Advertisement

ಕಸ್ತೂರಿ ವರದಿ ಅಧ್ಯಯನಕ್ಕೆ ಉಪ ಸಮಿತಿ

12:13 AM Nov 13, 2020 | mahesh |

ಬೆಂಗಳೂರು: ಪಶ್ಚಿಮ ಘಟ್ಟ ಪ್ರದೇಶ ಸಂರಕ್ಷಣೆ ಸಂಬಂಧ ಡಾ| ಕಸ್ತೂರಿ ರಂಗನ್‌ ವರದಿ ಜಾರಿಗೆ ರಾಷ್ಟ್ರೀಯ ಹಸುರು ಪೀಠ (ಎನ್‌ಜಿಟಿ) ನೀಡಿರುವ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವರದಿ ಬಗ್ಗೆ ಅಧ್ಯಯನಕ್ಕಾಗಿ ಸಂಪುಟ ಉಪ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.

Advertisement

ಈ ವರದಿ ಜಾರಿಗೆ ಬಂದಲ್ಲಿ 1,452 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರಲಿವೆ. ಇದರಿಂದ ಜನಜೀವನಕ್ಕೆ ಧಕ್ಕೆ ಉಂಟಾಗಲಿದ್ದು, ವರದಿ ತಿರಸ್ಕರಿಸಬೇಕು ಎಂದು ಜನಪ್ರತಿನಿಧಿಗಳು ಸಿಎಂ ಮೇಲೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಸಂಪುಟ ಉಪಸಮಿತಿ ರಚಿಸಿರುವ ಸಂಪುಟ ಸಭೆಯು ಈ ಬಗ್ಗೆ ಅಧ್ಯಯನ ನಡೆಸಿದ ಅನಂತರ ಮುಂದಿನ ಹೆಜ್ಜೆ ಇರಿಸಲು ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಜೆ.ಸಿ. ಮಾಧು ಸ್ವಾಮಿ ಈ ವಿಷಯ ತಿಳಿಸಿದರು. ಸಿಎಂ ಸೂಚನೆ ಮೇರೆಗೆ ಸಮಿತಿ ರಚನೆಯಾಗಿದ್ದು, ಅರಣ್ಯ, ಕಂದಾಯ, ಉನ್ನತ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌, ನಗರಾಭಿವೃದ್ಧಿ, ಪ್ರವಾ ಸೋದ್ಯಮ ಮತ್ತು ರೇಷ್ಮೆ ಸಚಿವರು ಉಪ ಸಮಿತಿ ಯಲ್ಲಿ ಇರಲಿದ್ದಾರೆ ಎಂದು ತಿಳಿಸಿದರು.

ಉಪ ಸಮಿತಿಯು ಡಾ| ಕಸ್ತೂರಿರಂಗನ್‌ ವರದಿ ಬಗ್ಗೆ ಚರ್ಚಿಸಿ ಆರ್ಥಿಕ ಪರಿಣಾಮ, ಆಂತರಿಕ ಅಧ್ಯಯನ, ವನ್ಯಧಾಮ ಪ್ರದೇಶದಲ್ಲಿ ಮಾನವ-ಪ್ರಾಣಿ ಸಂಘರ್ಷ ತಪ್ಪಿಸುವುದು, ಪಕ್ಷಿಗಳು ಸೇರಿದಂತೆ ವನ್ಯಜೀವಿಗಳ ರಕ್ಷಣೆ ವಿಚಾರ ಗಮನದಲ್ಲಿ ಇರಿಸಿಕೊಂಡು ಸಂಬಂಧಿತ ಇಲಾಖೆಗಳ ಅಭಿಪ್ರಾಯ ಸಂಗ್ರಹಿಸಿ ಅಂತಿಮ ವರದಿ ನೀಡಬೇಕಾಗಿದೆ ಎಂದರು.

ನೋಂದಣಿ ಶುಲ್ಕ ಶೇ.2 ಇಳಿಕೆ
ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಸಂಪನ್ಮೂಲ ಸಂಗ್ರಹವನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ವಹಿವಾಟು ವೃದ್ಧಿಸುವ ಸಲುವಾಗಿ ಕೈಗಾರಿಕಾ ಭೂಮಿ ಹಾಗೂ 20 ಲಕ್ಷ ರೂ. ಮೌಲ್ಯದ ಫ್ಲ್ಯಾಟ್‌ಗಳ ನೋಂದಣಿ ಶುಲ್ಕ ಶೇ. 2ರಷ್ಟು ಇಳಿಸುವುದಕ್ಕೂ ಸಂಪುಟ ಒಪ್ಪಿಗೆ ನೀಡಿದೆ. ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ಕೈಗಾರಿಕೆ ಭೂಮಿ ಖರೀದಿಗೆ ವಿಧಿಸುತ್ತಿದ್ದ ನೋಂದಣಿ ಶುಲ್ಕ ಹಾಲಿ ಇರುವ ಶೇ. 5ರಿಂದ ಶೇ. 3ಕ್ಕೆ ಇಳಿಸಲು ನಿರ್ಧರಿಸಲಾಗಿದೆ. 20 ಲಕ್ಷ ರೂ. ಮೌಲ್ಯದ ಫ್ಲ್ಯಾಟ್‌ಗಳಿಗೂ ನೋಂದಣಿ ಶುಲ್ಕ ಶೇ.5ರಿಂದ ಶೇ. 3ಕ್ಕೆ ಇಳಿಸಲಾಗುವುದು. ಶುಲ್ಕ ಇಳಿಕೆಗೆ ಆಯಾ ವಲಯದಿಂದ ಬೇಡಿಕೆಯೂ ಇತ್ತು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

Advertisement

ಮಹಿಳಾ ಸುರಕ್ಷೆಗೆ ಆ್ಯಪ್‌
ನಿರ್ಭಯ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರದ 60:40 ಪಾಲುದಾರಿಕೆಯಲ್ಲಿ ಮಹಿಳಾ ಸುರಕ್ಷೆಗಾಗಿ ಮೊಬೈಲ್‌ ಆ್ಯಪ್‌, ಇನ್‌-ಬಸ್‌ ಕಣ್ಗಾವಲು ವ್ಯವಸ್ಥೆ ರೂಪಿಸಲು 40.92 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next