Advertisement

ಪ್ರತಿಷ್ಠಿತ ಪಾಂಗಾಳ ಹೆಜ್ಜೆ ಮಠದ ಹೆಜ್ಜೆಯಡಿ ಪಡಿಮೂಡಿದ ಅಕ್ಷರ

11:15 PM Nov 25, 2019 | sudhir |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಕಟಪಾಡಿ: ಪಾಂಗಾಳ ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಪ್ರತಿಷ್ಠಿತ ಪಾಂಗಾಳ ಹೆಜ್ಜೆ ಮಠದ ಹೆಜ್ಜೆಯಡಿ ಅಕ್ಷರವನ್ನು ಪಡಿಮೂಡಿಸುವ ಮೂಲಕ ಸಮಾಜಕ್ಕೆ ಹಲವು ಸತøಜೆಗಳನ್ನು, ಸಾಧಕರನ್ನು ನೀಡಿದ ತೃಪ್ತಿ ಕಂಡಿದೆ.
1904ರಲ್ಲಿ ಪಾಂಗಾಳದ ಪಠೇಲ ಮನೆತನದ ಗಣ್ಯ ಪಿ. ತಮ್ಮಣ್ಣಯ್ಯ ಹೆಜ್ಜೆಮಠದಲ್ಲಿ ಶಾಲೆಯನ್ನು ಆರಂಭಿಸಿ ಮುಖ್ಯೋಪಾಧ್ಯಾಯ, ಸಂಚಾಲಕ, ಸ್ಥಾಪಕರಾಗಿ ಸುಮಾರು ಐನೂರಕ್ಕೂ ಅಧಿಕ ವಿದ್ಯಾಕಾಂಕ್ಷಿಗಳಲ್ಲಿ ಅಕ್ಷರಮಾಲೆಯನ್ನು ತೊಡಿಸಲು ಪ್ರಾರಂಭಿಸಿದ್ದು, ಹಿಂದೂ ಶಾಲೆಯಾಗಿ ಇಂದಿಗೂ ಚಟುವಟಿಕೆ ನಿರತವಾಗಿದ್ದು, 2004-05ರಲ್ಲಿ ಶತಮಾನದ ಸಂಭ್ರಮ ಸಮೃದ್ಧಿಯನ್ನು ಕಂಡಿತ್ತು.
ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ಎ., ಮತ್ತು ನಾಲ್ವರು ಗೌರವ ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಒಂದರಿಂದ ಐದನೇ ತರಗತಿವರೆಗೆ 63 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ನ್ಯಾಯಾಧೀಶೆ, ಪೊಲೀಸ್‌ ಸೂಪರಿಂಟೆಂಡೆಂಟ್‌, ದೇಶಕ್ಕೆ ವಿಂಗ್‌ ಕಮಾಂಡರ್‌ ಕೊಡುಗೆ
ಶಾಲಾ ಸುವರ್ಣ ಸಂಭ್ರಮಾಚರಣೆಯೊಳಗೆ ನ್ಯಾಯಾಧೀಶೆ ಪಾಂಗಾಳ ಹೇಮಾವತಿ ಆಚಾರ್ಯ, ಭಾರತೀಯ ಸೇನೆಯ ವಿಂಗ್‌ ಕಮಾಂಡರ್‌ ವೈ.ಎಸ್‌. ಭೋಜರಾಜ್‌, ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಯಾಗಿದ್ದು, ಸಿಂಡಿಕೇಟ್‌ ಬ್ಯಾಂಕ್‌ ಅಧಿಕಾರಿಯಾಗಿ ನಿವೃತ್ತ ಪಾಂಗಾಳ ಪಾಂಡುರಂಗ ಶ್ಯಾನುಭಾಗ್‌, ಕಟಪಾಡಿ ಎಸ್‌.ವಿ.ಎಸ್‌. ಪ.ಪೂ. ಕಾಲೇಜು ನಿವೃತ್ತ ಪ್ರಾಂಶುಪಾಲೆ ಎ.ಲಕ್ಷ್ಮೀ ಬಾೖ, ಕೈಗಾರಿಕೋದ್ಯಮಿಗಳಾದ ವೈ. ಕೃಷ್ಣರಾಜ್‌, ಪಾಂಗಾಳ ಬೀಡು ಬಾಲಕೃಷ್ಣ ಶೆಟ್ಟಿ, ಅಮೇರಿಕಾದಲ್ಲಿ ಡಾಕ್ಟರೇಟ್‌ ಪದವಿ ಪಡೆದು ದೆಹಲಿ ಯುನಿವರ್ಸಿಟಿಯಲ್ಲಿ ಪ್ರೊಫೆಸರ್‌ ಆಗಿ ನಿವೃತ್ತರಾದ ದಿ| ಡಾ|ವೈ.ಕೆ. ಭಟ್‌, ಪೊಲೀಸ್‌ ಸೂಪರಿಂಟೆಂಡೆಂಟ್‌ ದಿ.ವಿಶ್ವನಾಥ ಶೆಟ್ಟಿ ಮೊದಲಾದವರು ಪಾಂಗಾಳ ಹಿಂದೂ ಶಾಲೆಯು ದೇಶಕ್ಕೆ ನೀಡಿದ ಕೊಡುಗೆಯಾಗಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಹಳೆ ವಿದ್ಯಾರ್ಥಿಗೆ, ಮುಖ್ಯೋಪಾಧ್ಯಾಯಿನಿಗೆ ಪ್ರಶಸ್ತಿ ಪುರಸ್ಕಾರ
ಶಾಲಾ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದ್ದ ದಿ|ಜಾನಕಿ ಎ. ಭಟ್‌ ಅವರು ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ ಪಡೆದಿರುತ್ತಾರೆ. ಹಳೆ ವಿದ್ಯಾರ್ಥಿ ಸಂಪತ್‌ ಕುಮಾರ್‌(ಸಕು ಪಾಂಗಾಳ) ಪ್ರಸ್ತುತ ಎರ್ಮಾಳು ಬಡಾ ಸರಕಾರಿ ಪ.ಪೂ.ಕಾಲೇಜು ಪದವೀಧರ ಶಿಕ್ಷಕರಾಗಿದ್ದು, ಉತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿಯೊಂದಿಗೆ ಕಲಿಕೋಪಕರಣ ತಯಾರಿಯಲ್ಲಿ ಮತ್ತು ಶೈಕ್ಷಣಿಕ ಚಟುವಟಿಕೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಮೂಲ ಸವಲತ್ತುಗಳು
ಶಾಲಾ ಸಂಚಾಲಕ ಅನಂತರಾಜ ಭಟ್‌ಮತ್ತು ಆಡಳಿತ ಮಂಡಳಿ, ಹಳೆವಿದ್ಯಾರ್ಥಿಗಳು, ದಾನಿಗಳ ಮತ್ತು ಸರಕಾರದ ಯೋಜನೆಗಳಿಂದ ಶಾಲೆಯು ಮಕ್ಕಳಿಗೆ ಸೌಲಭ್ಯವನ್ನು ಕಲ್ಪಿಸಿದೆ. ಬ್ಯಾಂಡ್‌ಸೆಟ್‌, ಅಕ್ಷರದಾಸೋಹ, ಕುಡಿಯುವ ನೀರು, ಸಾಮೂಹಿಕ ಕವಾಯತುಗಳು, ಪೀಠೊಪಕರಣ, ಶಾಲಾ ಕಟ್ಟಡ, ಶಾರದಾ ಪೂಜೆ, ಶುಕ್ರವಾರದ ಭಜನೆಯೊಂದಿಗೆ ಶಾಲೆಯು ಚಟುವಟಿಕೆ ನಿರತವಾಗಿದೆ.

Advertisement

ಶುಕ್ರವಾರದ ಭಜನೆ ಸಹಿತ ಹಿಂದಿನ ಸಂಪ್ರದಾಯದ ಬದ್ಧತೆಯೊಂದಿಗೆ ಶಾಲಾರಂಭದಲ್ಲಿ ಇರಿಸಲಾಗಿದ್ದ ಗುರಿ ಇಂದಿಗೂ ಮುಂದುವರೆದಿದೆ. ಸುಸಂಸ್ಕೃತ ಭರಿತ ಮೌಲ್ಯಯುತ ಶಿಕ್ಷಣದ ಮೂಲಕ ಮಕ್ಕಳು ಮತ್ತು ಗುರುಗಳ ಬಾಂಧವ್ಯ ಶ್ರೇಷ್ಠ ಕಲಿಕಾ ವಾತಾವರಣವಾಗಿದೆ. ಹಾಗಾಗಿ ಉನ್ನತ ಹುದ್ದೆಗಳಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು ಮುಕುಟಪ್ರಾಯರಾಗಿದ್ದಾರೆ.
– ಎ.ಲಕ್ಷ್ಮೀ ಬಾೖ ಕಟಪಾಡಿ, ಹಳೆ ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next