ತುರಿದುಕೊಂಡ ಪನ್ನೀರ್: ಅರ್ಧ ಕಪ್
ಮಂದಗೊಳಿಸಿದ ಹಾಲು: ಮುಕ್ಕಾಲು ಕಪ್
ಹಾಲು: ಅರ್ಧ ಲೀಟರ್
ಒಣದ್ರಾಕ್ಷಿ : ಸ್ವಲ್ಪ
ಹೆಚ್ಚಿಕೊಂಡ ಬಾದಾಮಿ: 1 ಚಮಚ
ಏಲಕ್ಕಿ ಪುಡಿ: ಒಂದು ಚಮಚ
Advertisement
ಮಾಡುವ ವಿಧಾನಒಂದು ಪಾತ್ರೆಯಲ್ಲಿ ತುರಿದುಕೊಂಡ ಪನ್ನೀರ್ ಹಾಕಿ ಬಿಸಿ ಮಾಡಿ. ತತ್‌ಕ್ಷಣವೇ ಹಾಲನ್ನು ಸೇರಿಸಿ. ಗಂಟಾಗದಂತೆ 5-6 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸಿ. ಮಂದಗೊಳಿಸಿದ ಹಾಲನ್ನು ಸೇರಿಸಿ, 3-4 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಿರಿ. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ಒಣದ್ರಾಕ್ಷಿ ಮತ್ತು ಬಾದಾಮಿ ಚೂರನ್ನು ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ ನಂತರ ಒಂದು ಬೌಲ್‌ಗೆ ವರ್ಗಾಯಿಸಿ. ಬಳಿಕ ಇದನ್ನು ಒಣದ್ರಾಕ್ಷಿ ಮತ್ತು ಬಾದಾಮಿಯಿಂದ ಅಲಂಕರಿಸಿ ಸವಿಯಬಹುದು.