Advertisement

ತುಂಬಾ ಸಿಂಪಲ್ ರೆಸಿಪಿ –ರುಚಿಯಾದ ಪನ್ನೀರ್‌ ಚೀಸ್‌ ಟೋಸ್ಟ್‌….

05:36 PM Mar 17, 2023 | ಶ್ರೀರಾಮ್ ನಾಯಕ್ |

ಪನ್ನೀರ್‌ ಅಂದ್ರೆ ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಅದರಲ್ಲೂ ಚೀಸ್ ಎಲ್ಲರ ಇಷ್ಟದ ಪದಾರ್ಥ. ಅಷ್ಟೇ ಅಲ್ಲದೇ ಪನ್ನೀರ್‌ ಆರೋಗ್ಯಕರ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಪನ್ನೀರ್ ಸೇವನೆ ರುಚಿ ಮತ್ತು ಆರೋಗ್ಯ ಎರಡಕ್ಕೂ ಉತ್ತಮ ಪ್ರಯೋಜನ ನೀಡುತ್ತದೆ.

Advertisement

ಪನ್ನೀರ್‌ ನಿಂದ ಅನೇಕ ರೀತಿಯ ಅಡುಗೆಯನ್ನು ತಯಾರಿಸಬಹುದು ಅದರಲ್ಲಿ” ಪನ್ನೀರ್‌ ಚೀಸ್‌ ಟೋಸ್ಟ್‌” ಕೂಡ ಒಂದಾಗಿದೆ. ವೀಕೆಂಡ್‌ ಸಮಯದಲ್ಲಿ ಮನೆಯಲ್ಲೇ ಸಿದ್ಧಪಡಿಸಿ ತಿನ್ನಬಹುದು. ಸಸ್ಯಾಹಾರಿಗಳೂ ಇಷ್ಟಪಡುವ ಮತ್ತು ಆರೋಗ್ಯಕಾರಕ ಪನ್ನೀರ್‌ ಚೀಸ್‌ ಟೋಸ್ಟ್‌ ನೀವೂ ಒಮ್ಮೆ ಸವಿದು ನೋಡಿ.

ಪನ್ನೀರ್‌ ಚೀಸ್‌ ಟೋಸ್ಟ್‌ ರೆಸಿಪಿ ಹೀಗಿದೆ….

ಬೇಕಾಗುವ ಸಾಮಗ್ರಿಗಳು
ಪನ್ನೀರ್‌-100ಗ್ರಾಂ, ಬ್ರೆಡ್‌-4 ಸ್ಲೈಸ್, ಎಣ್ಣೆ-4 ಚಮಚ, ಈರುಳ್ಳಿ-ಅರ್ಧ ಕಪ್‌ (ಸಣ್ಣಗೆ ಹೆಚ್ಚಿದ್ದು),ಶುಂಠಿ-ಬೆಳ್ಳುಳ್ಳಿ ಪೇಸ್ಟ್‌-1 ಚಮಚ, ಟೊಮೆಟೋ-1/4ಕಪ್‌, ಹಸಿ ಬಟಾಣಿ -ಸ್ವಲ್ಪ, ಮೆಣಸಿನ ಪುಡಿ-1 ಚಮಚ, ಜೀರಿಗೆ ಪುಡಿ-ಅರ್ಧ ಚಮಚ, ಅರಿಶಿನ ಪುಡಿ-ಸ್ವಲ್ಪ, ಮೇಯನೇಸ್‌, ಕೊತ್ತಂಬರಿ ಸೊಪ್ಪು-ಸ್ವಲ್ಪ, ಚೀಸ್‌, ಬೆಣ್ಣೆ- 3ಚಮಚ, ಚಿಲ್ಲಿ ಫ್ಲೇಕ್ಸ್‌, ಓರೆಗಾನೊ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
-ಒಂದು ಪ್ಯಾನ್‌ ಗೆ ಎಣ್ಣೆ ಹಾಕಿ ನಂತರ ಸಣ್ಣಗೆ ಹೆಚ್ಚಿಟ್ಟ ಈರುಳ್ಳಿಯನ್ನು ಸೇರಿಸಿ 3 ನಿಮಿಷಗಳ ಕಾಲ ಕಂದು ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
-ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ನ್ನು ಸೇರಿಸಿ ಮಿಕ್ಸ್‌ ಮಾಡಿಕೊಳ್ಳಿ. ಆಮೇಲೆ ಸಣ್ಣಗೆ ಹೆಚ್ಚಿಟ್ಟ ಟೊಮೆಟೋ ಮತ್ತು ಹಸಿಬಟಾಣಿಯನ್ನು ಹಾಕಿ ಬೇಯಿಸಿಕೊಳ್ಳಿ.
-ನಂತರ ತುರಿದಿಟ್ಟ ಪನ್ನೀರ್‌ ಗೆ ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಮಿಶ್ರಣದೊಂದಿಗೆ ಬೇಯಿಸಿಕೊಳ್ಳಿ.
-ಪನ್ನೀರ್‌ ಬುರ್ಜಿ ಮಿಶ್ರಣವೆಲ್ಲವೂ ಬೇಯಿಸಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್‌ ಮಾಡಿಕೊಳ್ಳಿ.
-ಬ್ರೆಡ್‌ ಸ್ಲೈಸ್ ನ್ನು ಬೇಕಾಗುವ ಆಕಾರಕ್ಕೆ ಬದಲಾಯಿಸಿ ಪ್ರತೀ ಸ್ಲೈಸ್ ಗೆ ಮೇಯನೇಸ್‌ ಸವರಿ ಪನ್ನೀರ್‌ ಬುರ್ಜಿ ಮಿಶ್ರಣವನ್ನು ಹಾಕಿ ಆದರ ಮೇಲ್ಭಾಗದಲ್ಲಿ ಚೀಸ್‌ ನ್ನು ತುರಿಯಿರಿ.
-ಈಗ ಒಂದು ಪ್ಯಾನ್‌ ಗೆ ಬೆಣ್ಣೆಯನ್ನು ಹಾಕಿ ಮಾಡಿಟ್ಟ ಬ್ರೆಡ್‌ ಮಿಶ್ರಣವನ್ನು ಚೀಸ್‌ ಕರಗುವಷ್ಟು ಬೇಕ್‌ ಮಾಡಿಕೊಳ್ಳಿ.
-ಬೇಕಾದರೆ ಚಿಲ್ಲಿ ಫ್ಲೇಕ್ಸ್‌ , ಓರೆಗಾನೊವನ್ನು ಸೇರಿಸಿ ತಿಂದರೆ ಸ್ವಾದಿಷ್ಟಕರವಾದ ಪನ್ನೀರ್‌ ಚೀಸ್‌ ಟೋಸ್ಟ್‌ ಸವಿಯಲು ಸಿದ್ಧ.

Advertisement

-ಶ್ರೀರಾಮ್ ಜಿ . ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next