Advertisement

ಕಮಲ್‌ ಪುತ್ರ ಬಕುಲ್‌ನಾಥ್‌ ವಿರುದ್ಧ ಹೊಸ ಸಾಕ್ಷ್ಯ ಬಿಚ್ಚಿಟ್ಟ “ಪಂಡೊರಾ’

07:04 PM Oct 11, 2021 | Team Udayavani |

ನವದೆಹಲಿ: ಯುಪಿಎ ಸರ್ಕಾರದ ಬುಡವನ್ನೇ ಅಲ್ಲಾಡಿಸಿದ್ದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದಲ್ಲಿ ಕೇಳಿಬಂದಿದ್ದ, ಮಧ್ಯಪ್ರದೇಶ ಮಾಜಿ ಸಿಎಂ ಕಮಲ್‌ನಾಥ್‌ರ ಪುತ್ರ ಬಕುಲ್‌ ನಾಥ್‌ ವಿರುದ್ಧ ಹೊಸ ಸಾ ಸಾಕ್ಷ್ಯಾಧಾರಗಳನ್ನು ಇತ್ತೀಚೆಗೆ ಬಿಡುಗಡೆಯಾಗಿದ್ದ ಪಂಡೋರಾ ಪೇಪರ್ಸ್‌ನಲ್ಲಿ ಉಲ್ಲೇಖೀಸಲಾಗಿದೆ ಎಂದು “ದ ಇಂಡಿಯನ್‌ ಎಕ್ಸ್‌ಪ್ರೆಸ್‌’  ವರದಿ ಮಾಡಿದೆ.

Advertisement

ಪ್ರಕರಣದಲ್ಲಿ ಪ್ರಮುಖ ಆರೋಪಿ ರಾಜೀವ್‌ ಸಕ್ಸೇನಾ  ನವದೆಹಲಿ ಮೂಲದ ವಕೀಲರಾದ ಗೌತಮ್‌ ಖೈತಾನ್‌ ಅವರೊಡಗೂಡಿ, ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯಿಂದ 108 ಕೋಟಿ ರೂ.ಗಳನ್ನು ಇಂಟರ್‌ಸ್ಟೆಲ್ಲರ್‌ ಟೆಕ್ನಾಲಜೀಸ್‌ ಎಂಬ ಕಂಪನಿಯ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ಹಣವನ್ನು ಮುಂದೆ ಇನ್ನೂ ಅನೇಕ ಕಂಪನಿಗಳ ಖಾತೆಗಳಿಗೆ ಬೇರೆ ಬೇರೆ ಮೊತ್ತಗಳಲ್ಲಿ ವರ್ಗಾಯಿಸಿಕೊಂಡು ಆ ಹಣವನ್ನು ಮದ್ಯವರ್ತಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ ಪಾವತಿಸಲಾಯಿತು ಎಂದು ಪಂಡೋರಾ ಪೇಪರ್ಸ್‌ನಲ್ಲಿ ಉಲ್ಲೇಖೀಸಲಾಗಿದೆ.

ಇದರ ಫ‌ಲವಾಗಿ, 2000 ವರ್ಷದ ಹೊತ್ತಿಗೆ ರಾಜೀವ್‌ ಸಕ್ಸೇನಾಗೆ ಇಂಟರ್‌ಸ್ಟೆಲ್ಲರ್‌ ಟೆಕ್ನಾಲಜೀಸ್‌ ಕಂಪನಿಯ ಶೇ. 99.90ರಷ್ಟು ಷೇರುಗಳನ್ನು ಸಿಕ್ಕಿದ್ದವು. ಈ ಎಲ್ಲಾ ಅಕ್ರಮ ಹಣ ವರ್ಗಾವಣೆಯಲ್ಲಿ ಬಕುಲ್‌ನಾಥ್‌ ಅವರ ಪ್ರಿಸ್ಟಿನ್‌ ರಿವರ್‌ ಇನ್ವೆಸ್ಟ್‌ಮೆಂಟ್ಸ್‌ ಕಂಪನಿಯೂ ಸಹಯೋಗ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next