Advertisement

ಪಾಂಗಳ ಶರತ್ ಶೆಟ್ಟಿ ಪ್ರಕರಣ: ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ

07:52 PM Feb 14, 2023 | Team Udayavani |

ಉಡುಪಿ: ಫೆಬ್ರವರಿ 5 ರಂದು ನಡೆದ ಪಾಂಗಳ ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಗಳಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತರನ್ನು ಕುಳಾಯಿ ನಿವಾಸಿಯಾದ ದಿವೇಶ್ ಶೆಟ್ಟಿ (20 ವರ್ಷ) ಹಾಗೂ ಲಿಖಿತ್ ಕುಲಾಲ್ (21 ವರ್ಷ) ಎನ್ನಲಾಗಿದೆ.

ಆರೋಪಿಗಳು ಕೇರಳ ಕಡೆಗೆ ತೆರಳುತ್ತಿರುವ ಮಾಹಿತಿ ಪಡೆದ ಪೊಲೀಸರು ಮಂಗಳೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆ ವಿವರ: ಫೆಬ್ರವರಿ 5 ರಂದು ಸಂಜೆ ಐದು ಗಂಟೆಯ ಸುಮಾರಿಗೆ ಪಾಂಗಳ ದೇವಸ್ಥಾನದ ಬಳಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರ ದಿಂದ ಕಡಿದು ಶರತ್ ಶೆಟ್ಟಿಯನ್ನು ಕೊಲೆಗೈದು ತಂಡ ಪರಾರಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪತ್ತೆಗಾಗಿ ಕೆಲವು ತಂಡವನ್ನು ರಚನೆ ಮಾಡಲಾಗಿತ್ತು ಅಲ್ಲದೆ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ತೆರಳಿರುವ ದೃಶ್ಯಾವಳಿಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಆದರೂ ಆರೋಪಿಗಳ ಪತ್ತೆಯಾಗಿರಲಿಲ್ಲ.

Advertisement

ಸದ್ಯ ಆರೋಪಿಗಳು ಕೇರಳಕ್ಕೆ ತೆರಳುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ದಿವೇಶ್ ಹಾಗೂ ಲಿಖಿತ್ ಕುಲಾಲ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next