Advertisement
ಪನ್ನೀರ್ ನಿಂದ ಅನೇಕ ರೀತಿಯ ಅಡುಗೆಯನ್ನು ತಯಾರಿಸಬಹುದು ಅದರಲ್ಲಿ” ಪನ್ನೀರ್ ಚೀಸ್ ಟೋಸ್ಟ್” ಕೂಡ ಒಂದಾಗಿದೆ. ವೀಕೆಂಡ್ ಸಮಯದಲ್ಲಿ ಮನೆಯಲ್ಲೇ ಸಿದ್ಧಪಡಿಸಿ ತಿನ್ನಬಹುದು. ಸಸ್ಯಾಹಾರಿಗಳೂ ಇಷ್ಟಪಡುವ ಮತ್ತು ಆರೋಗ್ಯಕಾರಕ ಪನ್ನೀರ್ ಚೀಸ್ ಟೋಸ್ಟ್ ನೀವೂ ಒಮ್ಮೆ ಸವಿದು ನೋಡಿ.
ಪನ್ನೀರ್-100ಗ್ರಾಂ, ಬ್ರೆಡ್-4 ಸ್ಲೈಸ್, ಎಣ್ಣೆ-4 ಚಮಚ, ಈರುಳ್ಳಿ-ಅರ್ಧ ಕಪ್ (ಸಣ್ಣಗೆ ಹೆಚ್ಚಿದ್ದು),ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ, ಟೊಮೆಟೋ-1/4ಕಪ್, ಹಸಿ ಬಟಾಣಿ -ಸ್ವಲ್ಪ, ಮೆಣಸಿನ ಪುಡಿ-1 ಚಮಚ, ಜೀರಿಗೆ ಪುಡಿ-ಅರ್ಧ ಚಮಚ, ಅರಿಶಿನ ಪುಡಿ-ಸ್ವಲ್ಪ, ಮೇಯನೇಸ್, ಕೊತ್ತಂಬರಿ ಸೊಪ್ಪು-ಸ್ವಲ್ಪ, ಚೀಸ್, ಬೆಣ್ಣೆ- 3ಚಮಚ, ಚಿಲ್ಲಿ ಫ್ಲೇಕ್ಸ್, ಓರೆಗಾನೊ, ರುಚಿಗೆ ತಕ್ಕಷ್ಟು ಉಪ್ಪು.
Related Articles
-ಒಂದು ಪ್ಯಾನ್ ಗೆ ಎಣ್ಣೆ ಹಾಕಿ ನಂತರ ಸಣ್ಣಗೆ ಹೆಚ್ಚಿಟ್ಟ ಈರುಳ್ಳಿಯನ್ನು ಸೇರಿಸಿ 3 ನಿಮಿಷಗಳ ಕಾಲ ಕಂದು ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
-ಶುಂಠಿ-ಬೆಳ್ಳುಳ್ಳಿ ಪೇಸ್ಟ್ ನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಆಮೇಲೆ ಸಣ್ಣಗೆ ಹೆಚ್ಚಿಟ್ಟ ಟೊಮೆಟೋ ಮತ್ತು ಹಸಿಬಟಾಣಿಯನ್ನು ಹಾಕಿ ಬೇಯಿಸಿಕೊಳ್ಳಿ.
-ನಂತರ ತುರಿದಿಟ್ಟ ಪನ್ನೀರ್ ಗೆ ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಮಿಶ್ರಣದೊಂದಿಗೆ ಬೇಯಿಸಿಕೊಳ್ಳಿ.
-ಪನ್ನೀರ್ ಬುರ್ಜಿ ಮಿಶ್ರಣವೆಲ್ಲವೂ ಬೇಯಿಸಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
-ಬ್ರೆಡ್ ಸ್ಲೈಸ್ ನ್ನು ಬೇಕಾಗುವ ಆಕಾರಕ್ಕೆ ಬದಲಾಯಿಸಿ ಪ್ರತೀ ಸ್ಲೈಸ್ ಗೆ ಮೇಯನೇಸ್ ಸವರಿ ಪನ್ನೀರ್ ಬುರ್ಜಿ ಮಿಶ್ರಣವನ್ನು ಹಾಕಿ ಆದರ ಮೇಲ್ಭಾಗದಲ್ಲಿ ಚೀಸ್ ನ್ನು ತುರಿಯಿರಿ.
-ಈಗ ಒಂದು ಪ್ಯಾನ್ ಗೆ ಬೆಣ್ಣೆಯನ್ನು ಹಾಕಿ ಮಾಡಿಟ್ಟ ಬ್ರೆಡ್ ಮಿಶ್ರಣವನ್ನು ಚೀಸ್ ಕರಗುವಷ್ಟು ಬೇಕ್ ಮಾಡಿಕೊಳ್ಳಿ.
-ಬೇಕಾದರೆ ಚಿಲ್ಲಿ ಫ್ಲೇಕ್ಸ್ , ಓರೆಗಾನೊವನ್ನು ಸೇರಿಸಿ ತಿಂದರೆ ಸ್ವಾದಿಷ್ಟಕರವಾದ ಪನ್ನೀರ್ ಚೀಸ್ ಟೋಸ್ಟ್ ಸವಿಯಲು ಸಿದ್ಧ.
Advertisement
-ಶ್ರೀರಾಮ್ ಜಿ . ನಾಯಕ್