Advertisement

Odisha; ನಡುಗುತ್ತಿದ್ದ ಪಟ್ನಾಯಕ್‌ ಅವರ ಕೈ ಎಳೆದ ಪಾಂಡ್ಯನ್‌: ಬಿಜೆಪಿಯಿಂದ ಲೇವಡಿ

11:58 PM May 28, 2024 | Team Udayavani |

ಭುವನೇಶ್ವರ್‌: ಸಿಎಂ ನವೀನ್‌ ಪಟ್ನಾಯಕ್‌ ಅವರ ಚುನಾವಣ ಭಾಷಣವೊಂದರ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಭಾಷಣ ಮಾಡುವ ವೇಳೆ ನಡುಗುತ್ತಿದ್ದ ಪಟ್ನಾಯಕ್‌ ಅವರ ಕೈಯನ್ನು ಬಿಜೆಡಿ ನಾಯಕ ವಿಕೆ ಪಾಂಡ್ಯನ್‌ ಜನರಿಗೆ ಕಾಣಬಾರದೆಂದು ಒಳಗೆ ಎಳೆದರು.

Advertisement

ಪಾಂಡ್ಯನ್‌ ಕೇವಲ ಕೈ ಎಳೆದಿಲ್ಲ, ಅಧಿಕಾರ ಎಳೆದುಕೊಳ್ಳುವ ಹಾಗಿದೆ. ಪಟ್ನಾಯಕ್‌ ಅವರಿಗೆ ಈ ವಯಸ್ಸಿನಲ್ಲೂ ಬಿಜೆಡಿ ಶ್ರಮ ನೀಡುತ್ತಿರುವುದು ವಿಪರ್ಯಾಸ. ಅವರಿಗೆ ಬೀಳ್ಕೊಡುಗೆ ನೀಡಬೇಕು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಟೀಕಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಒಡಿಶಾ ಸಿಎಂ ಪಟ್ನಾಯಕ್‌, ನನ್ನ ಕೈ ಕುರಿತು ಮಾತನಾಡಿ ಬಿಜೆಪಿ ಅನವಶ್ಯಕ ವಿವಾದ ಸೃಷ್ಟಿಸುತ್ತಿದೆ. ಈ ಆಟ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಸಿಎಂ ಮಾಜಿ ಆಗುತ್ತಾರೆ: ಅಮಿತ್‌ ಶಾ ಭವಿಷ್ಯ
ಭದ್ರಕ್‌/ಜಾಜಪುರ್‌: ಜೂನ್‌ 4ರ ಚುನಾವಣೆ ಫ‌ಲಿ ತಾಂಶದಲ್ಲಿ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ಗೆ ಹಿನ್ನಡೆಯಾಗಲಿದೆ. ಬಿಜೆಪಿ ಒಡಿಶಾದಲ್ಲಿ 75 ವಿಧಾನಸಭಾ ಕ್ಷೇತ್ರ ಗೆಲ್ಲುವುದ ರೊಂದಿಗೆ ಸರಕಾರ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿ ಸಿದ್ದಾರೆ.

ಚುನಾವಣೆ ರ್ಯಾಲಿ ಯಲ್ಲಿ ಮಾತನಾಡಿ, ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 17 ಸ್ಥಾನ ಗೆಲ್ಲಲಿದೆ. ಒಡಿಶಾದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಯುವಕರು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ, ಇಲ್ಲಿ ಉದ್ಯಮಗಳನ್ನು ಸ್ಥಾಪಿಸಿ, ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next