Advertisement
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 7 ವಿಕೆಟಿಗೆ 168 ರನ್ ಪೇರಿಸಿದರೆ, ಕೆಕೆಆರ್ 19.5 ಓವರ್‌ಗಳಲ್ಲಿ 6 ವಿಕೆಟಿಗೆ 169 ರನ್ ಬಾರಿಸಿ ಗೆದ್ದುಬಂದಿತು. ಆಗ ಗೆಲುವಿನ ರೂವಾರಿ ಮನೀಷ್ ಪಾಂಡೆ 69 ರನ್ ಗಳಿಸಿ ಔಟಾಗದೆ ಉಳಿದಿದ್ದರು. ಅವರ ಈ 49 ಎಸೆತಗಳ ಪಂದ್ಯಶ್ರೇಷ್ಠ ಆಟದ ವೇಳೆ 3 ಸಿಕ್ಸರ್, 4 ಬೌಂಡರಿ ಸಿಡಿಯಲ್ಪಟ್ಟಿತು. ಇದು ಈ ಪಂದ್ಯಾವಳಿಯಲ್ಲಿ ಪಾಂಡೆ ಬಾರಿಸಿದ 2ನೇ ಅರ್ಧ ಶತಕ. ಇದಕ್ಕೂ ಮುನ್ನ ಮುಂಬೈ ವಿರುದ್ಧ ಅಜೇಯ 81 ರನ್ ಮಾಡಿದ್ದರು.
Related Articles
ಭರವಸೆಯ ಆರಂಭ ಕಂಡುಕೊಂಡ ಡೆಲ್ಲಿಗೆ ಆಸ್ಟ್ರೇಲಿಯದ ವೇಗಿ ನಥನ್ ಕೋಲ್ಟರ್ ನೈಲ್ ಮತ್ತು ವೆಸ್ಟ್ ಇಂಡೀಸಿನ ಮಿಸ್ಟರಿ ಸ್ಪಿನ್ನರ್ ಸುನೀಲ್ ನಾರಾಯಣ್ ಸೇರಿಕೊಂಡು ಕಡಿವಾಣ ಹಾಲುವಲ್ಲಿ ಯಶಸ್ವಿಯಾದರು. ಕೋಲ್ಟರ್ ನೈಲ್ ಸಾಧನೆ 22 ರನ್ನಿಗೆ 3 ವಿಕೆಟ್. ನಾರಾಯಣ್ ಒಂದೇ ವಿಕೆಟ್ ಉರುಳಿಸಿದರೂ 4 ಓವರ್‌ಗಳಿಂದ ಕೇವಲ 20 ರನ್ ನೀಡಿ ಬ್ರೇಕ್ ಹಾಕಿದರು.
Advertisement
ಆದರೆ ಉಮೇಶ್ ಯಾದವ್ ಇಲ್ಲಿ ಭಾರೀ ವೈಫಲ್ಯ ಅನುಭವಿಸಿದರು. ಅವರ 4 ಓವರ್‌ಗಳಿಂದ 53 ರನ್ ಸೋರಿಹೋಯಿತು. ಇದ ರೊಂದಿಗೆ ಐಪಿಎಲ್‌ನಲ್ಲಿ ಅತೀ ಹೆಚ್ಚು 4 ಸಲ 50 ಪ್ಲಸ್ ರನ್ ಕೊಟ್ಟ 2ನೇ ಬೌಲರ್ ಎನಿಸಿದರು. ಅಶೋಕ್ ದಿಂಡ ಮೊದಲಿಗ. ಯಾದವ್ ಪಾಲಾದ ಪಂದ್ಯದ 17ನೇ ಓವರಿನಲ್ಲಿ ಡೆಲ್ಲಿ 26 ರನ್ ದೋಚಿತು.
ಭಾರತದ ಯುವ ಆಟಗಾರರಿಂದಲೇ ಕೂಡಿದ್ದ ಡೆಲ್ಲಿ ಬ್ಯಾಟಿಂಗ್ ಸರದಿಯಲ್ಲಿ ಸಂಜು ಸ್ಯಾಮ್ಸನ್ ಸರ್ವಾಧಿಕ 39 ರನ್ ಬಾರಿಸಿದರು (25 ಎಸೆತ, 7 ಬೌಂಡರಿ). ಮಧ್ಯಮ ಕ್ರಮಾಂಕದಲ್ಲಿ ಸಿಡಿದು ನಿಂತ ರಿಷಬ್ ಪಂತ್ 38 ರನ್ ಸೂರೆಗೈದರು. 16 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್, 2 ಬೌಂಡರಿ ಸಿಡಿಯಲ್ಪಟ್ಟಿತು. ಶ್ರೇಯಸ್ ಅಯ್ಯರ್ 26 ರನ್, ಕರುಣ್ ನಾಯರ್ ಮತ್ತು ಆರಂಭಕಾರ ಸ್ಯಾಮ್ ಬಿಲ್ಲಿಂಗ್ಸ್ ತಲಾ 21 ರನ್ ಮಾಡಿ ನಿರ್ಗಮಿಸಿದರು.
ಸ್ಯಾಮ್ಸನ್-ಬಿಲ್ಲಿಂಗ್ಸ್ 6.1 ಓವರ್‌ಗಳಿಂದ ಮೊದಲ ವಿಕೆಟಿಗೆ 53 ರನ್ ಪೇರಿಸಿದರು. ಈ ಜೋಡಿಯನ್ನು ಕೋಲ್ಟರ್ ನೈಲ್ ಬೇರ್ಪಡಿಸಿದ ಬಳಿಕ ಕೋಲ್ಕತಾ ಬೌಲಿಂಗ್ ಲಯ ಕಂಡುಕೊಂಡಿತು.
ಸ್ಕೋರ್ ಪಟ್ಟಿಡೆಲ್ಲಿ ಡೇರ್‌ಡೆವಿಲ್ಸ್
ಸಂಜು ಸ್ಯಾಮ್ಸನ್ ಸಿ ಉತ್ತಪ್ಪ ಬಿ ಯಾದವ್ 39
ಸ್ಯಾಮ್ ಬಿಲ್ಲಿಂಗ್ಸ್ ಸಿ ಉತ್ತಪ್ಪ ಬಿ ನೈಲ್ 21
ಕರುಣ್ ನಾಯರ್ ಬಿ ನೈಲ್ 21
ಶ್ರೇಯಸ್ ಅಯ್ಯರ್ ರನೌಟ್ 26
ರಿಷಬ್ ಪಂತ್ ಸಿ ಗಂಭೀರ್ ಬಿ ನೈಲ್ 38
ಏಂಜೆಲೊ ಮ್ಯಾಥ್ಯೂಸ್ ಬಿ ನಾರಾಯಣ್ 1
ಕ್ರಿಸ್ ಮಾರಿಸ್ ಸಿ ಯಾದವ್ ಬಿ ವೋಕ್ಸ್ 16
ಪ್ಯಾಟ್ ಕಮಿನ್ಸ್ ಔಟಾಗದೆ 3
ಮೊಹಮ್ಮದ್ ಶಮಿ ಔಟಾಗದೆ 0 ಇತರ 3
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 168
ವಿಕೆಟ್ ಪತನ: 1-53, 2-63, 3-106, 4-110, 5-145, 6-153, 7-167. ಬೌಲಿಂಗ್:
ನಥನ್ ಕೋಲ್ಟರ್ ನೈಲ್ 4-0-22-3
ಕ್ರಿಸ್ ವೋಕ್ಸ್ 4-0-31-1
ಉಮೇಶ್ ಯಾದವ್ 4-0-53-1
ಸುನೀಲ್ ನಾರಾಯಣ್ 4-0-20-1
ಕುಲದೀಪ್ ಯಾದವ್ 3-0-29-0
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 1-0-12-0 ಕೋಲ್ಕತಾ ನೈಟ್‌ರೈಡರ್ ಗೌತಮ್ ಗಂಭೀರ್ ಸಿ ಮ್ಯಾಥ್ಯೂಸ್ ಬಿ ಜಹೀರ್ 14
ಗ್ರ್ಯಾಂಡ್‌ಹೋಮ್ ಸಿ ಬಿಲ್ಲಿಂಗ್ಸ್ ಬಿ ಜಹೀರ್ 1
ರಾಬಿನ್ ಉತ್ತಪ್ಪ ಸಿ ಪಂತ್ ಬಿ ಕಮಿನ್ಸ್ 4
ಮನೀಷ್ ಪಾಂಡೆ ಔಟಾಗದೆ 69
ಯೂಸುಫ್ ಪಠಾಣ್ ಸಿ ಮತ್ತು ಬಿ ಮಾರಿಸ್ 59
ಸೂರ್ಯಕುಮಾರ್ ಯಾದವ್ ಸಿ ಜಹೀರ್ ಬಿ ಕಮಿನ್ಸ್ 7
ಕ್ರಿಸ್ ವೋಕ್ಸ್ ಸ್ಟಂಪ್ಡ್ ಪಂತ್ ಬಿ ಮಿಶ್ರಾ 3
ಸುನೀಲ್ ನಾರಾಯಣ್ ಔಟಾಗದೆ 1 ಇತರ 11
ಒಟ್ಟು (19.5 ಓವರ್‌ಗಳಲ್ಲಿ 6 ವಿಕೆಟಿಗೆ) 169
ವಿಕೆಟ್ ಪತನ: 1-5, 2-19, 3-21, 4-131, 5-152, 6-160. ಬೌಲಿಂಗ್:
ಜಹೀರ್ ಖಾನ್ 4-0-28-2
ಪ್ಯಾಟ್ ಕಮಿನ್ಸ್ 4-0-39-2
ಕ್ರಿಸ್ ಮಾರಿಸ್ 4-0-30-1
ಅಮಿತ್ ಮಿಶ್ರಾ 2.5-0-26-1
ಮೊಹಮ್ಮದ್ ಶಮಿ 3-0-28-0
ಏಂಜೆಲೊ ಮ್ಯಾಥ್ಯೂಸ್ 2-0-15-0 ಪಂದ್ಯಶ್ರೇಷ್ಠ: ಮನೀಷ್ ಪಾಂಡೆ