Advertisement

ಪಾಂಡೇಶ್ವರ ಸದಾಶಿವಯ್ಯ ಸಂಸ್ಮರಣೆ 

06:00 AM Nov 02, 2018 | |

ಪಾಂಡೇಶ್ವರ ಎನ್ನುವ ಊರಿನ ಹೆಸರು ಕೇಳಿದಾಕ್ಷಣ ನೆನಪಾಗುವುದು ಹಿರಿಯ ಯಕ್ಷಗಾನ ಕಲಾವಿದ ಪಾಂಡೇಶ್ವರ ಪುಟ್ಟಯ್ಯ. ಅವರ ಸಹೋದರರೇ ಪಾಂಡೇಶ್ವರ ಸದಾಶಿವಯ್ಯ. ತಂದೆ ಮತ್ತು ಸೋದರ ಮಾವ ಸಕ್ಕಟ್ಟು ಸುಬ್ಬಣ್ಣಯ್ಯನವರಿಂದ ಯಕ್ಷಗಾನದ ಹೆಜ್ಜೆ ಕಲಿತು 13 ನೇ ವಯಸ್ಸಿನಲ್ಲಿಯೇ ಅಂದಿನ ಅಮೃತೇಶ್ವರಿ ಮೇಳಕ್ಕೆ ಸೇರಿ ಬಾಲಗೋಪಾಲ, ಸ್ತ್ರೀವೇಷ, ಒಡ್ಡೋಲಗದ ವೇಷ, ಮೂರನೇ ವೇಷ, ಪುರುಷ ವೇಷ ನಂತರ ಎರಡನೇ ವೇಷಧಾರಿಯಾಗಿ ರಂಗಸ್ಥಳದಲ್ಲಿ ತಮ್ಮದೇ ಛಾಪನ್ನು ಒತ್ತಿದ ಪಾಂಡೇಶ್ವರ ಸದಾಶಿವಯ್ಯನವರು ಸದಾ ಸ್ಮರಣೀಯರು. ನ.4 ರಂದು ಪಾಂಡೇಶ್ವರ ಸದಾಶಿವಯ್ಯನವರ ಜನ್ಮಶತಮಾನೋತ್ಸವ ಹಾಗೂ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದ್ದು ಅವರ ಹೆಸರಿನ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಬೇಲೂ¤ರು ರಮೇಶ ಮತ್ತು ದಯಾನಂದ ನಾಗೂರು ಅವರಿಗೆ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಪ್ರದಾನ ಮಾಡಲಾಗುವುದು. 

Advertisement

ಬೇಲ್ತೂರು ರಮೇಶ 
ಬೇಲ್ತೂರು ರಮೇಶ 5ನೇ ತರಗತಿಯಲ್ಲಿ ಓದುತ್ತಿರುವಾಗಲೇ ಅಂದಿನ ಪ್ರಸಿದ್ಧ ಬಣ್ಣದ ವೇಷಧಾರಿ ಬೇಲ್ತೂರು ರಾಮ ಬಳೆಗಾರರೊಂದಿಗೆ ಹೂವಿನ ಕೋಲು ತಿರುಗಾಟ ಮಾಡಿ ಬಣ್ಣದ ಲೋಕಕ್ಕೆ ಬಂದರು. ಪ್ರಸಿದ್ಧ ವೇಷಧಾರಿ ಹೇರಂಜಾಲು ವೆಂಕಟರಮಣ ಗಾಣಿಗರಿಂದ ಹೆಜ್ಜೆ ಕಲಿತು ಮಾರಣಕಟ್ಟೆ ಮೇಳಕ್ಕೆ ಸೇರ್ಪಡೆಗೊಂಡು ಯಕ್ಷಗಾನ ಬದುಕು ಆರಂಭಿಸಿದರು. ಗುರು ವೀರಭದ್ರ ನಾಯ್ಕರಿಂದ ಮತ್ತಷ್ಟು ಪರಿಣತಿ ಪಡೆದು ಸೌಕೂರು ,ಹಾಲಾಡಿ, ಮಡಾಮಕ್ಕಿ ,ಮಂದಾರ್ತಿ,ಸಾಲಿಗ್ರಾಮ ,ಕಮಲಶಿಲೆ ಮುಂತಾದ ಮೇಳಗಳಲ್ಲಿ ಸುದೀರ್ಘ‌ ತಿರುಗಾಟ ಮಾಡಿದರು. ಬಭುವಾಹನ ,ಅಭಿಮನ್ಯು,ಲವಕುಶ ,ಚಿತ್ರಸೇನ ,ಶ್ರೀ ಕೃಷ್ಣ ಮುಂತಾದ ವೇಷಗಳಲ್ಲಿ ಮಿಂಚಿದ ಹಿರಿಮೆ ಬೇಲೂ¤ರು ಅವರದು. 1979 ರಲ್ಲಿ ಅಮೆರಿಕಾದಿಂದ ಬಂದು ಯಕ್ಷಗಾನ ಸಂಶೋಧನೆ ಮಾಡಿ ಡಾಕ್ಟರೇಟ್‌ ಪದವಿ ಪಡೆದ ಡಾ| ಮಾರ್ತಾ ಆಸ್ಟಿನ್‌ ಅವರ ತಂಡದಲ್ಲಿದ್ದು ಹಲವು ದೇಶಗಳನ್ನು ಸುತ್ತಿದರು. 

ದಯಾನಂದ ನಾಗೂರು 
ದಯಾನಂದ ನಾಗೂರು 6ನೆ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ಬಳಿಕ ಗುರು ಹೆರಂಜಾಲು ವೆಂಕಟರಮಣ ಗಾಣಿಗರಿಂದ ಯಕ್ಷಗಾನದ ಹೆಜ್ಜೆ ಕಲಿತರು. ಮಾರಣಕಟ್ಟೆ , ಅಮೃತೇಶ್ವರಿ, ಮಂದಾರ್ತಿ, ಸಾಲಿಗ್ರಾಮ, ಇಡಗುಂಜಿ ಮೇಳಗಳಲ್ಲಿ ಬಾಲಗೋಪಾಲ, ಒಡ್ಡೋಲಗದ ವೇಷದ ನಂತರ ಸ್ತ್ರೀ ವೇಷದಲ್ಲಿ ಪ್ರಸಿದ್ಧಿಯನ್ನು ಪಡೆದು ಪ್ರಧಾನ ಸ್ತ್ರೀ ವೇಷಧಾರಿಯಾಗಿ ರಂಗಸ್ಥಳದಲ್ಲಿ ಮೆರೆದರು. ರುಕಾ¾ಂಗದ ಚರಿತ್ರೆಯ ಮೋಹಿನಿ, ಸೀತೆ, ಸೈರೇಂದ್ರಿ, ಪ್ರಭಾವತಿ, ಪ್ರಮೀಳೆ ಮುಂತಾದವುಗಳ‌ಲ್ಲಿ ತಮ್ಮದೇ ಛಾಪನ್ನು ಒತ್ತಿದರು.ಡಾ| ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿ ವಿದೇಶಗಳಲ್ಲಿ ಪ್ರದರ್ಶನ ನೀಡಿದ ಹಿರಿಮೆಯಿದೆ. 

ದಯಾನಂದ ಬಳ್ಕೂರು 

Advertisement

Udayavani is now on Telegram. Click here to join our channel and stay updated with the latest news.

Next