಸಂಗಮದ ಕಲಾ ಸೇವೆ ಮಾಡುತಿರುವ ಹರೀಶ್ ಶೆಟ್ಟಿಯವರ ಪನ್ವಿ ಕ್ರಿಯೇಶನ್ಸ್ ಹೆಮ್ಮರವಾಗಿ ಬೆಳೆಯಲಿ
ನಾರಾಯಣ ಕೆ. ಶೆಟ್ಟಿ (ಅಧ್ಯಕ್ಷರು : ಬಂಟ್ಸ್ ಅಸೋಸಿಯೇಶನ್ ಪುಣೆ).
ತುಂಬಾ ಅಭಿಮಾನದ ಕಾರ್ಯ ಉತ್ತಮ ಹಾಗು ಅಷ್ಟೇ ರಸವತ್ತಾದ ಕಾರ್ಯಕ್ರಮಗಳನ್ನು ನೀಡಿ ಹೆಸರು ಪಡೆದ ಪನ್ವಿ ಕ್ರಿಯೇಶನ್ಸ್ ನಮ್ಮ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮುಂದಡಿಯಿಡಲಿ. ಕಲಾ ಸಾರಥಿ ವಿಜಯ ಕುಮಾರ್ ಶೆಟ್ಟಿಯವರ ಗರಡಿಯಲ್ಲಿ ಪಳಗಿದ ಪ್ರತಿಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಾರೆ
ಪ್ರವೀಣ್ ಶೆಟ್ಟಿ ಪುತ್ತೂರು (ಅಧ್ಯಕ್ಷರು : ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ).
ಪ್ರಾಮಾಣಿಕವಾಗಿ ನಿಸ್ವಾರ್ಥವಾಗಿ ಸೇವೆಗೈದಾಗ ಯಶಸ್ಸು ತನ್ನಿಂತಾನೆ ಅರಸಿ ಕೊಂಡು ಬರುತ್ತದೆ. ಪನ್ವಿ ಕ್ರಿಯೇಶನ್ಸ್ ಕೂಡಾ ತನ್ನ ಬ್ಯಾನರ್‌ನಡಿಯಲ್ಲಿ ಉತ್ತ ಮೋತ್ತಮ ಕಾರ್ಯಕ್ರಮಗಳನ್ನು ನೀಡಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ
ತಾರಾನಾಥ್ ರೈ ಮೆಗಿನಗುತ್ತು (ಅಧ್ಯಕ್ಷರು : ತುಳುಕೂಟ ಪುಣೆ).
ಚಿತ್ರ -ವರದಿ : ಹರೀಶ್ ಮೂಡಬಿದ್ರಿ ಪುಣೆ