Advertisement
ಪುರಸಭೆಗೆ ಸೇರಿದ 82 ವಾಣಿಜ್ಯ ಮಳಿಗೆಗಳ ಪೈಕಿ ಕಚೇರಿ ಮುಂಭಾಗದಲ್ಲಿರುವ 19 ಮಳಿಗೆಗಳನ್ನು ನೆಲಸಮ ಮಾಡಿ, ಆ ಜಾಗದಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿ ಮಳಿಗೆಗಳನ್ನು ಮರು ಹಂಚಿಕೆ ಮಾಡುವ ಸಂಬಂಧ ಶುಕ್ರವಾರ ಶಾಸಕ ಸಿ.ಎಸ್ .ಪುಟ್ಟರಾಜು ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ಸಭೆ ಪುರಸಭೆ ಆವರಣದಲ್ಲಿ ಕರೆಯಲಾಗಿತ್ತು.
Related Articles
Advertisement
ಮೂರು ದಿನ ಅವಕಾಶ ನೀಡಿ: ವಾಣಿಜ್ಯ ಮಳಿಗೆಗಳ ಬಾಗಿಲು ಬಂದ್ ಮಾಡಿಸುವ ಅಧಿಕಾರಿಗಳ ದಿಢೀರ್ ನಿರ್ಧಾರದಿಂದ ಕಂಗೆಟ್ಟ ವ್ಯಾಪಾರಸ್ಥರು, ಬಳಿಕ ಸಭೆಗೆ ಹಾಜರಾಗಿ ತಮ್ಮ ಅಳಲನ್ನು ತೋಡಿಕೊಂಡು, ಮೂರು ದಿನ ಅವಕಾಶ ನೀಡುವಂತೆ ಅಧಿ ಕಾರಿಗಳು ಮತ್ತು ಶಾಸಕ ಬಳಿ ಮನವಿ ಮಾಡಿಕೊಂಡರು.
ಯಾರಿಗೂ ಮೋಸ ಮಾಡುವ ಉದ್ದೇಶವಿಲ್ಲ: ಈ ವೇಳೆ ಶಾಸಕ ಸಿ.ಎ.ಸ್.ಪುಟ್ಟರಾಜು ಮಾತನಾಡಿ, ಪುರಸಭೆ ಆಡಳಿತ ಮಂಡಳಿ ಪಕ್ಷಾತೀತವಾಗಿ ಕೈಗೊಂಡಿರುವ ನಿರ್ಧಾರದಂತೆ ವಾಣಿಜ್ಯ ಮಳಿಗೆ ತೆರವು ಮಾಡಿಸಿ, ಮರು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ವ್ಯಾಪಾರಸ್ಥರು ಸಹಕರ ನೀಡಬೇಕು. ಇದರಲ್ಲಿ ಯಾರಿಗೂ ಮೋಸ ಮಾಡುವ ಉದ್ದೇಶವಿಲ್ಲ ಎಂದು ಹೇಳಿದರು.
ಪೊಲೀಸ್ ಭದ್ರತೆಯಲ್ಲಿ ನೆಲಸಮ: ಮೂಲ ವ್ಯಾಪಾರಸ್ಥರು ಯಾರಿದ್ದಾರೋ ಅವರಿಗೆ ಮಳಿಗೆ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಪುರಸಭೆ ಆದಾಯವೂ ಹೆಚ್ಚಲಿದೆ. ನಮ್ಮ ತೀರ್ಮಾನಕ್ಕೆ ಬೆಲೆಕೊಡದಿದ್ದರೆ ಜೆಸಿಬಿ ಯಂತ್ರದ ಮೂಲಕ ಪೊಲೀಸ್ ಬಿಗಿಭದ್ರತೆ ಯಲ್ಲಿ ನೆಲಸಮ ಮಾಡಲಾಗುವುದು ಎಂದು ಎಚ್ಚರಿಸಿದರು.
ಸರ್ವೆ ಮಾಡಿಸಿ ತೆರವು: ವಾಣಿಜ್ಯ ಮಳಿಗೆಗಳು ಸಂತೆಮೈದಾನಕ್ಕೆ ಹೊಂದಿ ಕೊಂಡಂತೆ ಇದ್ದು, ಒತ್ತುವರಿಯಾಗಿದೆ. ಒತ್ತುವರಿದಾರರು ಯಾವುದೇ ಪಕ್ಷವಾದರೂ ಸರಿಯೇ ಮೂಲಾಜಿಲ್ಲದೇ ತೆರವು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಸಂತೆ ಮೈದಾನ ನಾಲ್ಕು ಎಕರೆ ಜಾಗ ಒತ್ತುವರಿಯನ್ನು ಸರ್ವೆ ಮಾಡಿಸಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಒಳಚರಂಡಿ ಮಲಿನ ನೀರು ಸಂಸ್ಕರಣಾ ಘಟಕಕ್ಕೆ ಪಕ್ಕದಲ್ಲಿರುವ ಜಮೀನಿಗೆ ತೊಂದರೆ, ಆಟೋ ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಿಗೆ ಪುರಸಭೆ ವಿಧಿ ಸಿರುವ ಸುಂಕ ರದ್ದತಿ, ನೀರುಗಂಟಿಗಳ ಮಾಸಿಕ ಸಂಬಳ ಪಾವತಿ ಸೇರಿ ಹತ್ತು ಹಲವು ವಿಚಾರಗಳು ಚರ್ಚೆಗೆ ಬಂದವು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಎಸ್.ಎಲ್.ನಯನಾ, ಪುರಸಭೆ ಮುಖ್ಯಾಧಿಕಾರಿ ವೀಣಾ, ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ಸದಸ್ಯರಾದ ಮಹಾತ್ಮಗಾಂಧಿ ನಗರ ಚಂದ್ರು, ಪಾರ್ಥ ಸಾರಥಿ, ಜಯಲಕ್ಷ್ಮಮ್ಮ, ಆರ್.ಸೋಮ ಶೇಖರ್, ಎಲ್.ಅಶೋಕ್, ಎಚ್.ಡಿ.ಶ್ರೀಧರ, ಡೇರಿ ರಾಮು, ಶ್ರೀನಿವಾಸ ನಾಯಕ, ಜೆಡಿಎಸ್ ಎಸ್‌ಸಿ ಘಟಕದ ಕಾರ್ಯಾಧ್ಯಕ್ಷ ಚಂದ್ರು ಇತರರು ಉಪಸ್ಥಿತರಿದ್ದರು.