Advertisement

ಯುವಶಕ್ತಿ ಹುಮ್ಮಸ್ಸು ವೃದ್ಧಿಯಾದಾಗ ಸಮಿತಿ ಬಲಿಷ್ಠ : ಅಮೀನ್‌

06:13 PM Dec 31, 2019 | Suhan S |

ಮುಂಬಯಿ. ಡಿ 30: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇವರು ಆಯೋಜಿಸಿದ ಕೋಟಿ-ಚೆನ್ನಯ ಕ್ರೀಡಾ ಕೂಟದಲ್ಲಿ ಈ ಬಾರಿಯ ಚಾಂಪಿಯನ್‌ ಶಿಪ್‌ ಟ್ರೋಯನ್ನು ಬಿಲ್ಲವರ ಅಸೋಶಿಯೇಶನ್‌ ಬೊರಿವಲಿ-ದಹಿಸರ್‌ ಇದರ ಕ್ರೀಡಾ ಸದಸ್ಯರು ಗೆದ್ದುಕೊಂಡಿದ್ದು, ಆ ಪ್ರಯುಕ್ತ ಡಿ. 26ರಂದು ಸ್ಥಳೀಯ ಕಚೇರಿ ಗುರು ಸನ್ನಿಧಿ ಗೊರಾಯಿ 1, ಶಿಂಪೋಲಿ ಗೊರಾಯಿರೋಡ್‌ ಇಲ್ಲಿ ಸ್ಥಳೀಯ ಸಮಿತಿಯ ವತಿಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸದಸ್ಯರನ್ನು ಅಭಿನಂದಿಸಿ ಸತ್ಕರಿಸಲಾಯಿತು.

Advertisement

ಕಚೇರಿಯಲ್ಲಿ ವಿಶೇಷ ಗುರುಪೂಜೆ ಜರಗಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಸಮಾಜದ ಉತ್ಸಾಹಿ ಯುವ ಹಾಗೂ ಮಹಿಳಾ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ ಬಿ. ಅಮೀನ್‌ ಅವರು, ಯುವ ಸದಸ್ಯರ ಹುರುಪು, ಉತ್ಸಾಹ ನಮ್ಮ ಬೊರಿವಲಿ-ದಹಿಸರ್‌ ಸಮಿತಿಯು ಕೆಲವು ವರ್ಷ ಗಳ ಅನಂತರ ಮತ್ತೆ ಚಾಂಪಿಯನ್‌ ಟ್ರೋಫಿ ಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಯುವ ಸದಸ್ಯರ ಈ ಕೊಡುಗೆ ಮುಂದೆಯೂ ಎಲ್ಲಾ ಕಾರ್ಯಕ್ರಮದಲ್ಲಿ ದೊರೆಯವಂತಾಗಬೇಕು. ಆ ಮೂಲಕ ಯುವ ಸದಸ್ಯರು ಸಮಿತಿಯ ಎಲ್ಲಾ ಕಾರ್ಯ ಕಲಾಪ ಗಳಲ್ಲಿ ಭಾಗವಹಿಸಿ ಈ ಸಮಿತಿಯನ್ನು ಇನ್ನಷ್ಟು ಉತ್ತುಂಗಕ್ಕೆರಿಸುವಲ್ಲಿ ಸಹಕರಿಸಬೇಕು. ಯುವ ಶಕ್ತಿ ಹುಮ್ಮಸ್ಸು ವೃದ್ಧಿಯಾದಾಗ ಪ್ರತಿಯೊಂದು ಕಾರ್ಯಕ್ರಮವು ಯಾವುದೇ ಅಡೆತಡೆಗಳಿಲ್ಲದೆ ಸುಲಲಿತವಾಗಿ ಜರಗುವುದು.  ದಿನಪೂರ್ತಿ ಜರಗಿದ ಕ್ರೀಡಾ ಕೂಟದಲ್ಲಿ ಮಹಿಳೆಯರ ಹುರುಪು ಉತ್ಸಾಹವು ಕ್ರೀಡಾಕೂಟದ ಯಶಸ್ವಿಗೆ ವಿಶೇಷ ಮೆರಗು ನೀಡಿದೆ ಎಂದು ಹೇಳಿ ಅಭಿನಂದಿಸಿದರು.

ಅಭಿನಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಇದರ ನಿರ್ದೇಶಕರಾದ ಪ್ರೇಮ್‌ನಾಥ್‌ ಪಿ. ಕೋಟ್ಯಾನ್‌ ಕ್ರೀಡಾಳುಗಳನ್ನು ಹಾಗೂ ಮಹಿಳಾ ಸದಸ್ಯರನ್ನು ಅಭಿನಂದಿಸಿ ಮಾತನಾಡಿ, ಯುವ ಸದಸ್ಯರು ಕ್ರೀಡೆಯ ಜತೆಗೆ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಿ ಶಿಕ್ಷಣದ ಅಡಿಪಾಯವನ್ನು ಗಟ್ಟಿಗೊಳಿಸಿ ಕ್ರೀಡೆ ಹಾಗೂ ಶಿಕ್ಷಣದ ಸಮಾನ ಯಶಸ್ವಿಯತ್ತ ಗಮನ ಹರಿಸಬೇಕು. ಶಿಸ್ತು ಸಂಮಯವನ್ನು ಬೆಳೆಸಿಕೊಂಡು ಉನ್ನತ ವ್ಯಾಸಂಗ ಪಡೆದು ಸಮಾಜದಲ್ಲಿ ಸುಶಿಕ್ಷಿತರಾಗಿ ಉತ್ತಮ ಉದ್ಯೋಗವನ್ನು ಪಡೆದು ಸುಸಂಸ್ಕೃತ ಜೀವನ ತನ್ನದಾಗಿಸಿಕೊಳ್ಳಿ, ಜೀವನದಲ್ಲಿ ಶಿಸ್ತನ್ನು ಗೌರವಿಸಿ ಎಂದು ಕರೆ ನೀಡಿದರು.

ಗುರುಪೂಜೆಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಸಮಿತಿಯ ಕಾರ್ಯದರ್ಶಿ ಶೇಖರ್‌ ಅಮೀನ್‌ ಅವರು ಕೋಟಿ-ಚೆನ್ನಯ ಕ್ರೀಡಾ ಕೂಟದಲ್ಲಿ ಸ್ಥಳೀಯ ಸಮಿತಿಯ ಚಾಂಪಿಯನ್‌ ಟ್ರೋ ಗೆಲುವಿಗೆ ಕಾರಣೀ ಭೂತರಾದ ಅರ್ಹ ಯುವ ಕ್ರೀಡಾಳುಗಳನ್ನು ಅಭಿನಂದಿಸಿದರು. ಅಭಿನಂದನಾ ಕಾರ್ಯ ಕ್ರಮದಲ್ಲಿ ಗೌರವ ಕಾರ್ಯಾಧ್ಯಕ್ಷ ಸುಂದರ ಎಂ. ಪೂಜಾರಿ, ಉಪಕಾರ್ಯಾಧ್ಯಕ್ಷ ರಜಿತ್‌ ಎಲ್‌. ಸುವರ್ಣ, ಜತೆ ಕಾರ್ಯದರ್ಶಿ ವತ್ಸಲಾ ಪೂಜಾರಿ, ಜತೆ ಕೋಶಾಧಿಕಾರಿ ಎ. ವಿ. ಸುವರ್ಣ, ಆರ್‌. ಎಸ್‌. ಕೋಟ್ಯಾನ್‌, ರಾಘು ಜಿ. ಪೂಜಾರಿ, ಕೇಶರಂಜನ್‌ ಮುಲ್ಕಿ, ಜಯರಾಮ ಪೂಜಾರಿ, ದಿನೇಶ್‌ ಸುವರ್ಣ, ಚಂದ್ರಶೇಖರ ಎ. ಪೂಜಾರಿ ಉಪಸ್ಥಿತರಿದ್ದು ಸಹಕರಿಸಿದರು. ಅನಂತರ ವಿಶೇಷ ಗುರುಪೂಜೆಯಲ್ಲಿ ಭಾಗವಹಿಸಿದ ಸಮಾಜ ಬಾಂಧವರಿಗೆಲ್ಲಾ ಪ್ರಸಾದ ವಿತರಿಸಲಾಯಿತು.

 

Advertisement

 ಚಿತ್ರ-ವರದಿ: ರಮೇಶ್‌ ಉದ್ಯಾವರ್‌

Advertisement

Udayavani is now on Telegram. Click here to join our channel and stay updated with the latest news.

Next